Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ವೈದ್ಯಕೀಯ ಶಿಕ್ಷಣದಲ್ಲಿ ಆಧುನಿಕ VR-ಆಧಾರಿತ ಕೌಶಲ ತರಬೇತಿಗೆ ಮೆಡಿಸಿಮ್ ವಿಆರ್ ನೊಂದಿಗೆ ಮಾಹೆ ಒಪ್ಪಂದ..!!

Dhrishya News by Dhrishya News
17/04/2025
in ಸುದ್ದಿಗಳು
0
0
SHARES
14
VIEWS
Share on FacebookShare on Twitter

ಮಣಿಪಾಲ, ಏಪ್ರಿಲ್ 17, 2025: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ವೈದ್ಯಕೀಯ ಕೌಶಲ ತರಬೇತಿಗಾಗಿ ವರ್ಚುವಲ್ ರಿಯಾಲಿಟಿ (VR) ಪ್ರವರ್ತಕ ಕಂಪನಿ ಮೆಡಿಸಿಮ್ ವಿಆರ್ (MedisimVR) ನೊಂದಿಗೆ ಏಪ್ರಿಲ್ 14 ರಂದು ಒಪ್ಪಂದಕ್ಕೆ (MoU) ಸಹಿ ಹಾಕಿದೆ.

ಈ ಒಪ್ಪಂದವು ವೈದ್ಯಕೀಯ ಶಿಕ್ಷಣದಲ್ಲಿ ಒಳಗೊಳ್ಳುವ ತಂತ್ರಜ್ಞಾನಗಳನ್ನು ಸಂಯೋಜಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ. ಮಾಹೆ ಮತ್ತು ಮೆಡಿಸಿಮ್ ವಿಆರ್ ಒಪ್ಪಂದವು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣಕ್ಕಾಗಿ ವಿಆರ್ ಮೂಲಕ ಅತ್ಯಾಧುನಿಕ ಸಂಶೋಧನೆಗೆ ಚಾಲನೆ ನೀಡಲಿದೆ. ಇದು ಕೌಶಲ ಅಭಿವೃದ್ಧಿಯನ್ನು ಸಕ್ರಿಯಗೊಳಿಸಲಿದೆ. ಇದಕ್ಕಾಗಿ ಕ್ಯಾಂಪಸ್ಸಿನಲ್ಲಿ ವಿಆರ್ ಕೌಶಲ ಪ್ರಯೋಗಾಲಯವನ್ನು ಸ್ಥಾಪಿಸಲಾಗುತ್ತಿದ್ದು, ವಿವಿಧ ಚಟುವಟಿಕೆಗಳ ಮೂಲಕ ನಾವೀನ್ಯತೆಯನ್ನು ಉತ್ತೇಜಿಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ವಿಜ್ಞಾನಗಳ ಪ್ರೊ ವೈಸ್ ಚಾನ್ಸೆಲರ್ ಡಾ. ಶರತ್ ಕೆ. ರಾವ್ ಅವರು, ವೈದ್ಯಕೀಯ ಶಿಕ್ಷಣದಲ್ಲಿ ತಾಂತ್ರಿಕ ಆವಿಷ್ಕಾರಕ್ಕೆ ಮಾಹೆಯ ಬದ್ಧತೆಯನ್ನು ಪುನರುಚ್ಚರಿಸಿದರು. ಇದರೊಂದಿಗೆ ವಿಆರ್ ಏಕೀಕರಣದ ಮೂಲಕ ಪಠ್ಯಕ್ರಮ ಮತ್ತು ಕೌಶಲದ ಭವಿಷ್ಯದ ದೃಷ್ಟಿಕೋನವನ್ನು ವಿವರಿಸಿದರು. 

ಮಾಹೆಯ ರಿಜಿಸ್ಟ್ರಾರ್ ಡಾ.ಗಿರಿಧರ ಕಿಣಿ ಅವರು ಈ ವಿಆರ್ ಉಪಕ್ರಮ ವಿದ್ಯಾರ್ಥಿಗಳ ತೊಡಗಿಸುವಿಕೆಯನ್ನು ಹೆಚ್ಚಿಸಲಿದೆ ಎಂದು ಹೇಳಿದರು. 

