Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಅಗ್ನಿಪಥ್ ನೇಮಕಾತಿ ರ‍್ಯಾಲಿ: ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಆರಂಭ, 15,000 ಅಭ್ಯರ್ಥಿಗಳು ಪಾಲು…!!

Dhrishya News by Dhrishya News
30/01/2026
in ಸುದ್ದಿಗಳು
0
ಅಗ್ನಿಪಥ್ ನೇಮಕಾತಿ ರ‍್ಯಾಲಿ: ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಆರಂಭ, 15,000 ಅಭ್ಯರ್ಥಿಗಳು ಪಾಲು…!!
0
SHARES
2
VIEWS
Share on FacebookShare on Twitter

ಮೂಡುಬಿದಿರೆ ಜ. 30:ಅಗ್ನಿಪಥ್ ನೇಮಕಾತಿ ರ‍್ಯಾಲಿ ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಫೆಬ್ರವರಿ 14ರವರೆಗೆ ನಡೆಯಲಿದೆ; 10 ದಿನಗಳಲ್ಲಿ 15,000 ಮಂದಿ ಅಭ್ಯರ್ಥಿಗಳ ಭಾಗವಹಿಸುವಿಕೆ ನಿರೀಕ್ಷೆ

ಸ್ವರಾಜ್ಯ ಮೈದಾನವು ಅಗ್ನಿಪಥ್ ಯೋಜನೆಯಡಿ ನಡೆಯಲಿರುವ ಭಾರತೀಯ ಸೇನೆಯ ನೇಮಕಾತಿ ರ‍್ಯಾಲಿಗಾಗಿ ಸಂಪೂರ್ಣ ಸಿದ್ಧವಾಗಿದೆ. ಶುಕ್ರವಾರ ಬೆಳಗ್ಗೆ 3 ಗಂಟೆಯಿಂದ ಪ್ರಕ್ರಿಯೆ ಆರಂಭವಾಗಿದ್ದು, ರಾಜ್ಯದ 11 ಜಿಲ್ಲೆಗಳಿಂದ ಪ್ರತಿದಿನ ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟು 10 ದಿನಗಳಲ್ಲಿ ಸುಮಾರು 15,000 ಅಭ್ಯರ್ಥಿಗಳು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನೇಮಕಾತಿ ಅಧಿಕಾರಿಗಳು ತಿಳಿಸಿದ್ದಾರೆ.

ರ‍್ಯಾಲಿಯಲ್ಲಿ ಮೊದಲ ಹಂತವಾಗಿ ದೈಹಿಕ ಪರೀಕ್ಷೆ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ಹಂತ ದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಆಯೋಜಕರು ಕಲ್ಪಿಸಿದ್ದಾರೆ. ಮುಂದಿನ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಯ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ರ್ಯಾಲಿಗೆ ಕೈಜೋಡಿಸಿವೆ.

ನೇಮಕಾತಿ ರ‍್ಯಾಲಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಂಪೂರ್ಣ ಸಹಕಾರ ನೀಡುತ್ತಿದ್ದು, ವಿದ್ಯಾಗಿರಿ ಆವರಣದಲ್ಲಿ ವಸತಿ ವ್ಯವಸ್ಥೆ ಸ್ವಯಂಸೇವಕರ ನಿಯೋಜನೆ, ಸಿಂಥೆಟಿಕ್ ಟ್ರಾಕ್‌ನಲ್ಲಿ ರನ್ನಿಂಗ್ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಆಳ್ವಾಸ್ 150 ಮಂದಿ ಎನ್‌ಸಿಸಿ, ಎನ್‌ಎಸ್‌ಎಸ್ ಸ್ವಯಂಸೇವಕರು, 25 ಸಿಬ್ಬಂದಿಗಳು ರ‍್ಯಾಲಿಗೆ ಶ್ರಮಿಸುತ್ತಿದ್ದಾರೆ.

ವಿದ್ಯಾಗಿರಿಯಲ್ಲಿ ಅಭ್ಯರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಕುಡಿಯುವ ನೀರು, ಶೌಚಾಲಯ, ಆರೋಗ್ಯ ಸೇವೆ, ಸಂಚಾರ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಆಹಾರ ವಸ್ತುಗಳನ್ನು ಸರ್ಕಾರ ಒದಗಿಸಿದ್ದು, ಶುಚಿರುಚಿಯಾಗಿ ಆಳ್ವಾಸ್‌ನ ತಂಡ ತಯಾರಿಸಲಿದೆ ಎಂದು ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ ಮಾಹಿತಿ ನೀಡಿದ್ದಾರೆ.

Previous Post

ಮಲೆನಾಡಿನಲ್ಲಿ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ 9 ಪ್ರಕರಣಗಳು ದಾಖಲು…!!

Next Post

ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ

ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಣಿಪಾಲ :ಯುವಕ ನಾಪತ್ತೆ ಪ್ರಕರಣ ದಾಖಲು

ಕೊಡವೂರು :ವ್ಯಕ್ತಿ ನಾಪತ್ತೆ..!

15/06/2026
ಗೃಹಲಕ್ಷ್ಮಿ ಯೋಜನೆ : ಅನರ್ಹರ ಖಾತೆಗಳಿಗೆ ಹಣ ಸ್ಥಗಿತ..!

ಗೃಹಲಕ್ಷ್ಮಿ ಯೋಜನೆ : ಅನರ್ಹರ ಖಾತೆಗಳಿಗೆ ಹಣ ಸ್ಥಗಿತ..!

15/06/2026
ಉಡುಪಿಯಲ್ಲಿ  ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ

ಉಡುಪಿಯಲ್ಲಿ  ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ

15/06/2026
ಸನ್ಮಾನ ಅಂತ್ಯವಾಗುವುದಲ್ಲ, ಇನ್ನಷ್ಟು ಬೆಳೆಯುವುದಕ್ಕೆ ಅವಕಾಶ : ಫಾ. ಅನಿಲ್ ಡಿಸೋಜಾ

ಸನ್ಮಾನ ಅಂತ್ಯವಾಗುವುದಲ್ಲ, ಇನ್ನಷ್ಟು ಬೆಳೆಯುವುದಕ್ಕೆ ಅವಕಾಶ : ಫಾ. ಅನಿಲ್ ಡಿಸೋಜಾ

14/06/2026

Recent News

ಮಣಿಪಾಲ :ಯುವಕ ನಾಪತ್ತೆ ಪ್ರಕರಣ ದಾಖಲು

ಕೊಡವೂರು :ವ್ಯಕ್ತಿ ನಾಪತ್ತೆ..!

15/06/2026
ಗೃಹಲಕ್ಷ್ಮಿ ಯೋಜನೆ : ಅನರ್ಹರ ಖಾತೆಗಳಿಗೆ ಹಣ ಸ್ಥಗಿತ..!

ಗೃಹಲಕ್ಷ್ಮಿ ಯೋಜನೆ : ಅನರ್ಹರ ಖಾತೆಗಳಿಗೆ ಹಣ ಸ್ಥಗಿತ..!

15/06/2026
ಉಡುಪಿಯಲ್ಲಿ  ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ

ಉಡುಪಿಯಲ್ಲಿ  ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ

15/06/2026
ಸನ್ಮಾನ ಅಂತ್ಯವಾಗುವುದಲ್ಲ, ಇನ್ನಷ್ಟು ಬೆಳೆಯುವುದಕ್ಕೆ ಅವಕಾಶ : ಫಾ. ಅನಿಲ್ ಡಿಸೋಜಾ

ಸನ್ಮಾನ ಅಂತ್ಯವಾಗುವುದಲ್ಲ, ಇನ್ನಷ್ಟು ಬೆಳೆಯುವುದಕ್ಕೆ ಅವಕಾಶ : ಫಾ. ಅನಿಲ್ ಡಿಸೋಜಾ

14/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved