ಕಾರ್ಕಳ : ಜುಲೈ 17:ಮಾಜಿ ಸಚಿವರು ಹಾಗೂ ಕಾರ್ಕಳ ಶಾಸಕರಾದ ವಿ.ಸುನಿಲ್ ಕುಮಾರ್ ಅವರ ತೀರ್ಥರೂಪರು, ನಿವೃತ್ತ ಶಿಕ್ಷಕರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿದ ಹಿರಿಯರಾದ ಎಂ.ಕೆ. ವಾಸುದೇವ (87 ವರ್ಷ) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು (ಜು. 17) ನಿಧನರಾಗಿದ್ದಾರೆ.
ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಇಂದು ಮಧ್ಯಾಹ್ನ ಗಂಟೆ 12.00ರಿಂದ ಕಾರ್ಕಳ ಶಾಸಕರ ನಿವಾಸ (ಕಲಂಬಾಡಿ ಪದವು)ದಲ್ಲಿ ನಡೆಯಲಿದ್ದು, ಸಂಜೆ ಗಂಟೆ 4.00ಕ್ಕೆ ಅಂತಿಮ ವಿಧಿ ವಿಧಾನಗಳು ನಡೆಯಲಿವೆ.