Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳು ಈಡೇರಿಸಿದ ಸಂತೃಪ್ತಿ ಕಾಂಗ್ರೆಸ್ ಸರಕಾರಕ್ಕಿದೆ: ಅಶೋಕ್ ಕೊಡವೂರು..!!

Dhrishya News by Dhrishya News
17/12/2024
in मौसम
0
0
SHARES
17
VIEWS
Share on FacebookShare on Twitter

ಕಾರ್ಕಳ: ಡಿಸೆಂಬರ್ 17:ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷವು ನೀಡಿದ ಪಂಚ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಸಂತೃಪ್ತಿ ಸಿದ್ಧರಾಮಯ್ಯ ಕಾಂಗ್ರೆಸ್ ಸರಕಾರಕ್ಕೆ ಇದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಹೇಳಿದರು.

ಡಿ. ೧೭ರಂದು ನಡೆದ ಕಾರ್ಕಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಕಚೇರಿ ಉದ್ಘಾಟನೆ, ಅಧ್ಯಕ್ಷರ ಅಧಿಕಾರ ಸ್ವೀಕಾರ ಹಾಗೂ ಅನುಷ್ಠಾನ ಸಮಿತಿಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.  

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಪೂರ್ವ ಸಂದರ್ಭ ನಿಖಿತವಾಗಿ ಸಹಿ ಹಾಕಿ ನೀಡಿದ ಭರವಸೆಗಳನ್ನು ಇಂದು ಸಮಾಜದ ಕಟ್ಟ ಕಡೆಯ ಅರ್ಹ ಫಲಾನುಭವಿಗಳು ಪಡೆದುಕೊಳ್ಳುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ಜನರು ಪಟ್ಟ ಕಷ್ಟ ಅರಿತು ಈ ಪಂಚ ಉಚಿತ ಯೋಜನೆಗಳನ್ನು ಜಾರಿಗೆ ಗೊಳಿಸ ಲಾಗಿದೆ. ಅಧಿಕಾರಿ ವರ್ಗ ಹಾಗೂ ಅನುಷ್ಠಾನ ಸಮಿತಿ ಜೊತೆಯಾಗಿ ಕೆಲಸ ಮಾಡಿದಾಗ ಸರಕಾರದ ಯೋಜನೆಗಳು ಇನ್ನಷ್ಟು ಜನರಿಗೆ ತಲುಪಲು ಸಾಧ್ಯವಾಗಲಿದೆ ಎಂದರು. ಮುಂದಿನ ದಿನಗಳಲ್ಲಿ ಅನುಷ್ಠಾನ ಸಮಿತಿಯು ಪ್ರತಿಯೊಬ್ಬ ಫಲಾನುಭವಿಗಳಿಗೆ ಸರಕಾರದ ಯೋಜನೆಗಳು ತಲುಪುವ ಹಾಗೆ ಕೆಲಸ ಮಾಡಲಾಗುವುದು ಎಂದರು.

ಪಂಚ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ ಸರಕಾರ ಅಧಿಕಾರ ವಹಿಸಿಕೊಂಡ ೨೪ ಗಂಟೆ ಒಳಗೆ ನೀಡಿದ ಭರವಸೆಗಳನ್ನು ಪೂರೈಸಿದ ಸರಕಾರ ಎಂಬ ಖ್ಯಾತಿಗೆ ಸಿದ್ದರಾಮಯ್ಯ ಸರಕಾರ ಪಾತ್ರವಾಗಿದೆ. 

ಬಡತನದ ಕಾಳಜಿ ಅರಿತು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದರಿಂದ ಹಲವಾರು ಮಂದಿ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆಯುವಂತಾಗಿದೆ. ಪ್ರಚಾರ ಪಡೆಯದೆ ಸರಕಾರದ ಯೋಜನೆಯನ್ನು ಜನರಗೆ ತಲುಪಿದೆ ಎಂದರು. ಪಂಚ ಗ್ಯಾರಂಟಿಗಳನ್ನು ನೀಡಿದ ರಾಜ್ಯ ಇದ್ದರೆ ಅದು ಕರ್ನಾಟಕ, ಅದರಲ್ಲೂ ಪಂಚ ಗ್ಯಾರಂಟಿಗಳನ್ನು ಪ್ರಪ್ರಥಮವಾಗಿ ಪಡೆದುಕೊಂಡವರು ಉಡುಪಿ ಜಿಲ್ಲೆಯವರು ಎಂದರು. 

ಯೋಜನೆಯನ್ನು ಟೀಕಿಸುವರು ಎಲ್ಲಾ ಸವಲತ್ತುಗಳನ್ನು ಬಿಡಬಹುದು ಎಂದು ಮನವಿ ಮಾಡಿದರು. ಪಂಚ ಗ್ಯಾರಂಟಿ ನೀಡುವುದರಿಂದ ಸರಕಾರ ದಿವಾಳಿಯಾಗುತ್ತದೆ ಎಂದು ಹೇಳುವವರು ಸರಕಾರದ ಸವಲತ್ತನ್ನು ಪಡೆಯದೆ ಯೋಜನೆಯನ್ನು ಬಿಡಬಹುದು ಇದರಿಂದ ಉಳಿಕೆಯಾದ ಹಣ ಬಡವರಿಗಾಗಿ ಬೇರೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದರು. ಸಮಿತಿಯ ಸದಸ್ಯರು ಟೀಕೆ ಮಾಡುವವರಿಗೆ ಈ ಯೋಜನೆ ಬಿಡುವಂತೆ ಮನವಿ ಮಾಡಿ ಎಂದು ತಿಳಿಸಿದರು. 

