Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಅನೇಕ ಹೊಸ ಟಿ ಡಿ ಸ್ ನಿಯಮಗಳು..!!

Dhrishya News by Dhrishya News
17/03/2025
in ಸುದ್ದಿಗಳು
0
0
SHARES
58
VIEWS
Share on FacebookShare on Twitter

ನವದೆಹಲಿ, ಮಾರ್ಚ್ 17: ಮುಂಬರುವ ಹಣಕಾಸು ವರ್ಷದಿಂದ 2025ರ ಬಜೆಟ್​​ನ್ಲಲಿ ಮಾಡಲಾದ ಕೆಲ ಪ್ರಮುಖ ಘೋಷಣೆಗಳು ಜಾರಿಗೆ ಬರಲಿವೆ. ಏಪ್ರಿಲ್ 1ರಿಂದ ಜಾರಿಯಾಗಲಿರುವ ಕೆಲ ಪ್ರಮುಖ ನಿಯಮಗಳಲ್ಲಿ ಟಿಡಿಎಸ್​ದ್ದೂ ಇದೆ. ಬಡ್ಡಿಯಿಂದ ಬರುವ ಆದಾಯ, ಡಿವಿಡೆಂಡ್​​ಗಳಿಂದ ಬರುವ ಆದಾಯ, ಬಾಡಿಗೆಗಳಿಂದ ಬರುವ ಆದಾಯ, ಇನ್ಷೂರೆನ್ಸ್ ಕಮಿಷನ್​​ಗಳಿಂದ ಬರುವ ಆದಾಯ ಇವುಗಳಿಗೆ ಟಿಡಿಎಸ್ ವಿನಾಯಿತಿ ಪಡೆಯಲು ಇದ್ದ ಮಿತಿಯನ್ನು ಏರಿಸಲಾಗಿದೆ. 2025ರ ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಏನೇನು ಬದಲಾವಣೆಗಳಾಗುತ್ತವೆ ಎನ್ನುವುದರ ವಿವರ ಈ ಕೆಳಕಂಡಂತಿದೆಫಿಕ್ಸೆಡ್ ಡೆಪಾಸಿಟ್, ರೆಕರಿಂಗ್ ಡೆಪಾಸಿಟ್ ಮತ್ತಿತರ ಸೇವಿಂಗ್ಸ್ ಸ್ಕೀಮ್​​ಗಳಿಂದ ಸಿಗುವ ಬಡ್ಡಿ ಒಂದು ವರ್ಷದಲ್ಲಿ 50,000 ರೂಗಿಂತ ಒಳಗಿದ್ದರೆ ಅದಕ್ಕೆ ಟಿಡಿಎಸ್ ಮುರಿದುಕೊಳ್ಳಲಾಗುವುದಿಲ್ಲ. ಅಂದರೆ ಟಿಡಿಎಸ್​​ನಿಂದ ವಿನಾಯತಿ ಮಿತಿ 50,000 ರೂ ಇದೆ. ಇದು ಹಿರಿಯ ನಾಗರಿಕರಿಗೆ ಇರುವ ಸೌಲಭ್ಯ. ಏಪ್ರಿಲ್ 1ರಿಂದ ಈ ಮಿತಿಯನ್ನು 1,00,000 ರೂಗೆ ಏರಿಸಲಾಗುತ್ತಿದೆ.

