Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಮೇ 10ರಂದು ಸಾರ್ವತ್ರಿಕ ರಜೆ ಘೋಷಣೆ; ಯಾರಿಗೆ ಅನ್ವಯ ಇಲ್ಲ ..??

Dhrishya News by Dhrishya News
03/05/2023
in ಕರಾವಳಿ, ರಾಜ್ಯ/ ರಾಷ್ಟ್ರೀಯ, ಸುದ್ದಿಗಳು
0
0
SHARES
31
VIEWS
Share on FacebookShare on Twitter

ಬೆಂಗಳೂರು; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನಕ್ಕೆ 7 ದಿನ ಬಾಕಿ ಇದೆ. ಮೇ 10ರ ಬುಧವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ಮತದಾನದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ. ಈ ಕುರಿತು ಕರ್ನಾಟಕ ಸರ್ಕಾರ ಎರಡು ಅಧಿಸೂಚನೆ ಪ್ರಕಟಿಸಲಾಗಿದೆ.

ಮೇ 2ರ ಮಂಗಳವಾರ ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ-1, ಸಿಆಸು ಇಲಾಖೆ (ರಾಜ್ಯ ಶಿಷ್ಟಾಚಾರ) ಅಪೇಕ್ಞಾ ಸತೀಶ್ ಪವಾರ್ ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಆದರೆ ಈ ಸಾರ್ವತ್ರಿಕ ರಜೆ ಹಲವರಿಗೆ ಅನ್ವಯವಾಗುವುದಿಲ್ಲ.

ಅಧಿಸೂಚನೆಯಲ್ಲಿ ದಿನಾಂಕ 10/05/2023ರ ಬುಧವಾರದಂದು ಕರ್ನಾಟಕ ವಿಧಾನಸಭಾ ಚುನಾವಣೆಯು ನಡೆಯಲಿದ್ದು, ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಮತ ಕ್ಷೇತ್ರಗಳ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಛೇರಿಗಳಿಗೆ, ಶಾಲಾ ಕಾಲೇಜುಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಸರ್ಕಾರವು ಆಯಾ ಚುನಾವಣಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುವ ದಿನದಂದು ಸಾರ್ವತ್ರಿಕ ರಜೆಯನ್ನು ಸರ್ಕಾರವು ಘೋಷಿಸಿದೆ ಎಂದು ಹೇಳಿದೆ.

ಆದರೆ ಈ ರಜೆಯು ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ. ಈ ಚುನಾವಣಾ ಕಾರ್ಯಗಳಿಗೆ ನಿಯೋಜಿಸಲ್ಪಟ್ಟ ಎಲ್ಲಾ ಸರ್ಕಾರಿ ನೌಕರರುಗಳು ಚುನಾವಣಾ ಕಾರ್ಯಕ್ಕೆ ಹಾಜರಾಗತಕ್ಕದ್ದು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಳ್ಳುವ ಅಧಿಕಾರಿಗಳು/ ಸಿಬ್ಬಂದಿ ಮತ್ತು ಸೇವಾ ಮತದಾರರು ಮೇ 2 ರಿಂದ 4ರ ತನಕ ಅಂಚೆ ಮತದಾನ ಮಾಡಲು ಈಗಾಗಲೇ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ.

10/5/2023ರಂದು ಕ್ಷೇತ್ರಗಳಲ್ಲಿ ಮತದಾನವು ಸುಸೂತ್ರವಾಗಿ ನಡೆಯಲು ಅನುಕೂಲವಾಗುವಂತೆ ಮತದಾನ ನಡೆಯುವ ಮತಗಟ್ಟೆಯನ್ನು ಸರ್ಕಾರಿ ಕಛೇರಿಗಳಲ್ಲಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಸ್ಥಾಪಿಸಿದಲ್ಲಿ ಅಂತಹ ಕಛೇರಿ ಹಾಗೂ ಶಾಲೆಗಳಿಗೆ ದಿನಾಂಕ 09/05/2023ರ ಮಂಗಳವಾರದಂದು (ಪೂರ್ವ ತಯಾರಿಗಾಗಿ) ಹಾಗೂ ಮತ ಎಣಿಕೆ ನಡೆಯುವ ದಿನಾಂಕ 13/05/2023ರಂದು ಮತ ಎಣಿಕೆ ನಡೆಯುವ ಕೇಂದ್ರಗಳಲ್ಲಿ ಮಾತ್ರ ರಜೆ ಘೋಷಿಸುವ ಅವಶ್ಯಕತೆ ಇದ್ದಲ್ಲಿ ಸಂಬಂಧಪಟ್ಟ ಚುನಾವಣಾಧಿಕಾರಿಗಳು ಕ್ರಮ ತೆಗೆದುಕೊಳ್ಳತಕ್ಕದ್ದು ಎಂದು ಅಧಿಸೂಚನೆ ತಿಳಿಸಿದೆ. ಸಾರ್ವತ್ರಿಕ ರಜೆ ಅಧಿಸೂಚನೆ 2; ಸಾರ್ವತ್ರಿಕ ರಜೆಯ ಕುರಿತು ಅಪೇಕ್ಞಾ ಸತೀಶ್ ಪವಾರ್ ಹೊರಡಿಸಿರುವ 2ನೇ ಅಧಿಸೂಚನೆಯಲ್ಲಿ ಭಾರತ ಸರ್ಕಾರದ ಒಳಾಡಳಿತ ವ್ಯವಹಾರಗಳ ಇಲಾಖೆಯ (3029-1), ದಿನಾಂಕ 15/06/1957ರ ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿರುವ ನಗೋಷಿಯೇಬಲ್ ಇನ್‌ಸ್ಪುಮೆಂಟ್ ಆಕ್ಟ್-1881 (1881ರ ಅಧಿನಿಯಮ ಸಂಖ್ಯೆ 26)ರ 25ನೇ ಸೆಕ್ಷನ್‌ನಲ್ಲಿರುವ ವಿವರಣೆಯಂತೆ ವಿವರಣೆ ನೀಡಲಾಗಿದೆ.

ದಿನಾಂಕ 10/05/2023ರ ಬುಧವಾರದಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯುವ ಪ್ರಯುಕ್ತ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳು, ಮಹಾನಗರಗಳ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಕೃತ ಬ್ಯಾಂಕುಗಳು, ಇತರ ಬ್ಯಾಂಕುಗಳು ಮುಂತಾದ ಕಛೇರಿಗಳಿಗೆ ಸೀಮಿತಗೊಳಿಸಿ ಸರ್ಕಾರವು ಸಾರ್ವಜನಿಕ ರಜೆಯನ್ನು ಘೋಷಿಸಿದೆ. ಹಾಗೆಯೇ, ಯಾವುದೇ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು (Industrial  undertaking) ಅಥವಾ ಇನ್ನಿತರ ಸಾರ್ವಜನಿಕ ಸಂಸ್ಥೆ (Establishment)ಗಳಲ್ಲಿ ಖಾಯಂ ಮತ್ತು ದಿನಗೂಲಿ (Casual Work) ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರು ಮತದಾನ ದಿನಾಂಕದಂದು ವೇತನ ಸಹಿತ ರಜೆಗೆ ಅರ್ಹರಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.

Previous Post

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಸಂಸ್ಥಾಪಕರ ದಿನದ ಆಚರಣೆ ..!!

Next Post

ಶಾಲೆಗಳಿಂದ ಬ್ಯಾಟರಿ ಕಳವು – ನಾಲ್ವರು ಆರೋಪಿಗಳ ಬಂಧನ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಶಾಲೆಗಳಿಂದ ಬ್ಯಾಟರಿ ಕಳವು - ನಾಲ್ವರು ಆರೋಪಿಗಳ ಬಂಧನ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023
ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಆರೋಗ್ಯ ಇಲಾಖೆಯಿಂದ `ಕೋವಿಡ್ ಗೈಡ್ಸ್ ಲೈನ್ಸ್’ ಪ್ರಕಟ : ಶಾಲಾ ವಿದ್ಯಾರ್ಥಿಗಳಿಗೆ ಜ್ವರ, ಕೆಮ್ಮು,ನೆಗಡಿ ಇದ್ರೆ ರಜೆ ನೀಡುವಂತೆ ಸೂಚನೆ..!!

ಆರೋಗ್ಯ ಇಲಾಖೆಯಿಂದ `ಕೋವಿಡ್ ಗೈಡ್ಸ್ ಲೈನ್ಸ್’ ಪ್ರಕಟ : ಶಾಲಾ ವಿದ್ಯಾರ್ಥಿಗಳಿಗೆ ಜ್ವರ, ಕೆಮ್ಮು,ನೆಗಡಿ ಇದ್ರೆ ರಜೆ ನೀಡುವಂತೆ ಸೂಚನೆ..!!

