ಉಡುಪಿ : ಫೆಬ್ರವರಿ 11:ಅಂಬಾಗಿಲು ಪೆರಂಪಳ್ಳಿ ರಸ್ತೆಯ ಸಂತೋಷ್ ನಗರದಲ್ಲಿ ಮಂಗಳವಾರ( ಫೆ.11) ರಂದು ಗುಜರಿ ಸಾಮಾನು ದಾಸ್ತಾನಿಗೆ ಬೆಂಕಿ ಬಿದ್ದು ಅವಘಡ ಸಂಭವಿಸಿದೆ.
ಗುಜರಿ ದಾಸ್ತಾನಿನಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸುತ್ತಮುತ್ತಲು ಮನೆಗಳು ಇರುವುದರಿಂದ ಸುತ್ತಮುತ್ತಲ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.ಸ್ಥಳೀಯರು, ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದು ಕಾರ್ಯಾಚರಣೆ ಮುಂದುವರೆದಿದೆ .ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