ಅಂದರೆ, ಹಿರಿಯ ನಾಗರಿಕರು ಒಂದು ಹಣಕಾಸು ವರ್ಷದಲ್ಲಿ ಎಫ್​ಡಿ ಇತ್ಯಾದಿಯಿಂದ ಪಡೆಯುವ ಬಡ್ಡಿ ಆದಾಯ ಒಂದು ಲಕ್ಷ ರೂ ಒಳಗಿದ್ದರೆ ಯಾವ ಟಿಡಿಎಸ್ ಇರುವುದಿಲ್ಲ. ಒಂದು ಲಕ್ಷ ರೂಗಿಂತ ಹೆಚ್ಚಿದ್ದರೆ ಹೆಚ್ಚುವರಿ ಮೊತ್ತಕ್ಕೆ ಶೇ. 10ರಷ್ಟು ಟಿಡಿಎಸ್ ಅನ್ವಯ ಆಗುತ್ತದೆ. ಉದಾಹರಣೆಗೆ, ನಿಮ್ಮ ವಾರ್ಷಿಕ ಬಡ್ಡಿ ಆದಾಯ 1,50,000 ರೂ ಇದ್ದರೆ ಒಂದೂವರೆ ಲಕ್ಷ ರೂ ಬದಲು 50,000 ರೂಗೆ 500 ರೂ ಟಿಡಿಎಸ್ ಅನ್ವಯ ಆಗುತ್ತದೆ.

ಮನೆ ಬಾಡಿಗೆ, ಕಮರ್ಷಿಯಲ್ ಬ್ಯುಲ್ಡಿಂಗ್ ಬಾಡಿಗೆಗಳಿಂದ ಬರುವ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ವರ್ಷಕ್ಕೆ 2,40,000 ರೂವರೆಗಿನ ಅಂಥ ಆದಾಯಕ್ಕೆ ಟಿಡಿಎಸ್ ವಿನಾಯಿತಿ ಸಿಗುತ್ತಿದೆ. ಈ ಮಿತಿಯನ್ನು 6,00,000 ರೂಗೆ ಏರಿಸಲಾಗಿದೆ. ಅಂದರೆ, ನಿಮಗೆ ತಿಂಗಳಿಗೆ 50,000 ರೂವರೆಗೆ ಬಾಡಿಗೆ ಆದಾಯ ಬರುತ್ತಿದ್ದರೆ ಟಿಡಿಎಸ್ ಕಡಿತದ ಭಯ ಬೇಡ. ಅದನ್ನು ಮೀರಿದ ಆದಾಯಕ್ಕೆ ಮಾತ್ರವೇ ಟಿಡಿಎಸ್ ಅನ್ವಯ ಆಗುತ್ತದೆ.

ಫಿಕ್ಸೆಡ್ ಡೆಪಾಸಿಟ್, ರೆಕರಿಂಗ್ ಡೆಪಾಸಿಟ್ ಮತ್ತಿತರ ಸೇವಿಂಗ್ಸ್ ಸ್ಕೀಮ್​​ಗಳಿಂದ ಸಿಗುವ ಬಡ್ಡಿ ಒಂದು ವರ್ಷದಲ್ಲಿ 50,000 ರೂಗಿಂತ ಒಳಗಿದ್ದರೆ ಅದಕ್ಕೆ ಟಿಡಿಎಸ್ ಮುರಿದುಕೊಳ್ಳಲಾಗುವುದಿಲ್ಲ. ಅಂದರೆ ಟಿಡಿಎಸ್​​ನಿಂದ ವಿನಾಯತಿ ಮಿತಿ 50,000 ರೂ ಇದೆ. ಇದು ಹಿರಿಯ ನಾಗರಿಕರಿಗೆ ಇರುವ ಸೌಲಭ್ಯ. ಏಪ್ರಿಲ್ 1ರಿಂದ ಈ ಮಿತಿಯನ್ನು 1,00,000 ರೂಗೆ ಏರಿಸಲಾಗುತ್ತಿದೆ.

ಅಂದರೆ, ಹಿರಿಯ ನಾಗರಿಕರು ಒಂದು ಹಣಕಾಸು ವರ್ಷದಲ್ಲಿ ಎಫ್​ಡಿ ಇತ್ಯಾದಿಯಿಂದ ಪಡೆಯುವ ಬಡ್ಡಿ ಆದಾಯ ಒಂದು ಲಕ್ಷ ರೂ ಒಳಗಿದ್ದರೆ ಯಾವ ಟಿಡಿಎಸ್ ಇರುವುದಿಲ್ಲ. ಒಂದು ಲಕ್ಷ ರೂಗಿಂತ ಹೆಚ್ಚಿದ್ದರೆ ಹೆಚ್ಚುವರಿ ಮೊತ್ತಕ್ಕೆ ಶೇ. 10ರಷ್ಟು ಟಿಡಿಎಸ್ ಅನ್ವಯ ಆಗುತ್ತದೆ. ಉದಾಹರಣೆಗೆ, ನಿಮ್ಮ ವಾರ್ಷಿಕ ಬಡ್ಡಿ ಆದಾಯ 1,50,000 ರೂ ಇದ್ದರೆ ಒಂದೂವರೆ ಲಕ್ಷ ರೂ ಬದಲು 50,000 ರೂಗೆ 500 ರೂ ಟಿಡಿಎಸ್ ಅನ್ವಯ ಆಗುತ್ತದೆ

ಸೆಕ್ಯೂರಿಟೈಸೇಶನ್ ಟ್ರಸ್ಟ್​​ಗಳಲ್ಲಿ ಮಾಡಿದ ಹೂಡಿಕೆಯಿಂದ ಸಿಗುವ ಆದಾಯಕ್ಕೆ ಶೇ. 10ರಷ್ಟು ಮಾತ್ರವೇ ಟಿಡಿಎಸ್ ಕಡಿತ ಮಾಡಲಾಗುತ್ತದೆ. ಸದ್ಯ ಈ ಆದಾಯಕ್ಕೆ ಶೇ. 25-30ರಷ್ಟು ಟಿಡಿಎಸ್ ಇದೆ. ವ್ಯಕ್ತಿಗಳಿಗೆ ಶೇ. 25, ಕಂಪನಿಗಳಿಗೆ ಶೇ. 30ರಷ್ಟು ಟಿಡಿಎಸ್ ಅನ್ವಯ ಆಗುತ್ತದೆ. ಈಗ ಎಲ್ಲರಿಗೂ ಸಮಾನವಾಗಿ ಶೇ. 10ರಷ್ಟು ಮಾತ್ರವೇ ಟಿಡಿಎಸ್ ಕಡಿತ ಆಗುತ್ತದೆ. ಏಪ್ರಿಲ್ 1ರಿಂದ ಈ ನಿಯಮ ಜಾರಿಗೆ ಬರುತ್ತದೆ.

ಸೆಕ್ಯೂರಿಟೈಸೇಶನ್ ಟ್ರಸ್ಟ್ ಎನ್ನುವುದು ಒಂದು ಹಣಕಾಸು ಸಂಸ್ಥೆಯಾಗಿದ್ದು, ಅದು ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳಿಂದ ವಿವಿಧ ರೀತಿಯ ಸಾಲಗಳನ್ನು ಖರೀದಿಸಿ, ಅದನ್ನು ಸೆಕ್ಯೂರಿಟೀಸ್ (ಬಾಂಡ್) ಅಗಿ ಪರಿವರ್ತಿಸಿ ಹೂಡಿಕೆದಾರರಿಗೆ ಮಾರುತ್ತದೆ. ಆ ಸಾಲ ವಸೂಲಾತಿಯಿಂದ ಸಿಗುವ ಆದಾಯವನ್ನು ಈ ಸೆಕ್ಯೂರಿಟೀಸ್ ಹೂಡಿಕೆದಾರರಿಗೆ ಹಂಚಿಕೆ ಮಾಡಲಾಗುತ್ತದೆ.

Previous Post

ಮಾ.19ರಂದು ಸುನೀತಾ ವಿಲಿಯಮ್ಸ್, ಬಚ್ ವಿಲ್ಮೋರ್ ಭೂಮಿಗೆ ವಾಪಾಸ್: ನಾಸಾ ಮಾಹಿತಿ..!!

