ಬೆಂಗಳೂರು : ಜೂನ್ 19: ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸುವ ಉದ್ದೇಶದಿಂದ ಹಿಂದುಳಿದ ವರ್ಗಗಳ ಮಹಿಳೆಯರಿಗೆ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಿದೆ.
ಈ ಯೋಜನೆಗೆ ಸಂಬಂಧಿಸಿದ ಕೆಲವು ಮುಖ್ಯ ಮಾಹಿತಿಗಳು ಈ ಕೆಳಗಿನಂತಿದೆ
* ಉಚಿತ ಹೊಲಿಗೆ ಯಂತ್ರ ಪಡೆಯಲು ಬಳಸುವ ಮಹಿಳೆಯರ ವಯಸ್ಸು 20 ರಿಂದ 40 ವರ್ಷಗಳ ನಡುವೆ ಇರಬೇಕು.
* ಈ ಯೋಜನೆಯ ಲಾಭ ಪಡೆಯುವ ಕೂಲಿ ಕಾರ್ಮಿಕರ ಪತಿಯ ವಾರ್ಷಿಕ ಆದಾಯ ರೂ.12 ಸಾವಿರ ಮೀರಬಾರದು.
* ವಿಧವೆ ಮತ್ತು ಅಂಗವಿಕಲ ಮಹಿಳೆಯರು ಸಹ ಉಚಿತ ಹೊಲಿಗೆ ಯಂತ್ರ ಯೋಜನೆಯ ಲಾಭ ಪಡೆಯಬಹುದು.
* ಅಭ್ಯರ್ಥಿಗಳು ನಿರುದ್ಯೋಗಿಗಳಾಗಿರಬೇಕು. ಅಥವಾ ಗ್ರಾಮೀಣ ಪ್ರದೇಶದಲ್ಲಿ ರೂ. 1.5 ಲಕ್ಷ, ನಗರ ಪ್ರದೇಶಗಳಲ್ಲಿ ರೂ. 2 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಆಧಾರ್ ಕಾರ್ಡ್
ವಯಸ್ಸಿನ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಗುರುತಿನ ಚೀಟಿ
ಅಂಗವೈಕಲ್ಯವಿದ್ದಲ್ಲಿ ವೈದ್ಯಕೀಯ ಪ್ರಮಾಣ ಪತ್ರ
ನಿರ್ಗತಿಕ ವಿಧವೆ ಮಹಿಳೆಯರಿಗೆ ವಿಧವಾ ಪ್ರಮಾಣ ಪತ್ರ
ಸಮುದಾಯ ಪ್ರಮಾಣ ಪತ್ರ
ಮೊಬೈಲ್ ಸಂಖ್ಯೆ ಹಾಗೂ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಗ್ರಾಮವನ್ ಬೆಂಗಳೂರು ವನ್ ಸೇವ ಸಿಂಧು ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ನೀವು ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಲು ಇಚ್ಛಿಸಿದ್ರೆ, ಅಧಿಕೃತ ವೆಬ್ಸೈಟ್ Seva Sindhu 1 / ಗೆ ಭೇಟಿ ನೀಡಿ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನಾಂಕವಾಗಿದೆ.