ಉಡುಪಿ :ಫೆಬ್ರವರಿ 18: ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಮೃತಪಟ್ಟು ಇನ್ನೊರ್ವ ಗಂಭೀರ ಗಾಯ ಗೊಂಡ ಘಟನೆ ಫೆಬ್ರವರಿ 17ರಂದು ರಾತ್ರಿ 8:30ಕ್ಕೆ ಅಜ್ಜರಕಾಡು ಅಗ್ನಿಶಾಮಕ ದಳದ ಗೇಟ್ ಮುಂಭಾಗದಲ್ಲಿ ನಡೆದಿದೆ
ಮೃತ ವ್ಯಕ್ತಿ ಸ್ಯಾಮ್‌ವೆಲ್ ಸದಾನಂದ ಕರ್ಕಡ (59) ಉಡುಪಿ ಮಿಷನ್ ಆಸ್ಪತ್ರೆ ಬಳಿ ನಿವಾಸಿ. ಎರಡು ದಿನಗಳ ಹಿಂದೆ ಎಷ್ಟೇ ವಿದೇಶದಿಂದ ಆಗಮಿಸಿದ್ದರು ಎಂದು ತಿಳಿದು ಬಂದಿದೆ
ಮತ್ತೋರ್ವ ದ್ವಿಚಕ್ರ ಸವಾರ ಗಂಭೀರ ಸ್ಥಿತಿಯಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲುಪಡಿಸಲಾಗಿದ್ದು ಜಯಲಕ್ಷ್ಮಿ ಉದ್ಯೋಗಿ ಪವನ್ ಎಂದು ತಿಳಿದುಬಂದಿದೆ.