ಉಡುಪಿ: ಜೂನ್ 12: ಜಿಲ್ಲೆಯಲ್ಲಿರುವ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಶೌಚಾಲಯಗಳು ಸ್ವಚ್ಛವಾಗಿರಿಸದೇ ಹಾಗೂ ಶೌಚಾಲಯಗಳ ದುರಸ್ತಿಯ ಕುರಿತು ಸಾರ್ವಜನಿಕರಿಂದ ಸ್ವೀಕೃತವಾದ ದೂರುಗಳ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್‌ಗಳ ಮಾಲೀಕರು ಈ ಕೆಳಗಿನ ಅಂಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಡಾ ವಿದ್ಯಾಕುಮಾರಿ ಅದೇಶಿಸಿರುತ್ತಾರೆ
1. ಶೌಚಾಲಯಗಳು ಕಡ್ಡಾಯವಾಗಿ ಸ್ವಚ್ಛವಾಗಿರಬೇಕು ಮತ್ತು ಸ್ಯಾನಿಟೈಸರ್, ಟಾಯ್ಲೆಟ್ ಪೇಪರ್ ಮತ್ತು ಇತರ ಅಗತ್ಯ ವಸ್ತುಗಳು ಲಭ್ಯವಿರುವಂತೆ ನೋಡಿಕೊಳ್ಳತಕ್ಕದ್ದು.
2. ಶೌಚಾಲಯಗಳಲ್ಲಿ ಸುಸಜ್ಜಿತವಾದ ನೀರಿನ ಸಂಪರ್ಕ ಹೊಂದಿರಬೇಕು.
3. ಪೆಟ್ರೋಲ್ ಬಂಕ್ ಗೆ ಬರುವ ಗ್ರಾಹಕರಿಗೆ ಮುಕ್ತ ಪ್ರವೇಶವನ್ನು ಕಲ್ಪಿಸಬೇಕು.
4. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾದ ಶೌಚಾಲಯಗಳಿರಬೇಕು.









