Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನದ 8ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ.!!

ಪಣಂಬೂರು ವೆಂಕಟ್ರಾಯ ಐತಾಳ ಸಂಸ್ಮರಣಾ ಯಕ್ಷಗಾನ ಸಪ್ತಾಹ ಮತ್ತು ಅಷ್ಟಾವಧಾನ ಕಾರ್ಯಕ್ರಮ

Dhrishya News by Dhrishya News
12/06/2025
in ಸುದ್ದಿಗಳು
0
0
SHARES
18
VIEWS
Share on FacebookShare on Twitter

ಉಡುಪಿ : ಜೂನ್ 11:: ಪಣಂಬೂರು ವೆಂಕಟ್ರಾಯ ಐತಾಳರು ಕರಾವಳಿಯ ಸಾಂಸ್ಕೃತಿಕ ಕ್ಷೇತ್ರದ ಒಂದು ದೊಡ್ಡ ಹೆಸರು. ಯಕ್ಷಗಾನ ಸರ್ವಾಂಗ ಪರಿಣತ ಕಲಾವಿದ, ಕಲಾಗುರು , ಕಲಾಪೋಷಕ, ಮೇಲ್ಮಟ್ಟದ ಪ್ರತಿಭೆ. ಭಾಗವತಿಕೆ, ಚೆಂಡೆ, ಮದ್ದಳೆ, ವೇಷ ಮತ್ತು ಅರ್ಥದಾರಿಕೆ ಮೂಲಕ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ಮೈ ಗೂಡಿಸಿಕೊಂಡಿದ್ದರು. ಅಲ್ಲದೇ ಪೌರೋಹಿತ್ಯ , ಜ್ಯೋತಿಷ ಕ್ಷೆತ್ರದಲ್ಲಿಯೂ ಅನನ್ಯ ಸಾಧನೆ ಮಾಡಿದವರು. ಅವರ ಸ್ಮರಣಾರ್ಥಕವಾಗಿ ಆರಂಭಗೊಂಡ ಪಣಂಬೂರು ವೆಂಕಟ್ರಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ವು ಸೋದೆ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀ ಪಾದರ ಅನುಗ್ರಹದೊಂದಿಗೆ 2017ರ ಮಾರ್ಚ್ ನಿಂದ ತೆಂಕುತಿಟ್ಟು ಯಕ್ಷಗಾನ ತರಗತಿಯನ್ನು ಆರಂಬಿಸಿತು.    

ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಉಚಿತ ತೆಂಕುತಿಟ್ಟು ಯಕ್ಷಗಾನ ತರಗತಿಯು ಶ್ರೀ ಸೋದೆ ಮಠದ ಯತಿಗಳ ಕೃಪಾಶೀರ್ವಾದದಿಂದ ಯಶಸ್ವೀಯಾಗಿ ಎಂಟು ಸಂವತ್ಸರಗಳನ್ನು ಪೂರೈಸಿದೆ. ಇದರ 8ನೇ ವರ್ಷದ ವಾರ್ಷಿಕೋತ್ಸವ ಮತ್ತು ಪಣಂಬೂರು ವೆಂಕಟ್ರಾಯ ಐತಾಳ ಸಂಸ್ಮರಣಾ ಯಕ್ಷಗಾನ ಸಪ್ತಾಹ ಹಾಗೂ ಅಷ್ಟಾವಧಾನ ಕಾರ್ಯಕ್ರಮವು (ಮದ್ಯಾಹ್ನ 2.30ಕ್ಕೆ) ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ. 15ನೇ ಜೂನ್ 2025ರಂದು ಆದಿತ್ಯವಾರ ಉದ್ಘಾಟನಾ ಕಾರ್ಯಕ್ರಮ ಸಂಜೆ 5. 30 ಗಂಟೆಗೆ ಜರುಗಲಿದೆ.

