ಉಡುಪಿ :ಫೆಬ್ರವರಿ 19:ನಗರಸಭೆಯ ನಗರೋತ್ಥಾನ 4 ನೇ ಹಂತದ ಅನುದಾನದಡಿ ಶೇ.24.10, ಶೇ. 7.25 ಮತ್ತು ಶೇ. 5 ಕ್ಕೆ ಮಂಜೂರಾದ ಮೊತ್ತದಲ್ಲಿ ವ್ಯಕ್ತಿ ಸಂಬಂಧಿಸಿದ ಸೌಲಭ್ಯಗಳಲ್ಲಿ ಹೊಲಿಗೆ ಯಂತ್ರ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
ಬೇಕಾಗುವ ದಾಖಲಾತಿಗಳು,ಜಾತಿ ಮತ್ತು ಆದಾಯ ದೃಢಪತ್ರ, ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ, ಪಡಿತರ ಚೀಟಿ ಪ್ರತಿ, ಆಧಾರ್‌ಕಾರ್ಡ್, ಅರ್ಜಿದಾರರ ಭಾವಚಿತ್ರ, ಹೊಲಿಗೆ ತರಬೇತಿ ಪಡೆದ ಬಗ್ಗೆ ದೃಢಪತ್ರದ ಪ್ರತಿ
ಆಸಕ್ತರು ಮಾರ್ಚ್ 10 ರ ಒಳಗಾಗಿ ಪೌರಾಯುಕ್ತರು, ನಗರಸಭೆ ಉಡುಪಿ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.