ಈ ಒಪ್ಪಂದದ ಮೂಲಕ ವೈದ್ಯಕೀಯ ಕೌಶಲ ಮತ್ತು ಸಾಮರ್ಥ್ಯ ಆಧಾರಿತ ತರಬೇತಿ ಹೆಚ್ಚಿಸಲು ವಿಆರ್ ಸಾಮಥ ವಿಆರ್ ನ ರೂಪಾಂತರದ ಸಾಮರ್ಥ್ಯವನ್ನು ಮೂಲ ವೈದ್ಯಕೀಯ ವಿಜ್ಞಾನಗಳ ವಿಭಾಗದ ಹಿರಿಯ ಅಧ್ಯಾಪಕ ಡಾ. ಸಂಬಿತ್ ದಾಶ್ ಹೇಳಿದರು.

ಮಾಹೆ ಕಾರ್ಪೋರೆಟ್ ರಿಲೇಷನ್ ನ ನಿರ್ದೇಶಕ ಡಾ. ಹರೀಶ್ ಕುಮಾರ್ ಅವರು ಮಾಹೆಯ ವಿಸ್ತರಿಸುತ್ತಿರುವ ಉದ್ಯ-ಶಿಕ್ಷಣವಲಯದ ಸಹಯೋಗಗಳ ಬಗ್ಗೆ ವಿವರಿಸಿದರು. 

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ತುರ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ವಿಮಲ್ ಕೃಷ್ಣನ್,ಮಾಹೆಯಲ್ಲಿ ನಡೆಯುತ್ತಿರುವ ವಿಆರ್ ಸಂಬಂಧಿತ ಸಂಶೋಧನಾ ಉಪಕ್ರಮಗಳ ಬಗ್ಗೆ ಒಳನೋಟಗಳನ್ನು ಹಂಚಿಕೊಂಡರು.

ಮೆಡಿಸಿಮ್‌ವಿಆರ್‌ನ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅದಿತ್ ಚಿನ್ನಸ್ವಾಮಿ ಅವರು ಕಂಪನಿಯ ವಿಆರ್ ಸಾಮರ್ಥ್ಯಗಳು ಮತ್ತು ಪರಿಹಾರಗಳ ಕುರಿತ ಅವಲೋಕನವನ್ನು ಪ್ರಸ್ತುತಪಡಿಸಿದರು, ವಿಕಸನಗೊಳ್ಳುತ್ತಿರುವ ಶೈಕ್ಷಣಿಕ ಅಗತ್ಯಗಳೊಂದಿಗೆ ಅವುಗಳ ಹೊಂದಾಣಿಕೆ ಕುರಿತು ಹೇಳಿದರು.

ಮಾಹೆಯಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಸಮುದಾಯದ ಚಾಲನೆ ಮತ್ತು ಆವಿಷ್ಕಾರದ ಭಾಗವಾಗಿ ಅದನ್ನು ನನಸು ಮಾಡುವಲ್ಲಿ ಒಂದು ಭಾಗವಾಗಿರುವ ಡಿಬಿಎಂಎಸ್-ಮಾಹೆಯ ಹಿರಿಯ ಪ್ರಾಧ್ಯಾಪಕರಾದ ಡಾ. ಉಲ್ಲಾಸ್ ಕಾಮತ್, ಡಾ. ಬಿನ್ಸಿ ಜಾರ್ಜ್, ಡಾ. ಅರವಿಂದ್ ಪಾಂಡೆ ಮತ್ತು ಸ್ನಿಗ್ಧಾ ಮಿಶ್ರಾ ಉಪಸ್ಥಿತರಿದ್ದರು.

ಆರೋಗ್ಯ ವಿಜ್ಞಾನ ಶಿಕ್ಷಣದಲ್ಲಿ ವಿಆರ್ ಆಧಾರಿತ ತರಬೇತಿ ಮಾಡ್ಯೂಲ್‌ಗಳ ಸಂಶೋಧನೆ, ಅಭಿವೃದ್ಧಿ ಮತ್ತು ಅನುಷ್ಠಾನಕ್ಕಾಗಿ ಸಹಕಾರಿ ಮಾರ್ಗಸೂಚಿಯನ್ನು ಪ್ರಸ್ತುತಪಡಿಸಿದ ಬಳಿಕ ಒಪ್ಪಂದಕ್ಕೆ ಸಹಿ ಮಾಡಲಾಯಿತು.

