ಉಡುಪಿ : ಜೂನ್ 19:ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಗಳಲ್ಲಿ ಉಡುಪಿ ಎಸ್ ಪಿ ಆಯಾ ವ್ಯಾಪ್ತಿಯ ಠಾಣಾಧಿಕಾರಿಗಳಿಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸರು ಇಂದು ಗುರುವಾರ ಮುಂಜಾನೆಯಿಂದ ಶಾಲಾ ವಿದ್ಯಾರ್ಥಿಗಳು ಬರುವ ಆಟೋರಿಕ್ಷಾ, ಖಾಸಗಿ ವಾಹನ, ಸ್ಕೂಲ್ ಬಸ್, ದ್ವಿಚಕ್ರ ವಾಹನಗಳನ್ನು ಪರಿಶೀಲನೆ ನಡೆಸಿದರು.
ಶಾಲಾ ವಾಹನ, ಆಟೋ ರಿಕ್ಷಾ ಹಾಗೂ ಇತರ ವಾಹನಗಳ ತಪಾಸಣೆ, ದಾಖಲೆಗಳ ಪರಿಶೀಲನೆ, ಸುರಕ್ಷತಾ ಕ್ರಮಗಳ ಪರಿಶೀಲನೆ ಕುರಿತು ಸ್ಪೆಷಲ್ ಡ್ರೈವ್ ಕೈಗೊಳ್ಳಲಾಯಿತು. ಸೂಕ್ತ ದಾಖಲೆಗಳು ಹಾಗೂ ಸುರಕ್ಷತಾ ಕ್ರಮಗಳು ಇಲ್ಲದ ವಾಹನಗಳ ಮೇಲೆ ಹಾಗೂ ನಿಯಮಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ತುಂಬಿದ್ದು ಕಂಡು ಬಂದಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ ಅಲ್ಲದೇ ಎರಡಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಬರುವ ದ್ವಿಚಕ್ರ ವಾಹನ ಸವಾರರಿಗೂ ಸೂಚನೆ ನೀಡುತ್ತಿದ್ದಾರೆ.