ಉಡುಪಿ: ಜುಲೈ 01: ಹನ್ನೊಂದು ವರ್ಷದ ಬಾಲಕ ಕಡಿಮೆ ಅವಧಿಯಲ್ಲಿ ವೇಗವಾಗಿ ಸ್ಕಿಪ್ಪಿಂಗ್ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರು ಮೂಡಿಸಿದ್ದಾನೆ.
ಹೌದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ವಂಡಾರಿನ ಧನುಷ್ ಶೆಟ್ಟಿ ಕಡಿಮೆ ಅವಧಿಯಲ್ಲಿ ವೇಗವಾಗಿ ಸ್ಕಿಪ್ಪಿಂಗ್ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ಮೂಡಿಸಿದ ಬಾಲಕ
ವಂಡಾರು ಗ್ರಾಮದ ದೀಪಾ ಶೆಟ್ಟಿ ಮತ್ತು ಆನಂದ್ ಶೆಟ್ಟಿ ದಂಪತಿಯ ಪುತ್ರನಾಗಿರುವ ಧನುಷ್ ಕೊಕ್ಕರ್ಣೆಯ ದುರ್ಗಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದಾನೆ.ಈತ 9 ನಿಮಿಷ 33 ಸೆಕೆಂಡ್ನಲ್ಲಿ ನಿರಂತರ 1477 ಬಾರಿ ಸ್ಕಿಪ್ಪಿಂಗ್ ಮಾಡುವ ಮೂಲಕ ಧನುಷ್ ದಾಖಲೆ ಮಾಡಿದ್ದಾನೆ.