ಕಾಂತಾವರ :ಮಾರ್ಚ್ 04: ಪ್ರಕೃತಿ ಸಮೂಹ ವಿದ್ಯಾ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು .
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಶಕುಂತಲಾರವರು ನಮ್ಮ ವಿಜ್ಞಾನ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ವಿಜ್ಞಾನಿಗಳನ್ನು ಸ್ಮರಿಸುತ್ತಾ , ವಿಜ್ಞಾನಕ್ಕೆ ಸಂಬಂಧಿಸಿದ ಕೆಲವೊಂದು ಮಾಹಿತಿಯನ್ನು ನೀಡಿದರು. ನಮ್ಮ ಸಂಸ್ಥೆಯ 8ನೇ ತರಗತಿಯ ವಿದ್ಯಾರ್ಥಿನಿಯಾದ ಖುಷಿಯವರು ಸಿ.ವಿ .ರಾಮನ್ ಕುರಿತು ಮಾತಾನಾಡಿದಳು.
ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಜಯ ಶೆಣೈ ರವರು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುವ ಉದ್ದೇಶವನ್ನು ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಸೇರಿ ಮಾದರಿ ಉಪಕರಣಗಳನ್ನು ತಯಾರಿಸಿ ಸಂತಸವನ್ನು ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಮಧುಸೂದ ನ್ ಸಿಂಧ್ಯ್ ರವರು ಉಪಸ್ಥಿತರಿದ್ದರು. ಶ್ರೀಮತಿ ಸೌಮ್ಯರವರು ಎಲ್ಲರನ್ನೂ ಸ್ವಾಗತಿಸಿ, ಶ್ರೀಮತಿ ಸೌರಭ ಜಿ. ರವರು ವಂದಿಸಿ,
ಶ್ರೀಮತಿ ಸುಪ್ರೀಯರವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಎಲ್ಲಾ ಶಿಕ್ಷಕ ವೃಂದಾದವರು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.