ಕಾರ್ಕಳ: ಜೂನ್ 30:ಬೆಳ್ಮಣ್ಣ್ ಗ್ರಾಮೀಣ ಕಾಂಗ್ರೇಸ್ ಸಮಿತಿ ಪುನರ್ ಸಭೆಯು ದಿನಾಂಕ 29 ಅದಿತ್ಯವಾರ ಸಂಜೆ 5 ಘಂಟೆಗೆ ಬೆಳ್ಮಣ್ಣ್ ಉಮೇಶ್ ಶೆಟ್ಟಿಯವರ ಮನೆಯಲ್ಲಿ ಗ್ರಾಮೀಣ ಸಮಿತಿ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾಂಗ್ರೆಸ್ ಮುಖಂಡರಾದ ಉದಯ್ ಶೆಟ್ಟಿ ಮುನಿಯಾಲು, ಬ್ಲಾಕ್ ಅಧ್ಯಕ್ಷರಾದ ಶುಭದರಾವ್, ಪಕ್ಷ ಸಂಘಟನೆಯ ಬಗ್ಗೆ ಮಾರ್ಗದರ್ಶನ ನೀಡಿದರು.
ಗ್ರಾಮೀಣ ಸಮಿತಿಯ ವಿವಿಧ ಘಟಕಗಳಿಗೆ ನೂತನ ಅಧ್ಯಕ್ಷರುಗಳನ್ನು ಹಾಗೂ 6 ಬೂತ್ ಗಳಿಗೆ ನೂತನ ಅಧ್ಯಕ್ಷರುಗಳನ್ನು ನೇಮಕ ಮಾಡಿ ಜವಾಬ್ದಾರಿಯನ್ನು ನೀಡಿ ಪೂರ್ಣ ಪ್ರಮಾಣದ ಸಮಿತಿ ರಚನೆಯ ನಂತರ ಬೆಳ್ಮಣ್ಣ್ ವಲಯ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಸುವ ಬಗ್ಗೆ ನಿರ್ಧರಿಸಲಾಯಿತು.
ಈ ಸಂದರ್ಬದಲ್ಲಿ ರಾಜ್ಯ ಕೃಷಿ ಘಟಕದ ಕಾರ್ಯದರ್ಶಿ ಉದಯ್ ಶೆಟ್ಟಿ, ಹಿಂದುಳಿದ ಘಟಕದ ಅಧ್ಯಕ್ಷ ಅನಿಲ್ ಪೂಜಾರಿ, ಕಾನೂನು ಘಟಕದ ಅಧ್ಯಕ್ಷ ರೆಹಮ್ಮತ್ತುಲಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್, ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅನಿತಾ ಡಿ’ಸೋಜಾ, ಮಾಜಿ ಜಿ.ಪಂ. ಸದಸ್ಯ ಸುಪ್ರೀತ್ ಶೆಟ್ಟಿ, ಸ್ಥಳೀಯ ನಾಯಕ ಉಮೇಶ್ ಶೆಟ್ಟಿ, ಶುಭಕರ್ ನಂದಳಿಕೆ, ಹೇಮಂತ್ ಆಚಾರ್ಯ, ಗ್ರಾ.ಪಂ ಸದಸ್ಯ ಪೌಸ್ಟೀನ್, ಗ್ರಾಮೀಣ ಕಾಂಗ್ರೆಸ್ ಹಿರಿಯ ಕಿರಿಯ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ವಲಯ ಉಸ್ತುವಾರಿ ಕುಶ ಮೂಲ್ಯ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ನಿರೂಪಿಸಿ, ಅಜಿತ್ ಸೂಡ ಧನ್ಯವಾದವಿತ್ತರು.