31/05/2025
ವಿದ್ಯಾವಂತ ಯುವ ಪೀಳಿಗೆ ದೇಶದ ಆಸ್ತಿ : ಯಶ್ ಪಾಲ್ ಸುವರ್ಣ..!!

ವಿದ್ಯಾವಂತ ಯುವ ಪೀಳಿಗೆ ದೇಶದ ಆಸ್ತಿ : ಯಶ್ ಪಾಲ್ ಸುವರ್ಣ..!!

31/05/2025
ಸ್ಪೊರ್ಟಿಫೈ’25 – ಐಸಿವೈಎಮ್ ಉಡುಪಿ ವಲಯಕ್ಕೆ ಚಾಂಪಿಯನ್ಸ್ ಪಟ್ಟ..!!

ಸ್ಪೊರ್ಟಿಫೈ’25 – ಐಸಿವೈಎಮ್ ಉಡುಪಿ ವಲಯಕ್ಕೆ ಚಾಂಪಿಯನ್ಸ್ ಪಟ್ಟ..!!

31/05/2025
ಶ್ರೀಮದ್‌ ಭುವನೇಂದ್ರ ಪ್ರೌಢಶಾಲೆ – ಶಾಲಾ ಪ್ರಾರಂಭೋತ್ಸವ..!!

ಶ್ರೀಮದ್‌ ಭುವನೇಂದ್ರ ಪ್ರೌಢಶಾಲೆ – ಶಾಲಾ ಪ್ರಾರಂಭೋತ್ಸವ..!!

31/05/2025

Recent News

ಆರೋಗ್ಯ ಇಲಾಖೆಯಿಂದ `ಕೋವಿಡ್ ಗೈಡ್ಸ್ ಲೈನ್ಸ್’ ಪ್ರಕಟ : ಶಾಲಾ ವಿದ್ಯಾರ್ಥಿಗಳಿಗೆ ಜ್ವರ, ಕೆಮ್ಮು,ನೆಗಡಿ ಇದ್ರೆ ರಜೆ ನೀಡುವಂತೆ ಸೂಚನೆ..!!

ಆರೋಗ್ಯ ಇಲಾಖೆಯಿಂದ `ಕೋವಿಡ್ ಗೈಡ್ಸ್ ಲೈನ್ಸ್’ ಪ್ರಕಟ : ಶಾಲಾ ವಿದ್ಯಾರ್ಥಿಗಳಿಗೆ ಜ್ವರ, ಕೆಮ್ಮು,ನೆಗಡಿ ಇದ್ರೆ ರಜೆ ನೀಡುವಂತೆ ಸೂಚನೆ..!!

31/05/2025
ವಿದ್ಯಾವಂತ ಯುವ ಪೀಳಿಗೆ ದೇಶದ ಆಸ್ತಿ : ಯಶ್ ಪಾಲ್ ಸುವರ್ಣ..!!

ವಿದ್ಯಾವಂತ ಯುವ ಪೀಳಿಗೆ ದೇಶದ ಆಸ್ತಿ : ಯಶ್ ಪಾಲ್ ಸುವರ್ಣ..!!

31/05/2025
ಸ್ಪೊರ್ಟಿಫೈ’25 – ಐಸಿವೈಎಮ್ ಉಡುಪಿ ವಲಯಕ್ಕೆ ಚಾಂಪಿಯನ್ಸ್ ಪಟ್ಟ..!!

ಸ್ಪೊರ್ಟಿಫೈ’25 – ಐಸಿವೈಎಮ್ ಉಡುಪಿ ವಲಯಕ್ಕೆ ಚಾಂಪಿಯನ್ಸ್ ಪಟ್ಟ..!!

31/05/2025
ಶ್ರೀಮದ್‌ ಭುವನೇಂದ್ರ ಪ್ರೌಢಶಾಲೆ – ಶಾಲಾ ಪ್ರಾರಂಭೋತ್ಸವ..!!

ಶ್ರೀಮದ್‌ ಭುವನೇಂದ್ರ ಪ್ರೌಢಶಾಲೆ – ಶಾಲಾ ಪ್ರಾರಂಭೋತ್ಸವ..!!

31/05/2025
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved