Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಹಾಲಿಡೇ ಪ್ಯಾಕೇಜ್ ಕ್ಷೇತ್ರಕ್ಕೆ ಕ್ಲಿಯರ್‌ಟ್ರಿಪ್ ಪ್ರವೇಶ: ಮೊದಲ ಬಾರಗಿಗೆ ಪ್ರವಾಸಿಗರೇ ತಮಗೆ ತಕ್ಕಂತೆ ಬದಲಾಯಿಸಿಕೊಳ್ಳಬಹುದಾದ ನೂತನ ಮಾದರಿ ಪರಿಚಯ

Dhrishya News by Dhrishya News
28/09/2026
in ಸುದ್ದಿಗಳು
0
ಹಾಲಿಡೇ ಪ್ಯಾಕೇಜ್ ಕ್ಷೇತ್ರಕ್ಕೆ ಕ್ಲಿಯರ್‌ಟ್ರಿಪ್ ಪ್ರವೇಶ: ಮೊದಲ ಬಾರಗಿಗೆ ಪ್ರವಾಸಿಗರೇ ತಮಗೆ ತಕ್ಕಂತೆ ಬದಲಾಯಿಸಿಕೊಳ್ಳಬಹುದಾದ ನೂತನ ಮಾದರಿ ಪರಿಚಯ
0
SHARES
2
VIEWS
Share on FacebookShare on Twitter

ವಿಮಾನಯಾನ, ಹೋಟೆಲ್‌ಗಳು, ಚಟುವಟಿಕೆಗಳು ಮತ್ತು ಸಾರಿಗೆ ವ್ಯವಸ್ಥೆ ಒಂದೇ ಪ್ರವಾಸ ಯೋಜನೆಯಲ್ಲಿ ಲಭ್ಯ; ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವ ಸ್ವಾತಂತ್ರ್ಯ ಹಾಗೂ ನೆರವಿಗಾಗಿ ಸದಾ ಸಿದ್ಧವಾಗಿರುವ ಗಮ್ಯಸ್ಥಾನ ಪರಿಣಿತರು 

ಸದ್ಯ ಭಾರತ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳ ಎಲ್ಲಾ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಈ ಹಾಲಿಡೇ ಪ್ಯಾಕೇಜ್‌ಗಳು ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ತಾಣಗಳಿಗೆ ವಿಸ್ತರಣೆ 

ಆರಂಭಿಕ ಆಫರ್‌ ಗಳು: ಮಕ್ಕಳಿಗೆ ಉಚಿತ ವಿಮಾನಯಾನ (ಥೈಲ್ಯಾಂಡ್, ಬಾಲಿ ಮತ್ತು ಕೇರಳ) ಹಾಗೂ ಜೊತೆಗಾರರಿಗೆ ಶೇ. 50 ರಿಯಾಯಿತಿ (ಥೈಲ್ಯಾಂಡ್, ಬಾಲಿ ಮತ್ತು ಅಂಡಮಾನ್)

ಬೆಂಗಳೂರು, ಸೆಪ್ಟೆಂಬರ್ 28, 2026: ಫ್ಲಿಪ್‌ಕಾರ್ಟ್ ಒಡೆತನದ ದೇಶದ ಅಗ್ರಗಣ್ಯ ಆನ್‌ಲೈನ್ ಟ್ರಾವೆಲ್ ಪ್ಲಾಟ್‌ ಫಾರ್ಮ್‌ಗಳಲ್ಲಿ ಒಂದಾದ ಕ್ಲಿಯರ್‌ಟ್ರಿಪ್, ರಜಾದಿನಗಳ ಪ್ರವಾಸ ಪ್ಯಾಕೇಜ್ (ಹಾಲಿಡೇ ಪ್ಯಾಕೇಜಸ್) ವಿಭಾಗಕ್ಕೆ ಅಧಿಕೃತವಾಗಿ ಪ್ರವೇಶಿಸಿದೆ. ಈ ಮೂಲಕ ವಿಮಾನಯಾನ, ಹೋಟೆಲ್ ವಾಸ್ತವ್ಯ, ಪ್ರವಾಸಿ ಚಟುವಟಿಕೆಗಳು ಹಾಗೂ ಸಾರಿಗೆ ಸಂಪರ್ಕ ವ್ಯವಸ್ಥೆಗಳನ್ನು ಒಳಗೊಂಡ ಪರಿಣಿತರು ಸಿದ್ಧಪಡಿಸಿದ ಸಮಗ್ರ ಪ್ರವಾಸ ಯೋಜನೆಯನ್ನು ಪರಿಚಯಿಸಿದ್ದು, ಪ್ರವಾಸಿಗರು ತಮ್ಮ ಅಗತ್ಯ ಹಾಗೂ ಆಸಕ್ತಿಗೆ ತಕ್ಕಂತೆ ಇದನ್ನು ಸುಲಭವಾಗಿ ಮಾರ್ಪಡಿಸಿಕೊಳ್ಳಬಹುದಾಗಿದೆ.
ಕೇವಲ ವೈಯಕ್ತಿಕ ಟಿಕೆಟ್ ಬುಕಿಂಗ್‌ಗಳಿಗೆ ಸೀಮಿತವಾಗಿರದೆ, ಸಮಗ್ರವಾದ ಫುಲ್-ಸ್ಟ್ಯಾಕ್ ಹಾಗೂ ಮಲ್ಟಿಮೋಡಲ್ ಪ್ರವಾಸ ಪ್ಲಾಟ್‌ಫಾರ್ಮ್ ಆಗಿ ಬೆಳೆಯುವ ಮತ್ತು ಪ್ರವಾಸಿಗರಿಗೆ ಪ್ರವಾಸದ ಯೋಜನೆ ಹಾಗೂ ಅನುಭವವನ್ನು ಸುಲಭವಾಗಿಸುವ ಸಂಸ್ಥೆಯ ವಿಸ್ತೃತ ಬೆಳವಣಿಗೆಯ ಕಾರ್ಯತಂತ್ರದ ಭಾಗವಾಗಿ ಈ ನೂತನ ಸೇವೆಯನ್ನು ಆರಂಭಿಸಲಾಗಿದೆ.

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಹಾಲಿಡೇ ಪ್ಯಾಕೇಜ್‌ಗಳು ಮೊದಲೇ ನಿರ್ಧರಿಸಿದ ಚೌಕಟ್ಟನ್ನು ಗ್ರಾಹಕರಿಗೆ ನೀಡಿ, ಅದಕ್ಕೆ ತಕ್ಕಂತೆ ಹೊಂದಿಕೊಳ್ಳುವಂತೆ ಮಾಡುತ್ತವೆ. ಆದರೆ ಕ್ಲಿಯರ್‌ಟ್ರಿಪ್ ಸಂಪೂರ್ಣವಾಗಿ ಗ್ರಾಹಕಸ್ನೇಹಿ ಹಾಗೂ ಭಿನ್ನ ಹಾದಿಯನ್ನು ತುಳಿದಿದೆ. ಇಲ್ಲಿ ಪ್ರವಾಸಿಗರು ತಜ್ಞರು ರೂಪಿಸಿದ ಪ್ರವಾಸ ಯೋಜನೆಯೊಂದಿಗೆ ಆರಂಭಿಸಿದರೂ, ತಮ್ಮ ಅಗತ್ಯಕ್ಕೆ ತಕ್ಕಂತೆ ಹೋಟೆಲ್‌ಗಳನ್ನು ಬದಲಾಯಿಸಿಕೊಳ್ಳುವುದು, ಚಟುವಟಿಕೆಗಳನ್ನು ಹೊಂದಿಸಿಕೊಳ್ಳುವುದು ಹಾಗೂ ವಿಮಾನಯಾನದ ಸಮಯವನ್ನು ಬದಲಾಯಿಸಿಕೊಳ್ಳುವ ಪೂರ್ಣ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಜೊತೆಗೆ, ಒಂದು ಪ್ಯಾಕೇಜ್ ಬುಕಿಂಗ್‌ನ ಮೂಲ ಸೌಲಭ್ಯ ಹಾಗೂ ರಚನೆಗೆ ಯಾವುದೇ ಧಕ್ಕೆಯಾಗುವುದಿಲ್ಲ.