ಕಾರ್ಕಳ ತಾಲೂಕು ಅನುಷ್ಠಾನ ಸಮಿತಿಗಳ ಅಧ್ಯಕ್ಷರಾದ ಅಜಿತ್ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸರಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಲು ಅನುಷ್ಠಾನ ಸಮಿತಿಯು ಕೆಲಸ ಮಾಡಲಿದೆ ಎಂದರು. ಫಲಾನುಭವಿಗಳು ಈ ಯೋಜನೆಗಳಿಂದ ಸಮಸ್ಯೆ ಉಂಟಾದಲ್ಲಿ ನಮ್ಮನ್ನ ಸಂಪರ್ಕಿಸುವಂತೆ ತಿಳಿಸಿದರು. 

ತಹಶೀಲ್ದಾರ್ ಪ್ರದೀಪ್ ಆರ್., ಅನುಷ್ಠಾನ ಸಮಿತಿಯ ಕಾರ್ಯದರ್ಶಿ ಶಶಿಧರ್, ಪುರಸಭಾ ಮುಖ್ಯ ಅಧಿಕಾರಿ ರೇಖಾ ಶೆಟ್ಟಿ ಹಾಗೂ ಅನುಷ್ಠಾನ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Previous Post

ನಿಮ್ಮ ಸೂಕ್ಷ್ಮಜೀವಿಯ ಮಾದರಿ 2024: ಅತ್ಯಂತ ಸುಂದರವಾದ ಸೂಕ್ಷ್ಮಜೀವಿಯ ಸೃಜನಶೀಲ ಅನ್ವೇಷಣೆ..!!

Next Post

ಗೀತಾಮೃತಸಾರ ಮರುಮುದ್ರಿತ ಕೃತಿ ಅನಾವರಣ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಗೀತಾಮೃತಸಾರ ಮರುಮುದ್ರಿತ ಕೃತಿ ಅನಾವರಣ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಈದುಲ್ ಫಿತರ್ ಹಿನ್ನೆಲೆ: ಮಾ.20ರಂದು ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ..!!

ಈದುಲ್ ಫಿತರ್ ಹಿನ್ನೆಲೆ: ಮಾ.20ರಂದು ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ..!!

19/03/2026
ಕಡಬ: ಔಷಧ ಸೇವನೆಯ ಬಳಿಕ ಬಾಲಕನ ಸಂಶಯಾಸ್ಪದ ಸಾವು….!

ಕಡಬ: ಔಷಧ ಸೇವನೆಯ ಬಳಿಕ ಬಾಲಕನ ಸಂಶಯಾಸ್ಪದ ಸಾವು….!

19/03/2026
ಅಕ್ರಮ ಜಾನುವಾರು ವಧೆ ಶೆಡ್ ಮೇಲೆ ದಾಳಿ: 9 ಜಾನುವಾರು ರಕ್ಷಣೆ, 205 ಕೆ.ಜಿ. ಮಾಂಸ ವಶ….!

ಅಕ್ರಮ ಜಾನುವಾರು ವಧೆ ಶೆಡ್ ಮೇಲೆ ದಾಳಿ: 9 ಜಾನುವಾರು ರಕ್ಷಣೆ, 205 ಕೆ.ಜಿ. ಮಾಂಸ ವಶ….!

19/03/2026
ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ….!

ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ….!

19/03/2026

Recent News

ಈದುಲ್ ಫಿತರ್ ಹಿನ್ನೆಲೆ: ಮಾ.20ರಂದು ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ..!!

ಈದುಲ್ ಫಿತರ್ ಹಿನ್ನೆಲೆ: ಮಾ.20ರಂದು ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ..!!

19/03/2026
ಕಡಬ: ಔಷಧ ಸೇವನೆಯ ಬಳಿಕ ಬಾಲಕನ ಸಂಶಯಾಸ್ಪದ ಸಾವು….!

ಕಡಬ: ಔಷಧ ಸೇವನೆಯ ಬಳಿಕ ಬಾಲಕನ ಸಂಶಯಾಸ್ಪದ ಸಾವು….!

19/03/2026
ಅಕ್ರಮ ಜಾನುವಾರು ವಧೆ ಶೆಡ್ ಮೇಲೆ ದಾಳಿ: 9 ಜಾನುವಾರು ರಕ್ಷಣೆ, 205 ಕೆ.ಜಿ. ಮಾಂಸ ವಶ….!

ಅಕ್ರಮ ಜಾನುವಾರು ವಧೆ ಶೆಡ್ ಮೇಲೆ ದಾಳಿ: 9 ಜಾನುವಾರು ರಕ್ಷಣೆ, 205 ಕೆ.ಜಿ. ಮಾಂಸ ವಶ….!

19/03/2026
ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ….!

ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ….!

19/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved