ಬ್ರಹ್ಮಾವರ , ಫೆ.11: ಸರಕಾರ ಗ್ರಾಮ ಆಡಳಿತ ಅಧಿಕಾರಿಗಳ ಮೂಲಭೂತ ಬೇಡಿಕೆಗಳ ವಿಚಾರವಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳದ ಮತ್ತು ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ನೌಕರರು ಮತ್ತೆ ಮುಷ್ಕರವನ್ನು ನಿನ್ನೆ ಯಿಂದ ಆರಂಭಿಸಿ ದ್ದಾರೆ.
ಅದರಂತೆ ಉಡುಪಿ ಜಿಲ್ಲೆಯ ಏಳು ಕಚೇರಿಗಳ ಮುಂದೆ ಆಯಾ ತಾಲೂಕು ಗ್ರಾಮ ಆಡಳಿತ ಅಕಾರಿಗಳ ಸಂಘಗಳ ನೇತೃತ್ವ ದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಧರಣಿ ನಡೆಸಲಾಯಿತು.
ಇಂದು ಎಲ್ಲಾ ಬಗೆಯ ಮೊಬೈಲ್ ಆಪ್ ಹಾಗೂ ವೆಬ್ ಅಪ್ಲಿಕೇಷನ್ ಅನ್ನು ಸ್ಥಗಿತಗೊಳಿಸಿ, ಲೇಖನಿ ಸ್ಥಗಿತಗೊಳಿಸುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರವನ್ನು ಉಡುಪಿ, ಕುಂದಾಪುರ, ಕಾಪು, ಹೆಬ್ರಿ, ಕಾರ್ಕಳ, ಬೈಂದೂರು, ಬ್ರಹ್ಮಾವರ ತಾಲೂಕು ಕಚೇರಿಗಳ ಮುಂದೆ ಆರಂಭಿಸಲಾಯಿತು.
ಮೂರು ದಿನಗಳ ಕಾಲ ತಾಲೂಕು ಹಂತದಲ್ಲಿ ನಡೆದು ಬಳಿಕ ಜಿಲ್ಲಾ ಹಂತದಲ್ಲಿ ಪ್ರತಿಭಟನೆ ನಡೆಯಲಿದೆ.
ಕಳೆದ ವರ್ಷ ಸೆ.26ರಿಂದ ಅ.3ರವರೆಗೆ ನಡೆ ರಾಜ್ಯಾದ್ಯಂತ ಮುಷ್ಕರದ ಹಿನ್ನೆಲೆಯಲ್ಲಿ ಸರಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಭೆ ನಡೆಸಿ, ಗ್ರಾಮ ಆಡಳಿತ ಅಕಾರಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಅದರಂತೆ ರಾಜ್ಯವ್ಯಾಪಿ ಮುಷ್ಕರ ಹಿಂಪಡೆಯಲಾಗಿತ್ತು.