Previous Post

ಐದು ವರ್ಷದ ಬಾಲಕಿ ಅಪಹರಿಸಿ ಹತ್ಯೆಗೈದ ಆರೋಪಿಯ ಎನ್ಕೌಂಟರ್ ಪ್ರಕರಣ :ಇನ್ನೇರಡುದಿನಗಳಲ್ಲಿ  ಸಿಐಡಿ ತನಿಖೆ ಆರಂಭ ಸಾಧ್ಯತೆ..!!

Next Post

ಕಾರ್ಕಳ ತಾಲೂಕು ಪಂಚಾಯಿತ್ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶ್ರೀ ಪ್ರಶಾಂತ್ ರಾವ್ ಎಂ ವಿ ಅಧಿಕಾರ ಸ್ವೀಕಾರ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಕಾರ್ಕಳ ತಾಲೂಕು ಪಂಚಾಯಿತ್ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶ್ರೀ ಪ್ರಶಾಂತ್ ರಾವ್ ಎಂ ವಿ ಅಧಿಕಾರ ಸ್ವೀಕಾರ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿಎ ಗುಜ್ಜಾಡಿ ಪ್ರಭಾಕರ್ ನಾಯಕ್.

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿಎ ಗುಜ್ಜಾಡಿ ಪ್ರಭಾಕರ್ ನಾಯಕ್.

01/07/2026
ಇನ್ನಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ.

ಇನ್ನಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ.

01/07/2026
ಮಹಾಭಾರತದ ಒಟ್ಟು ಸಾರವೇ ಧರ್ಮ

ಮಹಾಭಾರತದ ಒಟ್ಟು ಸಾರವೇ ಧರ್ಮ

30/06/2026
1ವರ್ಷದ ಮಗು ಹುಟ್ಟಿದ ದಿನದಿಂದ ಆಸ್ಪತ್ರೆಯಲ್ಲಿ : ಹೃದಯ ಶಸ್ತ್ರ ಚಿಕಿತ್ಸೆಗೆ ಬೇಕು ಸಾರ್ವಜನಿಕರ ನೆರವು !!

1ವರ್ಷದ ಮಗು ಹುಟ್ಟಿದ ದಿನದಿಂದ ಆಸ್ಪತ್ರೆಯಲ್ಲಿ : ಹೃದಯ ಶಸ್ತ್ರ ಚಿಕಿತ್ಸೆಗೆ ಬೇಕು ಸಾರ್ವಜನಿಕರ ನೆರವು !!

30/06/2026

Recent News

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿಎ ಗುಜ್ಜಾಡಿ ಪ್ರಭಾಕರ್ ನಾಯಕ್.

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿಎ ಗುಜ್ಜಾಡಿ ಪ್ರಭಾಕರ್ ನಾಯಕ್.

01/07/2026
ಇನ್ನಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ.

ಇನ್ನಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ.

01/07/2026
ಮಹಾಭಾರತದ ಒಟ್ಟು ಸಾರವೇ ಧರ್ಮ

ಮಹಾಭಾರತದ ಒಟ್ಟು ಸಾರವೇ ಧರ್ಮ

30/06/2026
1ವರ್ಷದ ಮಗು ಹುಟ್ಟಿದ ದಿನದಿಂದ ಆಸ್ಪತ್ರೆಯಲ್ಲಿ : ಹೃದಯ ಶಸ್ತ್ರ ಚಿಕಿತ್ಸೆಗೆ ಬೇಕು ಸಾರ್ವಜನಿಕರ ನೆರವು !!

1ವರ್ಷದ ಮಗು ಹುಟ್ಟಿದ ದಿನದಿಂದ ಆಸ್ಪತ್ರೆಯಲ್ಲಿ : ಹೃದಯ ಶಸ್ತ್ರ ಚಿಕಿತ್ಸೆಗೆ ಬೇಕು ಸಾರ್ವಜನಿಕರ ನೆರವು !!

30/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved