ಕಾಪು:ಜುಲೈ 08 :ಪಡುಕುತ್ಯಾರಿನ ಮೂಲಮಠದಲ್ಲಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದ ಪೀಠಾಧೀಶ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಯವರ 21 ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯು ಜು. 10 ರಂದು ನಡೆಯಲಿದೆ.
,ಜು. 10ರಿಂದ ಸೆ. 7ರವರೆಗೆ ವ್ರತಾಚರಣೆಯ ಕಾರ್ಯಕ್ರಮಗಳಿವೆ. ಜು. 10ರಂದು ಚಾತುರ್ಮಾಸ್ಯ ಆರಂಭಗೊಳ್ಳಲಿದ್ದು ಜು. 22ರಂದು ಜಗದ್ಗುರುಗಳ ಜನ್ಮವರ್ಧಂತಿ, ಸೆ. 7ರಂದು ಚಾತುರ್ಮಾಸ್ಯ ಸಮಾ ರೋಪ ಸಮಾರಂಭ ನಡೆಯಲಿದೆ. ಮಾತೃವಂದನೆ, ಯುವ ಗೋಷ್ಠಿ ಮತ್ತು ವಿಚಾರ ಸಂಕಿರಣ, ರಾಶಿ ಪೂಜೆ, ವಿಶ್ವಕರ್ಮ ಯಜ್ಞವನ್ನು ಹಮ್ಮಿಕೊಳ್ಳಲಾಗಿದೆ .
ನಿತ್ಯವೂ ಬೆಳಗ್ಗೆ ಮತ್ತು ಸಂಜೆ ದುರ್ಗಾ ನಮಸ್ಕಾರ ಪೂಜೆ ಸಂಕಲ್ಪ, ಭಜನೆ, ಗುರುಪಾದುಕಾ ಪೂಜೆ, ಆಶೀರ್ವಚನ, ಗುರುಗಳ ಸಂದರ್ಶನ ಮತ್ತಿತರ ಕಾರ್ಯಕ್ರಮಗಳಿವೆ
ಈ ಅವಧಿಯಲ್ಲಿ ಸಮಾಜದ ಪ್ರತೀ ಮನೆಯವರಿಂದಲೂ ಗುರುಪಾದುಕಾ ಪೂಜೆ ನಡೆಸುವಂತೆ ಸಂಕಲ್ಪಿಸಿದ್ದು, 10 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪಾದಪೂಜೆ ಸೇವೆ ನಿರೀಕ್ಷಿಸಲಾಗುತ್ತಿದೆ. ರವಿವಾರ, ಗುರುವಾರಗಳಂದು ಭಕ್ತಾದಿಗಳ ಅನುಕೂಲಕ್ಕೆ ನಿರಂತರ ಗುರು ಪಾದುಕಾ ಪೂಜೆ ಇರಲಿದೆ. ನಿತ್ಯವೂ ಬೆಳಗ್ಗೆ 8 ಕ್ಕೆ ಮತ್ತು ಸಂಜೆ 5.30ಕ್ಕೆ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ.
ಜು. 22ರಂದು ಗುರುಗಳ ಜನ್ಮ ವರ್ಧ ರೊಂತಿಯಂದು ಅವರ ತುಲಾಭಾರ ಸೇವೆ ನಡೆಯಲಿದೆ. ಅದೇ ದಿನ ಸಮಾಜದ ಯುವ ಸಾಧಕರಿಗೆ ಗೌರವಾರ್ಪಣೆ, ಶೇ. 95 ಕ್ಕಿಂತ ಹೆಚ್ಚು ಅಂಕಗಳಿಸಿದ ಎಸೆಸಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಪಿಎಚ್‌ಡಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ನಡೆಯಲಿದೆ