Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಆಗಿ ಡಾ. ಅನಿಲ್ ಕೆ. ಭಟ್ ನೇಮಕ.!

Dhrishya News by Dhrishya News
07/05/2025
in ಸುದ್ದಿಗಳು
0
0
SHARES
16
VIEWS
Share on FacebookShare on Twitter

ಮಣಿಪಾಲ:ಮೇ 07: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಡೀನ್ ಆಗಿ ಡಾ. ಅನಿಲ್ ಕೆ ಭಟ್ ಅವರನ್ನು ಮೇ 1, 2025 ರಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ. 

ಅತುತ್ತಮ ವೈದ್ಯರು, ಶಿಕ್ಷಣ ತಜ್ಞರು ಮತ್ತು ಆಡಳಿತಾಧಿಕಾರಿಯಾಗಿರುವ ಡಾ. ಭಟ್ ಅವರು ಮೂಳೆಚಿಕಿತ್ಸೆ, ಕೈ ಶಸ್ತ್ರಚಿಕಿತ್ಸೆ, ಸಂಶೋಧನೆ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಸುಮಾರು ಎರಡು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ.

ಈ ನೇಮಕಾತಿ ಬಗ್ಗೆ ಮಾತನಾಡಿದ, ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್, ‘ಶೈಕ್ಷಣಿಕ, ವೈದ್ಯಕೀಯ ಶುಶ್ರೂಷೆ, ಮತ್ತು ಸಂಶೋಧನೆಯಲ್ಲಿ ಹೆಮ್ಮೆಯ ಪರಂಪರೆಯನ್ನು ಹೊಂದಿರುವ ನಮ್ಮ ಪ್ರಮುಖ ಸಂಸ್ಥೆಗಳಲ್ಲಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಒಂದಾಗಿದೆ. ಡಾ. ಅನಿಲ್ ಭಟ್ ಅವರನ್ನು ಡೀನ್ ಆಗಿ ನೇಮಿಸಿರುವುದು, ಶೈಕಣಿಕವಾಗಿ ಮತ್ತು ಸದಾ ಹೊಸತನವನ್ನು ಆಲೋಚಿಸುವ ದೂರದೃಷ್ಟಿಯುಳ್ಳ ನಾಯಕರನ್ನು ಆಯ್ಕೆ ಮಾಡುವ ಬಗ್ಗೆ ನಮಗಿರುವ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ. ಇವರ ಅಧಿಕಾರದಲ್ಲಿ ಕೆಎಂಸಿ ರಾಷ್ಟ್ರೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತನ್ನ ಛಾಪು ಮೂಡಿಸುವುದನ್ನು ಮುಂದುವರಿಸುತ್ತದೆ ಎಂಬ ವಿಶ್ವಾಸವಿದೆ’ ಎಂದರು.

ಡಾ. ಭಟ್ ಅವರು ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಮತ್ತು ಕೆಎಂಸಿ ಮಣಿಪಾಲದಿಂದ (1999) ಮೂಳೆಚಿಕಿತ್ಸೆಯಲ್ಲಿ ಎಂಎಸ್ ಪದವಿ ಪಡೆದಿದ್ದಾರೆ. ಜೊತೆಗೆ ಮೂಳೆಚಿಕಿತ್ಸೆಯಲ್ಲಿ ಡಿಎನ್‌ಬಿ ಪದವಿ ಪಡೆದಿದ್ದಾರೆ. 1999ರಲ್ಲಿ ಕೆಎಂಸಿಯಲ್ಲಿ ವೃತ್ತಿಜೀವನ ಪ್ರಾರಂಭಿಸಿದ ಅವರು ಮೂಳೆಚಿಕಿತ್ಸೆ ವಿಭಾಗದ ಮುಖ್ಯಸ್ಥರು (2014–2019) ಮತ್ತು ಅಸೋಸಿಯೇಟ್ ಡೀನ್ (2019 ರಿಂದ) ಆಗಿ ಕಾರ್ಯನಿರ್ವಹಿಸಿದ್ದಾರೆ. ಹ್ಯಾಂಡ್ ಸರ್ಜರಿ ವಿಭಾಗ ಮತ್ತು ಎಂ.ಸಿ.ಎಚ್. ಹ್ಯಾಂಡ್ ಸರ್ಜರಿ ಅನ್ನು ಪ್ರಾರಂಭಿಸಿದರು. ಭಾರತದ ಮೂರು ಕಡೆಗಳಲ್ಲಿ ಲಭ್ಯವಿರುವ ಕಾರ್ಯಕ್ರಮಗಳಲ್ಲಿ ಇದು ಒಂದಾಗಿದೆ.  