Next Post

ಕುಂದಾಪುರ: ನಿಯಂತ್ರಣ ತಪ್ಪಿ ಕಂಪೌಂಡ್‌ಗೆ ಬೈಕ್ ಢಿಕ್ಕಿ ; ಸವಾರ ಸ್ಥಳದಲ್ಲೇ ಸಾವು..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಕುಂದಾಪುರ: ನಿಯಂತ್ರಣ ತಪ್ಪಿ ಕಂಪೌಂಡ್‌ಗೆ ಬೈಕ್ ಢಿಕ್ಕಿ ; ಸವಾರ ಸ್ಥಳದಲ್ಲೇ ಸಾವು..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ: ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಭಾರಿ ಪ್ರತಿಭಟನೆ – ಅಭಿವೃದ್ಧಿ ಕಾಮಗಾರಿಗಳ ಹಂಗಾಮಿ ಸ್ಥಗಿತಕ್ಕೆ ಆಕ್ಷೇಪ

ಕಾರ್ಕಳ: ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಭಾರಿ ಪ್ರತಿಭಟನೆ – ಅಭಿವೃದ್ಧಿ ಕಾಮಗಾರಿಗಳ ಹಂಗಾಮಿ ಸ್ಥಗಿತಕ್ಕೆ ಆಕ್ಷೇಪ

15/03/2026
ಉಡುಪಿ: ಆಯಾತಪ್ಪಿ ಬಿದ್ದ ಗಾಂಧೀಜಿ ವೇಷಧಾರಿ ವೃದ್ಧರಿಗೆ ಸಮಾಜಸೇವಕರ ನೆರವು

ಉಡುಪಿ: ಆಯಾತಪ್ಪಿ ಬಿದ್ದ ಗಾಂಧೀಜಿ ವೇಷಧಾರಿ ವೃದ್ಧರಿಗೆ ಸಮಾಜಸೇವಕರ ನೆರವು

14/03/2026
ಮಾ.15 : ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ‘ಶಿವಾಜಿ ಸಂಗಮ’ ಕಾರ್ಯಕ್ರಮ

ಮಾ.15 : ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ‘ಶಿವಾಜಿ ಸಂಗಮ’ ಕಾರ್ಯಕ್ರಮ

14/03/2026
Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ 3 ಪಾನೀಯಗಳು ಸಹಕಾರಿ….!

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ 3 ಪಾನೀಯಗಳು ಸಹಕಾರಿ….!

14/03/2026

Recent News

ಕಾರ್ಕಳ: ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಭಾರಿ ಪ್ರತಿಭಟನೆ – ಅಭಿವೃದ್ಧಿ ಕಾಮಗಾರಿಗಳ ಹಂಗಾಮಿ ಸ್ಥಗಿತಕ್ಕೆ ಆಕ್ಷೇಪ

ಕಾರ್ಕಳ: ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಭಾರಿ ಪ್ರತಿಭಟನೆ – ಅಭಿವೃದ್ಧಿ ಕಾಮಗಾರಿಗಳ ಹಂಗಾಮಿ ಸ್ಥಗಿತಕ್ಕೆ ಆಕ್ಷೇಪ

15/03/2026
ಉಡುಪಿ: ಆಯಾತಪ್ಪಿ ಬಿದ್ದ ಗಾಂಧೀಜಿ ವೇಷಧಾರಿ ವೃದ್ಧರಿಗೆ ಸಮಾಜಸೇವಕರ ನೆರವು

ಉಡುಪಿ: ಆಯಾತಪ್ಪಿ ಬಿದ್ದ ಗಾಂಧೀಜಿ ವೇಷಧಾರಿ ವೃದ್ಧರಿಗೆ ಸಮಾಜಸೇವಕರ ನೆರವು

14/03/2026
ಮಾ.15 : ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ‘ಶಿವಾಜಿ ಸಂಗಮ’ ಕಾರ್ಯಕ್ರಮ

ಮಾ.15 : ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ‘ಶಿವಾಜಿ ಸಂಗಮ’ ಕಾರ್ಯಕ್ರಮ

14/03/2026
Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ 3 ಪಾನೀಯಗಳು ಸಹಕಾರಿ….!

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ 3 ಪಾನೀಯಗಳು ಸಹಕಾರಿ….!

14/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved