ಮಂಗಳೂರು :ಜನವರಿ 30:ಪ್ರೇತ ಕಾಟ ಅಧಿಕವಾಗಿರುವ ಹಿನ್ನೆಲೆಯಲ್ಲಿ ಅದರ ಉಚ್ಚಾಟನೆ ಮತ್ತು ಅನ್ಯಪ್ರೇತ ಉಚ್ಛಾಟನೆಗಾಗಿ ನಗರದ ಕೊಟ್ಟಾರ ಸಮೀಪ ಜ.30ರ ಮಧ್ಯರಾತ್ರಿ ರಸ್ತೆ ಸಂಚಾರವನ್ನೇ ನಿಷೇಧಿಸಲಾಗಿತ್ತು
ಕೊಟ್ಟಾರ ಸಮೀಪದ ಅಬ್ಬಕ್ಕನಗರ ಭಾಗದಲ್ಲಿ ಪ್ರೇತಕಾಟ ಅಧಿಕವಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಇದರಂತೆ ತಾಂಬೂಲ ಪ್ರಶ್ನೆ ಇಟ್ಟು ಪರಿಶೀಲನೆ ನಡೆಸಿದಾಗ ಉಚ್ಚಾಟನೆ ಕ್ರಮ ಮಾಡಬೇಕೆಂದು ತಿಳಿಸಲಾಗಿತ್ತು.
ಅದರಂತೆ ಪ್ರೇತ ಉಚ್ಚಾಟನೆ ಕ್ರಮವನ್ನು ನಿನ್ನೆ ರಾತ್ರಿ ಮಾಡಲಾಗಿದೆ. ದರ್ಶನ ಸೇವೆ ನಡೆಸಿದ ಬಳಿಕ ಈ ಕ್ರಮ ನೆರವೇರಿದೆ. ಈ ಸಂದರ್ಭ ಜನರ ಹಿತದೃಷ್ಟಿಯಿಂದ ರಸ್ತೆ ಸಂಚಾರವನ್ನು ಸ್ಥಳೀಯರೇ ನಿಷೇಧಿಸಿದ್ದರು.