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ತಜ್ಞರಾದ ಡಾ. ಭಟ್ ಮಣಿಕಟ್ಟಿನ ಶಸ್ತ್ರಚಿಕಿತ್ಸೆ, ಆರ್ತ್ರೋಸ್ಕೋಪಿ, ಜನ್ಮಜಾತ ವಿರೂಪ ತಿದ್ದುಪಡಿ ಮತ್ತು AI-ಸಂಯೋಜಿತ ಸೋಂಕುಗಳನ್ನು ಪತ್ತೆಹಚ್ಚುವ ಸಂಶೋಧನೆಗಳ ನೇತೃತ್ವ ವಹಿಸಿದ್ದರು. ಭಾರತೀಯರಿಗಾಗಿ ಹಲವಾರು ಶಸ್ತ್ರಚಿಕಿತ್ಸಾ ತಂತ್ರಗಳು ಮತ್ತು 14 ಆಂಥ್ರೊಪೊಮೆಟ್ರಿಕ್ ಡೇಟಾಸೆಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಹುಟ್ಟಿನಲ್ಲಿ ಸಂಭವಿಸಿದ ಕೈ ವೈಕಲ್ಯತೆಗಾಗಿ ರಾಷ್ಟ್ರೀಯ ನೋಂದಾವಣೆಯನ್ನು ಪ್ರಾರಂಭಿಸಿದರು ಮತ್ತು ‘ಹಸ್ತಾ: ಸೆಂಟರ್ ಫಾರ್ ಕಂಜೆನಿಟಲ್ ಹ್ಯಾಂಡ್ ಡಿಫರೆನ್ಸಸ್’ ಮೂಲಕ ಕೃತಕ ಅಂಗ ಕೇಂದ್ರದಲ್ಲಿ 3D ಮುದ್ರಣ ಪ್ರಾಸ್ಥೆಟಿಕ್ಸ್ ಸೌಲಭ್ಯವನ್ನು – ಭಾರತೀಯ ವೈದ್ಯಕೀಯ ಕಾಲೇಜುಗಳಲ್ಲಿ ರಚಿಸಿದ್ದಾರೆ. 

ಡಾ. ಭಟ್ ಅವರು 130 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ, ಜರ್ನಲ್ ಆಫ್ ಆರ್ತ್ರೋಪೆಡಿಕ್ ಟ್ರಾಮಾ ಅಂಡ್ ರೀಕನ್ಸ್ಟ್ರಕ್ಷನ್‌ನ ಮುಖ್ಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಜರ್ನಲ್ ಆಫ್ ಹ್ಯಾಂಡ್ ಸರ್ಜರಿ (ಏಷ್ಯಾ ಪೆಸಿಫಿಕ್) ಮತ್ತು ಆನಲ್ಸ್ ಆಫ್ ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಜಾಗತಿಕ ಜರ್ನಲ್‌ಗಳಲ್ಲಿ ಸಂಪಾದಕೀಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು 41 ಸ್ನಾತಕೋತ್ತರ ಪ್ರಬಂಧಗಳು ಮತ್ತು 7 ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ ಮತ್ತು ಇಂಡಿಯನ್ ಸೊಸೈಟಿ ಫಾರ್ ಸರ್ಜರಿ ಆಫ್ ದಿ ಹ್ಯಾಂಡ್ (ISSH) ನ ಪ್ರಮುಖ ಸದಸ್ಯರಾಗಿ ರಾಷ್ಟ್ರೀಯ ಪಠ್ಯಕ್ರಮಕ್ಕೆ ಕೊಡುಗೆ ನೀಡಿದ್ದಾರೆ. ಅವರ ಪುಸ್ತಕ, CASES ಇನ್ ಆರ್ತ್ರೋಪೆಡಿಕ್ಸ್, ವ್ಯಾಪಕವಾಗಿ ಬಳಸಲಾಗುವ ಶೈಕ್ಷಣಿಕ ಸಂಪನ್ಮೂಲವಾಗಿದೆ.

