ಉಡುಪಿ :ಜನವರಿ 21:ಸಹಕಾರಿ ಸಂಸ್ಥೆಯೊಂದಕ್ಕೆ 40 ಸಾವಿರ ರೂ. ಮೌಲ್ಯದ ಚೆಕ್ ನೀಡಿ ಅದು ಅಮಾನ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಣಿಪಾಲದ ರಾಜು ಅವರನ್ನು ದೋಷಮುಕ್ತಗೊಳಿಸಿ ಉಡುಪಿಯ ಎರಡನೇ ಹೆಚ್ಚುವರಿ ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ವಿನಾಯಕ ವಾನಖಂಡೆ ಆದೇಶಿಸಿದ್ದಾರೆ
ಈ ಪ್ರಕರಣ ಸಂಬಂಧ ರಾಜು ವಿರುದ್ಧ ಚೆಕ್ ಅಮಾನ್ಯತೆಯ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ರಾಜು ಅವರ ಮೇಲಿನ ಆರೋಪ ಸಾಬೀತಾಗದ ಕಾರಣಕ್ಕೆ ದೋಷಮುಕ್ತಗೊಳಿಸಿದೆ. ಆರೋಪಿ ಪರ ನ್ಯಾಯವಾದಿ ಬಿ. ಗಿರೀಶ್ ಐತಾಳ್ ವಾದಿಸಿದ್ದರು.








