Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ರಾಜ್ಯ/ ರಾಷ್ಟ್ರೀಯ

ಪ್ರವಾಸಿಗರಿಗೆ ಭದ್ರತೆ ಮತ್ತು ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ರೆಸಾರ್ಟ್, ಹೋಂ ಸ್ಟೇಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ..!!

Dhrishya News by Dhrishya News
13/03/2025
in ರಾಜ್ಯ/ ರಾಷ್ಟ್ರೀಯ
0
0
SHARES
20
VIEWS
Share on FacebookShare on Twitter

ಬೆಂಗಳೂರು : ಮಾರ್ಚ್ 13:ರಾಜ್ಯಾದ್ಯಂತ ಪ್ರವಾಸಿ ತಾಣಗಳಲ್ಲಿನ ರೆಸಾರ್ಟ್, ಹೋಂಸ್ಟೇಗಳಲ್ಲಿ ಪ್ರವಾಸಿಗರಿಗೆ ಭದ್ರತೆ ಮತ್ತು ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಈ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರು ಸುತ್ತೋಲೆ ಹೊರಡಿಸಿದ್ದಾರೆ.

ಅದರಲ್ಲಿ ದಿನಾಂಕ 06.03.2025 ರಂದು ಗಂಗಾವತಿ ತಾಲ್ಲೂಕಿನ ಆನೆಗುಂದಿ ಗ್ರಾಮದಲ್ಲಿ ಹಾರ್ಟ್ ಲ್ಯಾಂಡ್ ಹೋಂ ಸ್ಟೇನಲ್ಲಿ ವಾಸವಿದ್ದ ಎರಡು ವಿದೇಶಿಯರು, ಎರಡು ಭಾರತೀಯರನ್ನು ಹೋಮ್‌ ಮಾಲೀಕರು ರಾತ್ರಿ ಭೋಜನದ ನಂತರ ನಿರ್ಜನ ಪ್ರದೇಶದಲ್ಲಿ ನಕ್ಷತ್ರ ವೀಕ್ಷಣೆಗೆಂದು ಕರೆದುಕೊಂಡು ಹೋದ ಸಂದರ್ಭದಲ್ಲಿ ಮೂರು ದುಷ್ಕರ್ಮಿಗಳು ಪುರುಷ ಪವಾಸಿಗರೊಂದಿಗೆ ವಾಗ್ವಾದ ಮಾಡಿ ಅವರುಗಳನ್ನು ಸಮೀಪದಲ್ಲಿಯೇ ತುಂಗಾಭದ್ರ ಎಡದಂಡೆ ಕಾಲುವೆಗೆ ನೂಕಿರುತ್ತಾರೆಂದು ವರದಿ ಮಾಡಿರುತ್ತಾರೆ. ಮುಂದುವರೆದು, ಹೋಮ್‌ಸ್ಯೆ ಮಾಲೀಕಳು ಹಾಗೂ ಮತ್ತೊಬ್ಬ ಇಸ್ರೇಲ್ ಪ್ರಜೆಯ ಮೇಲೆ ಹಲ್ಲೆ ಮಾಡಿ ಅತ್ಯಾಚಾರ ಎಸಗಿರುವುದಾಗಿ ತಿಳಿಸಿರುತ್ತಾರೆ. ಕಾಲುವೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದವರ ಪೈಕಿ ಒರಿಸ್ಸಾ ಮೂಲದ ವ್ಯಕ್ತಿ ಮೃತರಾಗಿರುವ ಘಟನೆ ಉಲ್ಲೇಖದ ಪತ್ರದಲ್ಲಿ ವರದಿಯಾಗಿರುತ್ತದೆ.

ಮೇಲಿನ ಘಟನೆಯು ಅತ್ಯಂತ ದು:ಖಕರ ಹಾಗೂ ವಿಷಾದನೀಯವಾದುದಾಗಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯತ್‌ನಲ್ಲಿ ಈ ರೀತಿಯ ದುರ್ಘಟನೆಗಳು ಜರುಗದ ರೀತಿಯಲ್ಲಿ ಕೆಳಕಂಡ ಸೂಚನೆಗಳನ್ನು ಹಾಗೂ ನಿರ್ದೇಶನಗಳನ್ನು ನೀಡಲಾಗಿದೆ:-

೩) ರಾಜ್ಯದ ಪ್ರವಾಸಿ ತಾಣಗಳಲ್ಲಿನ ಹೋಮ್‌ಸ್ಟೇಗಳು ವಿದೇಶಿ ಪ್ರವಾಸಿಗರನ್ನು ಒಳಗೊಂಡಂತೆ ಎಲ್ಲಾ ಪವಾಸಿಗರ ಭದ್ರತೆ ಹಾಗೂ ಸುರಕ್ಷತೆಗಾಗಿ ಸೂಕ್ತ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳತಕ್ಕದ್ದು,

b) ಹೊರವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮುಂಚಿತವಾಗಿ ಸಂಬಂಧಿಸಿದ ಅಧಿಕಾರ ವ್ಯಾಪ್ತಿಯುಳ್ಳ ಪೊಲೀಸ್ ಠಾಣೆಯಲ್ಲಿ ಮಾಹಿತಿಯನ್ನು ನೀಡಿ, ಅನುಮತಿ ಪಡೆಯತಕ್ಕದ್ದು.

c) ಪೊಲೀಸರಿಂದ/ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪೂರ್ವಾನುಮತಿಯನ್ನು ಪಡೆಯದೇ ನಿರ್ಜನ ಪ್ರದೇಶ/ಹೊರವಲಯ ಅಥವಾ ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯಲ್ಲಿ ದುಷ್ಕರ್ಮಿಗಳಿಂದ ಅಥವಾ ಕಾಡು ಪ್ರಾಣಿಗಳಿಂದ ಸಂಭವಿಸುವ ದುರ್ಘಟನೆಗಳಿಗೆ ಆಯಾ ಹೋಮ್‌ಸ್ಟೇ ಮಾಲೀಕರು ಜವಾಬ್ದಾರರಾಗುತ್ತಾರೆ ಹಾಗೂ ಕಾನೂನಿನ್ವಯ ಶಿಕ್ಷಾರ್ಹ ಅಪರಾಧಕ್ಕೆ ಒಳಪಡುತ್ತಾರೆ.

ಈ ಸಂಬಂಧ ಅಗತ್ಯ ಸೂಚನೆಗಳನ್ನು ನಿಮ್ಮ ಜಿಲ್ಲೆಯ ಪುತಿ ರೆಸಾರ್ಟ್‌ ಹಾಗೂ ಹೋಮ್ ಸೈಗಳಿಗೆ ಖುದ್ದಾಗಿ ಜಾರಿಗೊಳಿಸಿ ಅವರಿಂದ ಸೂಕ್ತ ಮುಚ್ಚಳಿಕೆ ಪಡೆದುಕೊಳ್ಳುವುದು. ಪ್ರತಿ ರೆಸಾರ್ಟ್/ಹೋಮ್‌ಸ್ಯೆಗಳಿಂದ ಅವರ ಸ್ಥಳ ವೀಕ್ಷಣಾ ಕಾರ್ಯಕ್ರಮಗಳ ಪಟ್ಟಿಯನ್ನು ಪಡೆದು ಆ ಕಾರ್ಯಕ್ರಮಗಳಲ್ಲಿ ಯಾವುದೇ ಅಪಾಯವಿಲ್ಲದಿರುವುದನ್ನು ಖಾತರಿಪಡಿಸಿಕೊಳ್ಳಲು ತಿಳಿಸಿದ್ದಾರೆ.

ಈ ಪ್ರಕ್ರಿಯೆಯನ್ನು ಒಂದು ವಾರದಲ್ಲಿ ಕೈಗೊಂಡು ದಿನಾಂಕ:18.03.2025 ರೊಳಗೆ ತಪ್ಪದೇ ವರದಿಯನ್ನು ಸಲ್ಲಿಸಲು ಸೂಚಿಸಿದೆ.

Previous Post

ಕಟ್ಟಡ ಕಾರ್ಮಿಕರ ಅರೋಗ್ಯ ರಕ್ಷಣೆಗಾಗಿ 135 ಸಂಚಾರಿ ಚಿಕಿತ್ಸಾಲಯ ಬಸ್ ಗಳಿಗೆ ಸಿ,ಎಂ ಚಾಲನೆ..!!