ಐಎಫ್‌ಎಸ್‌ಎಸ್‌ಎಚ್, ಎಎಸ್‌ಎಸ್‌ಎಚ್, ಬಿಎಸ್‌ಎಸ್‌ಎಚ್ ಮತ್ತು ಎಪಿಎಫ್‌ಎಸ್‌ಎಸ್‌ಎಚ್‌ನಂತಹ ವೇದಿಕೆಗಳಲ್ಲಿ ಅವರು 400+ ಆಹ್ವಾನಿತ ಉಪನ್ಯಾಸಗಳನ್ನು ನೀಡಿದ್ದಾರೆ ಮತ್ತು ಹಲವಾರು ಕಾರ್ಯಾಗಾರಗಳನ್ನು ನಡೆಸಿದ್ದಾರೆ, ಪ್ರಪಂಚದಾದ್ಯಂತ ನೂರಾರು ಶಸ್ತ್ರಚಿಕಿತ್ಸಕರಿಗೆ ತರಬೇತಿ ನೀಡಿದ್ದಾರೆ.

ಡಾ. ಭಟ್ ಅವರ ನೇಮಕಾತಿಯು ಕೆಎಂಸಿ ಮಣಿಪಾಲದ ಶೈಕ್ಷಣಿಕ ಮತ್ತು ಕ್ಲಿನಿಕಲ್ ನಾಯಕತ್ವದ ಅನ್ವೇಷಣೆಯಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಲಿದೆ.

Previous Post

ಕಾಂತಾರಾ – ಚಾಪ್ಟರ್ 1′ ಚಿತ್ರತಂಡದ ಜೂನಿಯರ್ ಆರ್ಟಿಸ್ಟ್ ಸಾವು..!!

Next Post

ಶ್ರೀ ಮಾರಿಯಮ್ಮ ದೇವಸ್ಥಾನ ಕಾರ್ಕಳ: ವರ್ಷವಾಧಿ ಮಾರಿಪೂಜೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಶ್ರೀ ಮಾರಿಯಮ್ಮ ದೇವಸ್ಥಾನ ಕಾರ್ಕಳ: ವರ್ಷವಾಧಿ ಮಾರಿಪೂಜೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘಕ್ಕೆ ಸಾಧನಾ ಪ್ರಶಸ್ತಿ

ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘಕ್ಕೆ ಸಾಧನಾ ಪ್ರಶಸ್ತಿ

22/08/2026
ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ವಿಶೇಷ ಅನ್ನದಾನ

ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ವಿಶೇಷ ಅನ್ನದಾನ

22/08/2026
ಮಂಗಳೂರು ರೈಲ್ವೆ ಜಾಲದ ಏಕೀಕರಣ; ಕರಾವಳಿಯ ದೀರ್ಘಕಾಲದ ಬೇಡಿಕೆ ಈಡೇರಿಕೆ..!

ಮಂಗಳೂರು ರೈಲ್ವೆ ಜಾಲದ ಏಕೀಕರಣ; ಕರಾವಳಿಯ ದೀರ್ಘಕಾಲದ ಬೇಡಿಕೆ ಈಡೇರಿಕೆ..!

22/08/2026
ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರಶಸ್ತಿಗೆ ಸುಷ್ಮಾ ಎಸ್. ಬಂಟ್ವಾಳ ಆಯ್ಕೆ..!

ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರಶಸ್ತಿಗೆ ಸುಷ್ಮಾ ಎಸ್. ಬಂಟ್ವಾಳ ಆಯ್ಕೆ..!

22/08/2026

Recent News

ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘಕ್ಕೆ ಸಾಧನಾ ಪ್ರಶಸ್ತಿ

ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘಕ್ಕೆ ಸಾಧನಾ ಪ್ರಶಸ್ತಿ

22/08/2026
ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ವಿಶೇಷ ಅನ್ನದಾನ

ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ವಿಶೇಷ ಅನ್ನದಾನ

22/08/2026
ಮಂಗಳೂರು ರೈಲ್ವೆ ಜಾಲದ ಏಕೀಕರಣ; ಕರಾವಳಿಯ ದೀರ್ಘಕಾಲದ ಬೇಡಿಕೆ ಈಡೇರಿಕೆ..!

ಮಂಗಳೂರು ರೈಲ್ವೆ ಜಾಲದ ಏಕೀಕರಣ; ಕರಾವಳಿಯ ದೀರ್ಘಕಾಲದ ಬೇಡಿಕೆ ಈಡೇರಿಕೆ..!

22/08/2026
ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರಶಸ್ತಿಗೆ ಸುಷ್ಮಾ ಎಸ್. ಬಂಟ್ವಾಳ ಆಯ್ಕೆ..!

ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರಶಸ್ತಿಗೆ ಸುಷ್ಮಾ ಎಸ್. ಬಂಟ್ವಾಳ ಆಯ್ಕೆ..!

22/08/2026