ವಡೋದರಾ, ಜುಲೈ 09: ಗುಜರಾತ್ನ ವಡೋದರಾ ಜಿಲ್ಲೆಯಲ್ಲಿ ವಡೋದರಾ ಹಾಗೂ ಆನಂದ್ ಸಂಪರ್ಕಿಸುವ ‘ಗಂಭೀರ’ ಸೇತುವೆ ಕುಸಿದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಹಲವು ವಾಹನಗಳು ನದಿಗೆ ಬಿದ್ದಿದೆ.
ಸೇತುವೆಯ ಮೇಲಿನ ಸಂಚಾರದ ಪ್ರಮಾಣವನ್ನು ಪರಿಗಣಿಸಿ, ಸಿಎಂ ಮೂರು ತಿಂಗಳ ಹಿಂದೆ 212 ಕೋಟಿ ರೂ.ಗಳ ಹೊಸ ಸೇತುವೆಗೆ ಅನುಮೋದನೆ ನೀಡಿದ್ದರು. ಹೊಸ ಸೇತುವೆಯ ವಿನ್ಯಾಸ ಮತ್ತು ಟೆಂಡರ್ ಕಾರ್ಯ ಈಗಾಗಲೇ ಪ್ರಾರಂಭವಾಗಿತ್ತು. ಘಟನೆಯ ನಂತರ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ತಕ್ಷಣವೇ ಮುಖ್ಯ ಎಂಜಿನಿಯರ್, ಸೇತುವೆ ವಿನ್ಯಾಸ ತಂಡ ಮತ್ತು ತಜ್ಞರನ್ನು ಸ್ಥಳಕ್ಕೆ ರವಾನಿಸಿ ವಿವರವಾದ ವರದಿಯನ್ನು ನೀಡುವಂತೆ ಆದೇಶಿಸಿದರು.
2017 ರಲ್ಲಿ, ಸೇತುವೆಯ ಸ್ಥಿತಿ ಹದಗೆಟ್ಟಿರುವುದರಿಂದ ಭಾರೀ ವಾಹನಗಳಿಗೆ ಪ್ರವೇಶವನ್ನು ನಿಷೇಧಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿತ್ತು.