Next Post

ಶ್ರೀ ಭುವನೇಂದ್ರ ಮೆಡಿಕಲ್ ಮಿಷನ್ ಕಾಶಿ ಮಠ, ಕಾರ್ಕಳ : ಉಚಿತ ವೈದ್ಯಕೀಯ ತಪಾಸಣಾ ಶಿಬಿರ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಶ್ರೀ ಭುವನೇಂದ್ರ ಮೆಡಿಕಲ್ ಮಿಷನ್ ಕಾಶಿ ಮಠ, ಕಾರ್ಕಳ : ಉಚಿತ ವೈದ್ಯಕೀಯ ತಪಾಸಣಾ ಶಿಬಿರ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮೋದಿ ಆಡಳಿತದ 12 ವರ್ಷ: ಬ್ರಹ್ಮಾವರದಲ್ಲಿ ಬಿಜೆಪಿ ಹಿಂದುಳಿದ ಮೋರ್ಚಾದಿಂದ ಸ್ವಚ್ಛತಾ ಕಾರ್ಯಕ್ರಮ

ಮೋದಿ ಆಡಳಿತದ 12 ವರ್ಷ: ಬ್ರಹ್ಮಾವರದಲ್ಲಿ ಬಿಜೆಪಿ ಹಿಂದುಳಿದ ಮೋರ್ಚಾದಿಂದ ಸ್ವಚ್ಛತಾ ಕಾರ್ಯಕ್ರಮ

28/06/2026
ಪಲ್ಸ್ ಪೋಲಿಯೋ : ಉದ್ಯಾವರ ಮೆಲ್ಪೇಟೆ ಅಂಗನವಾಡಿಯಲ್ಲಿ ಚಾಲನೆ

ಪಲ್ಸ್ ಪೋಲಿಯೋ : ಉದ್ಯಾವರ ಮೆಲ್ಪೇಟೆ ಅಂಗನವಾಡಿಯಲ್ಲಿ ಚಾಲನೆ

28/06/2026
ಭಾರತೀಯ ಹಸ್ತಪ್ರತಿಗಳಲ್ಲಿ ದಾಖಲೆಗೊಂಡ ಭಾರತೀಯ ಪ್ರಾಚೀನ ವೈದ್ಯಶಾಸ್ತ್ರ ಪದ್ಧತಿ ಅನಾವರಣ ಇಂದಿನ ತುರ್ತು ಆವಶ್ಯಕ

ಭಾರತೀಯ ಹಸ್ತಪ್ರತಿಗಳಲ್ಲಿ ದಾಖಲೆಗೊಂಡ ಭಾರತೀಯ ಪ್ರಾಚೀನ ವೈದ್ಯಶಾಸ್ತ್ರ ಪದ್ಧತಿ ಅನಾವರಣ ಇಂದಿನ ತುರ್ತು ಆವಶ್ಯಕ

28/06/2026
ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರ 

ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರ 

28/06/2026

Recent News

ಮೋದಿ ಆಡಳಿತದ 12 ವರ್ಷ: ಬ್ರಹ್ಮಾವರದಲ್ಲಿ ಬಿಜೆಪಿ ಹಿಂದುಳಿದ ಮೋರ್ಚಾದಿಂದ ಸ್ವಚ್ಛತಾ ಕಾರ್ಯಕ್ರಮ

ಮೋದಿ ಆಡಳಿತದ 12 ವರ್ಷ: ಬ್ರಹ್ಮಾವರದಲ್ಲಿ ಬಿಜೆಪಿ ಹಿಂದುಳಿದ ಮೋರ್ಚಾದಿಂದ ಸ್ವಚ್ಛತಾ ಕಾರ್ಯಕ್ರಮ

28/06/2026
ಪಲ್ಸ್ ಪೋಲಿಯೋ : ಉದ್ಯಾವರ ಮೆಲ್ಪೇಟೆ ಅಂಗನವಾಡಿಯಲ್ಲಿ ಚಾಲನೆ

ಪಲ್ಸ್ ಪೋಲಿಯೋ : ಉದ್ಯಾವರ ಮೆಲ್ಪೇಟೆ ಅಂಗನವಾಡಿಯಲ್ಲಿ ಚಾಲನೆ

28/06/2026
ಭಾರತೀಯ ಹಸ್ತಪ್ರತಿಗಳಲ್ಲಿ ದಾಖಲೆಗೊಂಡ ಭಾರತೀಯ ಪ್ರಾಚೀನ ವೈದ್ಯಶಾಸ್ತ್ರ ಪದ್ಧತಿ ಅನಾವರಣ ಇಂದಿನ ತುರ್ತು ಆವಶ್ಯಕ

ಭಾರತೀಯ ಹಸ್ತಪ್ರತಿಗಳಲ್ಲಿ ದಾಖಲೆಗೊಂಡ ಭಾರತೀಯ ಪ್ರಾಚೀನ ವೈದ್ಯಶಾಸ್ತ್ರ ಪದ್ಧತಿ ಅನಾವರಣ ಇಂದಿನ ತುರ್ತು ಆವಶ್ಯಕ

28/06/2026
ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರ 

ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರ 

28/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved