ಕಾರ್ಕಳ,:ಮಾರ್ಚ್ 04: ಜಮೈತುಲ್ ಫಲಹ ಉಬಯ ಜಿಲ್ಲೆಗಳ ಕೇಂದ್ರ ಸಮಿತಿ ಮಂಗಳೂರು ಇವರ ವತಿಯಿಂದ ನೀಡಿದ ಕಾರ್ಕಳ ತಾಲೂಕಿನ ಅತಿ 80 ಬಡ ಕುಟುಂಬಗಳಿಗೆ ರಂಜಾನ್ ತಿಂಗಳಲ್ಲಿ ಎಲ್ಲರಂತೆ ಆ ಬಡ ಕುಟುಂಬಗಳು ರಂಜಾನಿನ ಪವಿತ್ರ ಉಪವಾಸ ವ್ರತ ಆಚರಿಸಲು ಆಹಾರದ ಸಾಮಗ್ರಿಗಳ ಕೀಟ್ ಗಳನ್ನು ಮಾರ್ಚ್ 3ರಂದು ಕಾರ್ಕಳ ಘಟಕದ ಕಚೇರಿಯಲ್ಲಿ ಸಾಂಕೇತಿಕವಾಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಘಟಕದ ಅಧ್ಯಕ್ಷರಾದ ಅಶ್ಫಾಖ್ ನಾವು ಕಾರ್ಕಳ ತಾಲೂಕಿನ ಅತಿ ಬಡ ಕುಟುಂಬಗಳನ್ನು ಗುರುತಿಸಿ, ಆ ಕುಟುಂಬಗಳು ಕೂಡ ನಮ್ಮಂತೆ ಉಪವಾಸ ವ್ರತವನ್ನು ತುಂಬ ಸಂತೋಷದಿಂದ ಹಾಗೂ ನೆಮ್ಮದಿಯಿಂದ ಆಚರಿಸಬೇಕೆಂಬ ಉದ್ದೇಶದಿಂದ ನಾವು ಈ ಆಹಾರದ ಕಿಟ್ ಗಳನ್ನು ನಮ್ಮ ಘಟಕದ ಸದಸ್ಯರು ಅವರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಕಳ ಘಟಕದ ಸದಸ್ಯರಾದ ಅಬ್ದುಲ್ ಲತೀಫ್ ಸಾಣೂರು ಮೊಹಮ್ಮದ್ ಗೌಸ್, ನಾಸಿರ್ ಇಂಜಿನಿಯರ್, ಮೊಹಮ್ಮದ್ ಹುಸೇನ್, ಸುಲೇಮಾನ್ ಬಜೆಗೋಳಿ, ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.