ಈ ಕುರಿತು ಮಾಹಿತಿ ಹಂಚಿಕೊಂಡ ಕ್ಲಿಯರ್‌ಟ್ರಿಪ್‌ನ ಚೀಫ್ ಬಿಸಿನೆಸ್ ಆಫೀಸರ್ – ಏರ್, ಗೌರವ್ ಪಟ್ವಾರಿ ಅವರು, “ಭಾರತದಲ್ಲಿ ಪ್ರವಾಸದ ಯೋಜನೆಯನ್ನು ರೂಪಿಸುವುದು ಯಾವಾಗಲೂ ಎರಡು ಕಠಿಣ ಆಯ್ಕೆಗಳ ನಡುವೆ ಇರುತ್ತಿತ್ತು. ಒಂದೋ ಮೊದಲೇ ನಿಗದಿಯಾದ ಬಿಗಿ ನಿಯಮಗಳ ಪ್ಯಾಕೇಜ್‌ಗೆ ಒಪ್ಪಿಕೊಳ್ಳಬೇಕು, ಇಲ್ಲವೇ ಪ್ರವಾಸಿಗರೇ ಸ್ವತಃ ಗಂಟೆಗಟ್ಟಲೆ ಕುಳಿತು ಎಲ್ಲವನ್ನೂ ಸಿದ್ಧಪಡಿಸಿಕೊಳ್ಳಬೇಕಿತ್ತು. ಆದರೆ ಇದಕ್ಕಿಂತ ಅತ್ಯುತ್ತಮವಾದ ಪರ್ಯಾಯ ಮಾರ್ಗವಿದೆ ಎಂದು ನಾವು ನಂಬುತ್ತೇವೆ. ಪರಿಣಿತರು ರೂಪಿಸಿದ, ಪ್ರವಾಸಿಗರ ನಿಯಂತ್ರಣದಲ್ಲಿರುವ ಹಾಗೂ ಅಗತ್ಯವಿದ್ದಾಗ ನೆರವಿಗೆ ಸಿಬ್ಬಂದಿ ಲಭ್ಯವಿರುವ ಸುಲಭ ವ್ಯವಸ್ಥೆ ಇದಾಗಿದೆ. ಪ್ರಸ್ತುತ ದೇಶ-ವಿದೇಶಗಳ ಎಲ್ಲಾ ಜನಪ್ರಿಯ ತಾಣಗಳಲ್ಲಿ ನಾವು ಈ ಸೌಲಭ್ಯವನ್ನು ಬಿಡುಗಡೆ ಮಾಡಿದ್ದು, ಭಾರತೀಯ ಪ್ರವಾಸಿಗರು ತಮ್ಮ ಮುಂದಿನ ರಜಾದಿನಗಳನ್ನು ಯೋಜಿಸುವ ವಿಧಾನವನ್ನೇ ಇದು ಆಮೂಲಾಗ್ರವಾಗಿ ಬದಲಾಯಿಸಲಿದೆ” ಎಂದರು.

ಈ ನೂತನ ಯೋಜನೆಯು ಪ್ರವಾಸದ ಯೋಜನಾ ಹಂತದಲ್ಲಿ ನೇರ ಮಾನವ ನೆರವನ್ನು (ಹ್ಯೂಮನ್ ಅಸಿಸ್ಟೆನ್ಸ್) ಒದಗಿಸುತ್ತದೆ. ಪ್ರವಾಸವನ್ನು ಸಿದ್ಧಪಡಿಸುವಾಗ ಪ್ರವಾಸಿಗರು ತಜ್ಞರೊಂದಿಗೆ ನೇರವಾಗಿ ಮಾತನಾಡಿ ಮಾರ್ಗದರ್ಶನ ಪಡೆಯಬಹುದು. ತಾಣಗಳ ಆಯ್ಕೆ, ಪ್ರವಾಸದ ಹಾದಿ ಹಾಗೂ ರಜಾದಿನಗಳ ಸಮಗ್ರ ಅಂಶಗಳನ್ನು ಸಂಯೋಜಿಸಲು ಅವರು ಅಗತ್ಯ ನೆರವು ನೀಡಲಿದ್ದಾರೆ. ಪ್ರವಾಸದ ರೂಪುರೇಷೆ ಅಂತಿಮಗೊಂಡ ಬಳಿಕ, ಚಾಲಕರ ಮಾಹಿತಿ, ವೋಚರ್‌ಗಳು ಮತ್ತು ದಿನನಿತ್ಯದ ಪ್ರವಾಸ ವಿವರಗಳನ್ನು ಒಳಗೊಂಡ ನೇರ ಪ್ರವಾಸ ಯೋಜನೆ (ಲೈವ್ ಇಟಿನರರಿ) ಗ್ರಾಹಕರಿಗೆ ದೊರೆಯಲಿದೆ. ಇದರೊಂದಿಗೆ ಪ್ರವಾಸದುದ್ದಕ್ಕೂ 24×7 ನಿರಂತರ ಗ್ರಾಹಕ ಸೇವಾ ಬೆಂಬಲವೂ ಲಭ್ಯವಿರಲಿದೆ.
ದೇಶದ ಮುಂಚೂಣಿ ಟ್ರಾವೆಲ್ ಪ್ಲಾಟ್‌ಫಾರ್ಮ್ ಆಗಿರುವ ಸಾಮರ್ಥ್ಯ ಮತ್ತು ಫ್ಲಿಪ್‌ಕಾರ್ಟ್ ಗ್ರೂಪ್‌ನ ಬಲದಿಂದಾಗಿ ಕ್ಲಿಯರ್‌ಟ್ರಿಪ್, ವಿಮಾನಯಾನ, ಹೋಟೆಲ್‌ಗಳು ಹಾಗೂ ಪ್ರವಾಸ ಸೇವಾ ಪೂರೈಕೆದಾರರಿಂದ ಅತ್ಯಂತ ರಿಯಾಯಿತಿ ದರಗಳು ಹಾಗೂ ವಿಶಿಷ್ಟ ಸೇವೆಗಳನ್ನು ನೇರವಾಗಿ ಪಡೆಯಲು ಯಶಸ್ವಿಯಾಗಿದೆ. ಸಾಮಾನ್ಯ ವೈಯಕ್ತಿಕ ಪ್ರವಾಸಿಗರಿಗೆ ಇಂತಹ ಸವಲತ್ತುಗಳು ಸ್ವತಂತ್ರವಾಗಿ ದೊರೆಯುವುದು ಕಷ್ಟಸಾಧ್ಯ. ಈ ಹೆಚ್ಚುವರಿ ಮೌಲ್ಯದ ಪ್ರಯೋಜನವನ್ನು ಸಂಸ್ಥೆಯು ತನ್ನ ಹಾಲಿಡೇ ಪ್ಯಾಕೇಜ್‌ಗಳ ಆಕರ್ಷಕ ದರ, ಗುಣಮಟ್ಟದ ಆಯ್ಕೆ ಹಾಗೂ ಬದಲಾವಣೆಯ ಮುಕ್ತ ಸ್ವಾತಂತ್ರ್ಯದ ಮೂಲಕ ನೇರವಾಗಿ ಪ್ರವಾಸಿಗರಿಗೆ ಒದಗಿಸುತ್ತಿದೆ. ಇದಲ್ಲದೆ, ಗ್ರಾಹಕರಿಗೆ ಮತ್ತಷ್ಟು ಭರವಸೆ ನೀಡಲು ಕ್ಲಿಯರ್‌ಟ್ರಿಪ್ ಪ್ರೈಸ್ ಬೀಟ್ ಆಫರ್* ಪ್ರಕಟಿಸಿದ್ದು, ಇದೇ ಪ್ರವಾಸ ಯೋಜನೆಯು ಮಾರುಕಟ್ಟೆಯಲ್ಲಿ ಬೇರೆಲ್ಲೂ ಇದಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದ್ದಲ್ಲಿ, ಅದಕ್ಕಿಂತ ಕಡಿಮೆ ದರವನ್ನು ಕ್ಲಿಯರ್‌ಟ್ರಿಪ್ ಗ್ರಾಹಕರಿಗೆ ನೀಡಲಿದೆ.

