ಉಡುಪಿ: ಮಾರ್ಚ್ 07:ಸದಾ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಉಡುಪಿ ನಾಗರಿಕ ಸಮಿತಿ ಪ್ರಧಾನ ಸಂಚಾಲಕರಾದ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರು ಇಂದು ಅಣಕು ಶವ ಯಾತ್ರೆ ಮೂಲಕ ತಮ್ಮ ಆಕ್ರೋಶ ವನ್ನ ಹೊರ ಹಾಕಿದ್ದಾರೆ ಯಾಕಾಗಿ ಈ ಅಣಕು ಶವ ಯಾತ್ರೆ?? ಇಲ್ಲಿದೆ ಡೀಟೇಲ್ಸ್…
ರಾಷ್ಟ್ರೀಯ ಹೆದ್ದಾರಿ 169ಎ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ಆರಂಭಗೊಂಡು ವರ್ಷ ಕಳೆದಿದ್ದು, ಇದುವರೆಗೂ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಬಹಳ ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಇಂದ್ರಾಳಿ ಸೇತುವೆ ಕಾಮಗಾರಿ, ತೀವ್ರ ಜನಾಕ್ರೋಶದ ಬಳಿಕ ಜನವರಿ 15ರೊಳಗೆ ಪೂರ್ಣಗೊಳಿಸುವ ಕುರಿತು ಗುತ್ತಿಗೆದಾರರಿಂದ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು. ಈ ಅವಧಿ ಮುಗಿದಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.ಇಲ್ಲಿ ಸಂಚಾರ ಬಹಳ ಕಷ್ಟ ಕರವಾಗಿದ್ದು ದಿನನಿತ್ಯ ಇಲ್ಲಿ ಅಪಘಾತ ಗಳು ಸರ್ವೇ ಸಾಮಾನ್ಯ ವಾಗಿಬಿಟ್ಟಿದೆ, ಸಮೀಪ ದಲ್ಲೇ ಶಾಲೆ ಇರೋದ್ರಿಂದ ಮಕ್ಕಳಿಗೆ ಪೋಷಕರಿಗೂ ಬಹಳಷ್ಟು ತೊಂದರೆ ಯಾಗುತ್ತಿದೆ, ಸಾರ್ವಜನಿಕರು ಹೋರಾಟ ಸಮಿತಿಯವರು ಕೂಡ ಒಂದಷ್ಟು ಹೋರಾಟ ಪ್ರತಿಭಟನೆ ಮಾಡಿದ್ರು ಕೂಡ ಯಾವುದೇ ಪ್ರಯೋಜನ ವಾಗಿಲ್ಲ ಕಾಮಗಾರಿ ಶೀಘ್ರದಲ್ಲಿ ಪೂರ್ಣ ಗೊಳ್ಳುವ ಲಕ್ಷಣ ಗಳು ಮೇಲ್ನೋಟಕ್ಕೆ ಕಾಣುತ್ತಿಲ್ಲ
ಈ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬ ಖಂಡಿಸಿ ಉಡುಪಿ ನಾಗರಿಕ ಸಮಿತಿ ನೇತೃತ್ವದಲ್ಲಿ ಇಂದು ಅಣಕು ಶವ ಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರು ಅಣಕು ಶವ ಯಾತ್ರೆ ಮೂಲಕ ವಿಶಿಷ್ಟ ರೀತಿಯ ಪ್ರತಿಭಟನೆ ನಡೆಸಿದರು. ತಕ್ಷಣವೇ ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಲಾಯಿತು.
ನಿತ್ಯಾನಂದ ಒಳಕಾಡು ಏನು ಹೇಳ್ತಾರೆ??
ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಮಾತನಾಡಿ, ಈ ರಸ್ತೆ ಕಾಮಗಾರಿ ಶೀಘ್ರವೇ ಮುಗಿಯಬೇಕು. ಜಿಲ್ಲಾಧಿಕಾರಿ, ಎಸ್ಪಿ ಮಾತಿಗೂ ಕವಡೆ ಕಾಸಿನ ಕಿಮ್ಮಿತ್ತಿಲ್ಲ. ಇಲ್ಲಿನ ಸಂಸದರಿಂದ ಯಾವುದೇ ಕೆಲಸ ಆಗುತ್ತಿಲ್ಲ. ಶಾಲಾ ಮಕ್ಕಳು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದು ಕೊನೆಯ ಹೋರಾಟ. ಜೀವ ಹಾನಿ ಆಗುವುದನ್ನು ತಪ್ಪಿಸುವುದೇ ನಮ್ಮ ಉದ್ದೇಶ. ಅದಕ್ಕಾಗಿ ನಾವು ಜೀವಂತ ಶವವನ್ನು ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಹರೀಶ್ ಪೂಜಾರಿ, ವಿನಯ ಸಾಸ್ತಾನ, ಗಣೇಶ್ ರಾಜ್ ಸರಳೇಬೆಟ್ಟು, ಯಾದವ್ ಆಚಾರ್ಯ ದೊಡ್ಡಣಗುಡ್ಡೆ, ಸತೀಶ್ ಕುಮಾರ್ ಉಡುಪಿ, ನೀತು ನಿಟ್ಟೂರು, ಸಂದೀಪ್ ಕಲ್ಮಾಡಿ, ಬಾಲಚಂದ್ರ ರಾವ್ ಉಪಸ್ಥಿತರಿದ್ದರು.