ಜ. 30:ಸಂಗೀತದ ಮಾಂತ್ರಿಕ ಹಾಗೂ ಪ್ರಸಿದ್ಧ ಗಾಯಕ ಅರಿಜಿತ್ ಸಿಂಗ್ ಅವರು ತಮ್ಮ ಹಿನ್ನೆಲೆ ಗಾಯನದಲ್ಲಿ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಈ ನಿರ್ಧಾರವನ್ನು ಅವರು ಸೋಷಿಯಲ್ ಮೀಡಿಯಾ ಮೂಲಕ ಪ್ರೇಕ್ಷಕರಿಗೆ ತಿಳಿಸಿದ್ದಾರೆ. ಈಗಿನಿಂದ ಅವರು ಹಿನ್ನೆಲೆ ಹಾಡುಗಳ ಯಾವುದೇ ಹೊಸ ಪ್ರಾಜೆಕ್ಟ್‌ಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅರಿಜಿತ್ ಸಿಂಗ್ ತಮ್ಮ ಪತ್ರಿಕೆಯಲ್ಲಿ, “ಈವರೆಗೂ ನನ್ನ ಸಂಗೀತಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ. ನಾನು ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳುತ್ತಿದ್ದರೂ, ಸಂಗೀತ ಸಂಯೋಜನೆ ಮತ್ತು ರಚನೆ ಕಾರ್ಯವನ್ನು ಮುಂದುವರಿಸುತ್ತೇನೆ” ಎಂದು ತಿಳಿಸಿದ್ದರು.
38 ವರ್ಷಗಳ ಹಿನ್ನಲೆ ಗಾಯನ ಜೀವನದ ಬಳಿಕ ಅವರು ನೀಡಿದ ಈ ನಿರ್ಧಾರವು ಭಾರತೀಯ ಸಂಗೀತ ಲೋಕದಲ್ಲಿ ಭಾರೀ ಆಘಾತ ಸೃಷ್ಟಿಸಿದೆ. ಅವರು ‘ಕೇಸರಿಯಾ’, ‘ದೇಸ್ ಮೇರೆ’, ‘ಹಮಾರೆ ಅಧೂರಿ ಕಹಾನಿ’ ಸೇರಿದಂತೆ ಅನೇಕ ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಇನ್ನು ಕೆಲವು ಬಾಕಿ ಪ್ರಾಜೆಕ್ಟ್‌ಗಳು ಈ ವರ್ಷ ಬಿಡುಗಡೆಗೆ ಸಿದ್ಧವಾಗಿವೆ.