L-R: Piyush Sharma, Head of Product, Emerging Businesses (Hotels, Bus, Trains, Holiday Packages and UARP), Cleartrip; Arihant Kothari, Category Head-Holiday Packages, Cleartrip; Gaurav Patwari, Chief Business Officer-Air, Cleartrip.
Gaurav Patwari, Chief Business Officer-Air, Cleartrip, speaking at the Holiday Packages press briefing.
Gaurav Patwari, Chief Business Officer-Air, Cleartrip
Previous Post

ಕುಂದಾಪುರ: ಮನೆಯಲ್ಲಿ ನೇಣು ಬಿಗಿದು ಮಹಿಳೆ ಆತ್ಮಹತ್ಯೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಹಾಲಿಡೇ ಪ್ಯಾಕೇಜ್ ಕ್ಷೇತ್ರಕ್ಕೆ ಕ್ಲಿಯರ್‌ಟ್ರಿಪ್ ಪ್ರವೇಶ: ಮೊದಲ ಬಾರಗಿಗೆ ಪ್ರವಾಸಿಗರೇ ತಮಗೆ ತಕ್ಕಂತೆ ಬದಲಾಯಿಸಿಕೊಳ್ಳಬಹುದಾದ ನೂತನ ಮಾದರಿ ಪರಿಚಯ

ಹಾಲಿಡೇ ಪ್ಯಾಕೇಜ್ ಕ್ಷೇತ್ರಕ್ಕೆ ಕ್ಲಿಯರ್‌ಟ್ರಿಪ್ ಪ್ರವೇಶ: ಮೊದಲ ಬಾರಗಿಗೆ ಪ್ರವಾಸಿಗರೇ ತಮಗೆ ತಕ್ಕಂತೆ ಬದಲಾಯಿಸಿಕೊಳ್ಳಬಹುದಾದ ನೂತನ ಮಾದರಿ ಪರಿಚಯ

28/09/2026
ಹಿರಿಯಡ್ಕ: ಕೊಟ್ಟಿಗೆಯಲ್ಲಿ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕುಂದಾಪುರ: ಮನೆಯಲ್ಲಿ ನೇಣು ಬಿಗಿದು ಮಹಿಳೆ ಆತ್ಮಹತ್ಯೆ

28/09/2026
ಶೀರೂರು ಮೂಲ ಮಠದಲ್ಲಿ  ಗೋವುಗಳಿಗಾಗಿ ನೂತನ ಗೋಶಾಲೆ ನಿರ್ಮಾಣಕ್ಕೆ ಚಾಲನೆ

ಶೀರೂರು ಮೂಲ ಮಠದಲ್ಲಿ ಗೋವುಗಳಿಗಾಗಿ ನೂತನ ಗೋಶಾಲೆ ನಿರ್ಮಾಣಕ್ಕೆ ಚಾಲನೆ

28/09/2026
ಉಡುಪಿ ಶ್ರೀಕೃಷ್ಣ ಮಠದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ್ ಸಹಾಯಧನ ವಿತರಣೆ

ಉಡುಪಿ ಶ್ರೀಕೃಷ್ಣ ಮಠದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ್ ಸಹಾಯಧನ ವಿತರಣೆ

28/09/2026

Recent News

imunify-bot-check