ಈ ಪ್ರಯುಕ್ತ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಮತ್ತು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಉದ್ಘಾಟನಾ ಸಭಾ ಕಾರ್ಯಕ್ರಮವು ಜರುಗಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ, ಹಿರಿಯ ಯಕ್ಷಗಾನ ಚಿಂತಕರಾದ ಶ್ರೀ ಎಂ ಪ್ರಭಾಕರ ಜೋಶಿ, ಅಷ್ಟಾವಧಾನಿಗಳಾದ ಡಾ ರಾಮಕೃಷ್ಣ ಪೆಜತ್ತಾಯ, ಬಾಳ , ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಶ್ರೀ ಗಂಗಾಧರ ರಾವ್ , ಯಕ್ಷಾನಂದನ , ಪಣಂಬೂರು ಇದರ ಸಂಚಾಲಕರಾದ ಶ್ರೀ ಸಂತೋಷ್ ಐತಾಳ್ , ಕರ್ನಾಟಕ ಬ್ಯಾಂಕ್ ಡಿ ಜಿ ಎಂ ಶ್ರೀ ವಸಂತ್ ಹೇರಳೆ ಭಾಗವಹಿಸಲಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದ ಶ್ರೀ ಕೆ ಗೋವಿಂದ ಭಟ್ , ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊII ಎಂ ಎಲ್ ಸಾಮಗ, ಹಿರಿಯ ಯಕ್ಷಗಾನ ಭಾಗವತರಾದ ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳು, ಹಿರಿಯ ಭಾಗವತರಾದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮತ್ತು ಹಿರಿಯ ಯಕ್ಷಗಾನ ಹಿಮ್ಮೇಳ ಕಲಾವಿದರಾದ ಪದ್ಯಾಣ ಶಂಕರನಾರಾಯಣ ಭಟ್ ಇವರುಗಳು ಗೌರವ ಸಂಮಾನಗೊಳ್ಳಲಿದ್ದಾರೆ . ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಗೋಪಿಕಾ ಮಯ್ಯ ಸದಸ್ಯರಾದ ಶ್ರೀ ಸತೀಶ್ ಮಯ್ಯ , ಶ್ರೀ ಸಿರಿಬಾಗಿಲು ರಾಮಕೃಷ್ಣ ಮಯ್ಯ ಹಾಗೂ ಯಕ್ಷ ಗುರು ಶ್ರೀ ರಾಕೇಶ್ ರೈ ಅಡ್ಕ ಉಪಸ್ಥಿತರಿರುವರು.  

ತದನಂತರ ತೆಂಕುತಿಟ್ಟು ಹಿರಿಯ ಅತಿಥಿ ಕಲಾವಿದರಿಂದ ತಾಮ್ರ ಧ್ವಜ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪ್ರತೀ ದಿನ ಸಂಜೆ 7.00ರಿಂದ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಶ್ರೀ ರಾಕೇಶ್ ರೈ ಅಡ್ಕ ನಿರ್ದೇಶನದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.  

ದಿನಾಂಕ 16 ರಂದು ಸೋಮವಾರ: ಕುಮಾರಿ ಸಿದ್ಧಿ ಜಯದೇವ್ ತಂತ್ರಿ, ಯುಎಸ್ಎ ಇವರಿಂದ ಭರತನಾಟ್ಯ ನಂತರ ಯಕ್ಷಗಾನ ಕರ್ಣ ಪರ್ವ  

ಅತಿಥಿಗಳು : ವಿದುಷಿ ಪ್ರತಿಭಾ ಸಾಮಗ, ಶ್ರೀಮತಿ ಸುಮಂಗಲಾ ರತ್ನಾಕರ & ಶಶಿಧರ ಐತಾಳ್ ,  

17ರಂದು ಮಂಗಳವಾರ: ಗದಾ ಪರ್ವ  

ಅತಿಥಿಗಳು : ಶ್ರೀ ಶ್ರೀಪತಿ ಭಟ್ ಮತ್ತು ಶ್ರೀ ಶಂಕರನಾರಾಯಣ ಮೈರ್ಪಾಡಿ  

18ರಂದು ಬುಧವಾರ: ಮನ್ಮಥೋಪಾಖ್ಯಾನ  

ಅತಿಥಿಗಳು : ಶ್ರೀ ಮಂಜುನಾಥ್ ರಾವ್ ಮತ್ತು ಶ್ರೀ ಶಿವರಾಮ ಪಣಂಬೂರು  

19ರಂದು ಗುರುವಾರ: ಭಾರ್ಗವ ವಿಜಯ  

ಅತಿಥಿಗಳು: ಶ್ರೀ ಸತ್ಯ ಶಂಕರ ಬೊಲ್ಲವ ಮತ್ತು ಶ್ರೀ ಹರಿನಾರಾಯಣ ದಾಸ ಆಸ್ರಣ್ಣ ,  

20ರಂದು ಶುಕ್ರವಾರ :ಸುದರ್ಶನ ಗರ್ವ ಭಂಗ  

ಅತಿಥಿಗಳು : ಹಿರಿಯ ಭಾಗವತರಾದ ವೇದಮೂರ್ತಿ ವೆಂಕಟ್ರಮಣ ಐತಾಳ & ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕರಾದ ಶ್ರೀ ಸುಜಯೆಂದ್ರ ಹಂದೆ  

21ರಂದು ಶನಿವಾರ ಸಂಜೆ 7.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೂಪ ಸಮಾರಂಭವು ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮ ವಿದ್ವಾಂಸರಾದ ವಿII ಕೆ ಪಂಜ ಭಾಸ್ಕರ ಭಟ್ಟ, ಶ್ರೀ ಅಭಯನೃಸಿಂಹ ದೇವಸ್ಥಾನ, ಹಾದಿಗಲ್ಲು ತೀರ್ಥಹಳ್ಳಿ ಇಲ್ಲಿನ ಧರ್ಮದರ್ಶಿಗಳಾದ ಡಾII ಹಾದಿಗಲ್ಲು ಲಕ್ಷ್ಮೀನಾರಾಯಣ , ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾII ಹರಿಕೃಷ್ಣ ಪುನರೂರು , ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಪ್ರವರ್ತಕರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ್ ಇಡಗುಂಜಿ ಮೇಳದ ಸಂಚಾಲಕರಾದ ಕೆರೆಮನೆ ಶಿವಾನಂದ ಹೆಗಡೆ , ಯಕ್ಷಗಾನ ಕಲಾರಂಗದ ಕಾರ್ಯದರ್ಶಿಗಳಾದ ಶ್ರೀ ಮುರಳಿ ಕಡೆಕಾರ್ ಬಾಗವಹಿಸಲಿದ್ದಾರೆ. , ಹಿರಿಯ ಅರ್ಥಧಾರಿ, ಪ್ರಸಂಗಕರ್ತ ಶ್ರೀ ಪೊಳಲಿ ನಿತ್ಯಾನಂದ ಕಾರಂತ್ , ಪ್ರಸಾಧನ ತಜ್ಞ , ಯಕ್ಷ ಗುರು ಶ್ರೀ ಪಿ ವಿ ಪರಮೇಶ್, ಯಕ್ಷಗುರು ರಾಕೇಶ್ ರೈ ಅಡ್ಕ ಇವರು ಗೌರವ ಸಂಮಾನಗೊಳ್ಳಲಿದ್ದಾರೆ . ತದನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ಗಿರಿಜಾ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಳ್ಳಲಿದೆ

 

ಈ ಕಾರ್ಯಕ್ರಮಕ್ಕೆ ಎಲ್ಲಾ ಕಲಾಭಿಮಾನಿಗಳಿಗೆ ಆದರದ ಸ್ವಾಗತವನ್ನು ಪ್ರತಿಷ್ಠಾನದ ಅಧ್ಯಕ್ಷರು , ಸದಸ್ಯರು, ವಿದ್ಯಾರ್ಥಿಗಳು ಮತ್ತು ಪೋಷಕರು ಬಯಸಿದ್ದಾರೆ.

ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನವು 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತೆಂಕುತಿಟ್ಟು ಯಕ್ಷಗಾನ ತರಬೇತಿಯನ್ನು ಸಮರ್ಥ ಗುರು ಶ್ರೀ ರಾಕೇಶ್ ರೈ ಅಡ್ಕ ಇವರ ಮೂಲಕ ಉಚಿತವಾಗಿ ನೀಡುತ್ತಿದೆ. ತರಗತಿ ಪ್ರತಿ ಬುಧವಾರ ಸಂಜೆ 5.30 ರಿಂದ 7.30 ರ ತನಕ ಸೋದೆ ಮಠದಲ್ಲಿ ನಡೆಯುತ್ತಿದೆ. ಈ ವರ್ಷದಿಂದ ಪ್ರತೀ ಶನಿವಾರ ಸಂಜೆ 4.00 ರಿಂದ 7.00 ರ ವರೆಗೆ ತೆಂಕುತಿಟ್ಟು ಚೆಂಡೆ ಮತ್ತು ಮದ್ದಳೆ ತರಗತಿಯನ್ನು ಪ್ರಾರಂಭಿಸುತ್ತಿದೆ. ಹಿರಿಯ ಹಿಮ್ಮೇಳ ಕಲಾವಿದ ಕಟೀಲು ಶ್ರೀ ಮುರಳೀಧರ ಭಟ್ ತರಬೇತಿ ನೀಡಲಿದ್ದಾರೆ. ಇದನ್ನು ಈ ಸಂದರ್ಭದಲ್ಲಿ ಉದ್ಘಾಟನೆ ಮಾಡಲಾಗುವುದು . ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಪ್ರತಿಷ್ಠಾನದ ವತಿಯಿಂದ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9980331294, 9448000531, 9845150802 ಸಂಪರ್ಕಿಸಬಹುದು.

ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಗೋಪಿಕಾ ಮಯ್ಯ, ಶ್ರೀ ಸತೀಶ್ ಮಯ್ಯ ಯಕ್ಷ ಗುರು ಶ್ರೀ ರಾಕೇಶ್ ರೈ ಅಡ್ಕ, ಸದಸ್ಯರು ಗಳಾದ ಡಾ ಸುನೀಲ್ ಮುಂಡ್ಕೂರು, ಶ್ರೀ ನಿರಂಜನ್, ಶ್ರೀ ಮೋಹನ್ ಶೆಟ್ಟಿ, ಶ್ರೀ ರವಿನಂದನ್, ಶ್ರೀಮತಿ ಸ್ನೇಹಾ ಆಚಾರ್ಯ, ಶ್ರೀ ಶಶಿಕಾಂತ್ ಭಟ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Previous Post

ಉಡುಪಿ : ನಿರಂತರ ಮಳೆಯ ಹಿನ್ನಲೆ ನಾಳೆ (ಜೂನ್ 12) ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ,ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ರಜೆ ಘೋಷಣೆ..!!

Next Post

ಉಡುಪಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಕುತ್ಯಾರ್ ನವೀನ್ ಶೆಟ್ಟಿ ಆಯ್ಕೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಕುತ್ಯಾರ್ ನವೀನ್ ಶೆಟ್ಟಿ ಆಯ್ಕೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಯಕ್ಷಗಾನ ರಂಗದ ದಶಾವತಾರಿ, ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್‌ ನಿಧನಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

ಯಕ್ಷಗಾನ ರಂಗದ ದಶಾವತಾರಿ, ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್‌ ನಿಧನಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

21/03/2026
ಮಂಜುನಾಥ ಪೂಜಾರಿಯವರಿಗೆ ಮಾತೃ ವಿಯೋಗ: ಉದಯ ಶೆಟ್ಟಿ ಮುನಿಯಾಲು ಸಂತಾಪ..!!

ಮಂಜುನಾಥ ಪೂಜಾರಿಯವರಿಗೆ ಮಾತೃ ವಿಯೋಗ: ಉದಯ ಶೆಟ್ಟಿ ಮುನಿಯಾಲು ಸಂತಾಪ..!!

21/03/2026
ಕುಕ್ಕೆಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ 35 ಲಕ್ಷ ರೂ. ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಕುಕ್ಕೆಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ 35 ಲಕ್ಷ ರೂ. ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

21/03/2026
ಉಡುಪಿ: ಬನ್ನಂಜೆ ಬಸ್ ನಿಲ್ದಾಣದಲ್ಲಿ ಐದು ವರ್ಷದ ಮಗುವಿನ ರಕ್ಷಣೆ..!

ಉಡುಪಿ: ಬನ್ನಂಜೆ ಬಸ್ ನಿಲ್ದಾಣದಲ್ಲಿ ಐದು ವರ್ಷದ ಮಗುವಿನ ರಕ್ಷಣೆ..!

20/03/2026

Recent News

ಯಕ್ಷಗಾನ ರಂಗದ ದಶಾವತಾರಿ, ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್‌ ನಿಧನಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

ಯಕ್ಷಗಾನ ರಂಗದ ದಶಾವತಾರಿ, ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್‌ ನಿಧನಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

21/03/2026
ಮಂಜುನಾಥ ಪೂಜಾರಿಯವರಿಗೆ ಮಾತೃ ವಿಯೋಗ: ಉದಯ ಶೆಟ್ಟಿ ಮುನಿಯಾಲು ಸಂತಾಪ..!!

ಮಂಜುನಾಥ ಪೂಜಾರಿಯವರಿಗೆ ಮಾತೃ ವಿಯೋಗ: ಉದಯ ಶೆಟ್ಟಿ ಮುನಿಯಾಲು ಸಂತಾಪ..!!

21/03/2026
ಕುಕ್ಕೆಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ 35 ಲಕ್ಷ ರೂ. ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಕುಕ್ಕೆಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ 35 ಲಕ್ಷ ರೂ. ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

21/03/2026
ಉಡುಪಿ: ಬನ್ನಂಜೆ ಬಸ್ ನಿಲ್ದಾಣದಲ್ಲಿ ಐದು ವರ್ಷದ ಮಗುವಿನ ರಕ್ಷಣೆ..!

ಉಡುಪಿ: ಬನ್ನಂಜೆ ಬಸ್ ನಿಲ್ದಾಣದಲ್ಲಿ ಐದು ವರ್ಷದ ಮಗುವಿನ ರಕ್ಷಣೆ..!

20/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved