ಕಾರ್ಕಳ: ಮೇ 31:ಇಂದು ಬೆಳ್ಳಂಬೆಳಗ್ಗೆ ಕಾರ್ಕಳ ಮೆಸ್ಕಾಂ ಅಧಿಕಾರಿ ಗಿರೀಶ್ ರಾವ್ ಅವರ ಮನೆಗೆ ಹಾಗೂ ಅವರ ಕಚೇರಿ, ಅವರ ಅಕ್ಕನ ಮನೆ ಮತ್ತು ಸಂಬಂಧಿಕರ ಮನೆಗಳಿಗೆ ಲೋಕಾಯುಕ್ತ ಎಸ್ ಪಿ ಕುಮಾರಸ್ವಾಮಿ , ನೇತೃತ್ವದಲ್ಲಿ 5 ತಂಡಗಳು ಇಂದು ಮುಂಜಾನೆ 5:30 ಗಂಟೆಗೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಪ್ರಭಾರ ಡಿ ವೈ ಎಸ್ ಪಿ ಮಂಜುನಾಥ್, ಮಂಗಳೂರು ಡಿ. ವೈ ಎಸ್ ಪಿ . ಗಾನ ಪಿ ಕುಮಾರ್,ಸುರೇಶ್ ಕುಮಾರ್, ಭಾರತಿ ಚಂದ್ರಶೇಖರ್ ರಾಜೇಂದ್ರ ನಾಯಕ್
ಉಡುಪಿ ಹಾಗೂ ಮಂಗಳೂರು ಲೋಕಾಯುಕ್ತ ಘಟಕದ ಅಧಿಕಾರಿಗಳು ಈ ದಾಳಿಯಲ್ಲಿ ಭಾಗವಹಿಸಿದ್ದರು.