ಉಡುಪಿ:ಜುಲೈ 07 :ದೊಡ್ಡನ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಕಪಿಲ ಮಹರ್ಷಿಗಳ ದಿವ್ಯ ಸಾನಿಧ್ಯವಾದ ಗಾಯತ್ರಿ ಧ್ಯಾನಪೀಠದಲ್ಲಿ ಗುರುಪೂರ್ಣಿಮೆ ಯನ್ನು ಕ್ಷೇತ್ರದ ಗುರುಗಳಾದ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಭಕ್ತ ಸಮೂಹದ ಸಹಕಾರದೊಂದಿಗೆ ಆಚರಿಸಲಾಗುವುದು..
ಇದೇ ಜುಲೈ ತಿಂಗಳ ತಾರೀಕು ಹತ್ತರ ಗುರುವಾರದಂದು ಮಹರ್ಷಿ ವೇದವ್ಯಾಸರ ಜನ್ಮದಿನವನ್ನು ಗುರು ಹುಣ್ಣಿಮೆಯನ್ನಾಗಿ ಆಚರಿಸಲಾಗುತ್ತದೆ.. ನಮ್ಮ ಜೀವನದಲ್ಲಿ ನಮಗೆ ಗುರುಗಳಾಗಿ ಮಾರ್ಗದರ್ಶನವನ್ನು ನೀಡಿ ಅಂದಕಾರದಿಂದ ಬೆಳಕಿನತ್ತ ಸಾಗುವಲ್ಲಿ ದಾರಿದೀಪವಾದ ಗುರುಗಳನ್ನು ಗೌರವಿಸಿ ಗುರು ನಮನವನ್ನು ಸಲ್ಲಿಸುವುದು ಸನಾತನ ಪರಂಪರೆಯಲ್ಲಿ ಒಂದಾಗಿದೆ…
ಆ ಪ್ರಯುಕ್ತ ಕ್ಷೇತ್ರದಲ್ಲಿ ಮನ್ಯು ನಾಮಕ ಲಕ್ಷ್ಮೀನರಸಿಂಹ ಯಾಗವನ್ನು ಹಮ್ಮಿಕೊಳ್ಳಲಾಗಿದೆ.. ಪ್ರಜ್ಞಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ನೃತ್ಯಾರ್ತಿಗಳಿಂದ ನೃತ್ಯ ಸೇವೆ, ಗಾನ ಸೇವೆಗಳು ನೆರವೇರಲಿದ್ದು ಅಸಂಖ್ಯಾತ ಭಕ್ತ ಸಮೂಹವನ್ನು ಹೊಂದಿರುವ ಶ್ರೀ ರಮಾನಂದ ಗುರೂಜಿಯವರನ್ನು ಅಂದು ಗೌರವಿಸಿ ಅನುಗ್ರಹ ಫಲ ಮಂತ್ರಾಕ್ಷತೆಯನ್ನು ಭಕ್ತರುಗಳು ಸ್ವೀಕರಿಸಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