ಕಾರ್ಕಳ : ಜುಲೈ 06:ಕಾರ್ಕಳ ಪುರಸಭೆಯ ವ್ಯಾಪ್ತಿಯಲ್ಲಿರುವ ಆನೆಕೆರೆ ತಾವರೆ,ವೃತ್ತದ ಬಳಿಯ ರಸ್ತೆಯು ಹೊಂಡ ಗುಂಡಿಗಳಿಂದ ಹಲವಾರು ದ್ವಿಚಕ್ರ ವಾಹನ ಹಾಗೂ ಇತರ ವಾಹನ ಸಂಚಾರ ಮತ್ತು ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ
ಅದನ್ನು ಕಂಡ ಕಾರ್ಕಳ, ಆನೆಕೆರೆ ಯ ನವಜ್ಯೋತಿ ಫ್ರೆಂಡ್ಸ್ ,(ರಿ) ಇದರ ವತಿಯಿಂದ ಶ್ರೀಕಾಂತ್ ಭಾಗವತ್ ಇವರ ನೇತೃತ್ವದಲ್ಲಿ ಜುಲೈ 6ರಂದು ಸಂಘದ ಅಧ್ಯಕ್ಷರಾದ ಗೌತಮ್,ಕಾರ್ಯದರ್ಶಿ ರಂಜಿತ್ , ಕೋಶಾಧಿಕಾರಿ ಶ್ರೀಕಾಂತ್, ನಿರ್ದೇಶಕರಾದ ಹರೀಶ್ ದೇವಾಡಿಗ ಹಾಗೂ ಇನ್ನಿತರ ಸಂಘದ ಸದಸ್ಯರು ರಸ್ತೆ ದುರಸ್ತಿ ಕಾರ್ಯ ನಿರ್ವಹಿಸಿದರು.