Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಉಡುಪಿ :ಸಹಪಾಠಿ ಶ್ರೀಪಾದರೊಂದಿಗೆ ಜನ್ಮದಿನವನ್ನು ಆಚರಿಸಿದ ಪುತ್ತಿಗೆಶ್ರೀ..!!

Dhrishya News by Dhrishya News
10/09/2024
in ಸುದ್ದಿಗಳು
0
0
SHARES
13
VIEWS
Share on FacebookShare on Twitter

ಉಡುಪಿ : ಸೆಪ್ಟೆಂಬರ್ 10: ಪರ್ಯಾಯ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ 63ನೇ ಜನ್ಮನಕ್ಷತ್ರದ ಶುಭಸಂದರ್ಭದಲ್ಲಿ ತಮ್ಮ ಸಹಪಾಠಿಗಳಾದ ಪರಮಪೂಜ್ಯ ಅದಮಾರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರನ್ನು ಹಾಗೂ ಭಂಡಾರಕೇರಿ ಮಠಾಧೀಶರಾದ ಶ್ರೀ ಶ್ರೀ ವಿದೇಶತೀರ್ಥ ಶ್ರೀಪಾದರನ್ನು ಗಂಧಾದ್ಯುಪಚಾರಗಳಿಂದ ಗೌರವಿಸುವ ಮೂಲಕ ಸಂಭ್ರಮವನ್ನು ಹಂಚಿಕೊಂಡರು.

ಪುತ್ತಿಗೆ ಕಿರಿಯ ಶ್ರೀಪಾದರಾದ ಪೂಜ್ಯ ಶ್ರೀ ಶ್ರೀ ಸುಶ್ರಿಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮತ್ತು ಅನೇಕ ವಿದ್ವಾಂಸರ ಹಾಗೂ ಶ್ರೀಪುತ್ತಿಗೆ ವಿದ್ಯಾಪೀಠದ ಅನೇಕ ಹಳೆವಿದ್ಯಾರ್ಥಿಗಳ ಸಮ್ಮುಖದಲ್ಲಿ ಶ್ರೀಕೃಷ್ಣಮಠದಲ್ಲಿ ಜರುಗಿದ ಈ ಸಮಾರಂಭದಲ್ಲಿ ಪರ್ಯಾಯ ಮಠದ ವತಿಯಿಂದ ದಿವಾನರಾದ ಶ್ರೀ ನಾಗರಾಜ ಆಚಾರ್ಯ ಮತ್ತು ಕಾರ್ಯದರ್ಶಿ ಪ್ರಸನ್ನಾಚಾರ್ಯರು ಅದಮಾರು ಮತ್ತು ಭಂಡಾರಕೇರಿ ಶ್ರೀಪಾದಂಗಳವರನ್ನು ಮಾಲಿಕೆ ಮಂಗಳಾರತಿ ಮಾಡಿ ಸಂಸ್ಥಾನಗೌರವವನ್ನು ಅರ್ಪಿಸಿದರು. ಪೂಜ್ಯ ಪರ್ಯಾಯ ಶ್ರೀಪಾದರು ಗಂಧಾದ್ಯುಪಚಾರಗಳನ್ನು ಮಾಡಿ ಇತರರನ್ನೂ ಸತ್ಕರಿಸಿದರು. ತಮ್ಮ ವಿದ್ಯಾಭ್ಯಾಸಕಾಲವನ್ನು ಸ್ಮರಿಸುತ್ತಾ ತಮ್ಮ ಈರ್ವರು ಸಹಪಾಠಿಗಳ ಉಪಸ್ಥಿತಿಯಲ್ಲಿ ತಮ್ಮ ಜನ್ಮದಿನಾಚರಣೆಯನ್ನು ಮಾಡಿಕೊಳ್ಳುತ್ತಿರುವ ಬಗ್ಗೆ ಅತ್ಯಂತ ಸಂತಸ ವ್ಯಕ್ತಪಡಿಸುತ್ತಾ ತಮ್ಮೆಲ್ಲ ಸಾಧನೆಗಳಿಗೆ ಸ್ಫೂರ್ತಿದಾಯಕ ರಾಗಿ ವಿಬುಧೇಶತೀರ್ಥರ ನೆನಪಲ್ಲಿ ವಿಶ್ವಪ್ರಿಯರನ್ನು, ಗುರು ವಿದ್ಯಾಮಾನ್ಯರ ಪ್ರತೀಕರಾಗಿ ಶ್ರೀ ಶ್ರೀ ವಿದ್ವೇಶತೀರ್ಥರನ್ನು ಕಾಣುತ್ತಿದ್ದೇವೆ. ಇವರಿಬ್ಬರ ಆಶೀರ್ವಾದ ಫಲವನ್ನು ಇಲ್ಲಿ ನೋಡುತ್ತಿದ್ದೇವೆ ಎಂದು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಪೂಜ್ಯ ಆದಮಾರು ಶ್ರೀಪಾದರು ಶ್ರೀಪುತ್ತಿಗೆ ಶ್ರೀಗಳನ್ನು ಶಾಲು ಹೊದಿಸಿ ಸನ್ಮಾನಿಸುತ್ತಾ ಶ್ರೀಪಾದರು ವಿಶ್ವಂಭರನೆನಿಸಿದ ಗಣೇಶನ ಹಬ್ಬದ ದಿನಗಳ ಮಧ್ಯೆ ಹುಟ್ಟಿದ್ದರಿಂದ ವಿಶ್ವದಾದ್ಯಂತ ಧರ್ಮಪ್ರಚಾರ ಮಾಡುತ್ತಾ ವಿಶ್ವಂಭರನ ಕೃಪೆಗೆ ಪಾತ್ರರಾಗಿದ್ದಾರೆ. ಇವರ ಸಾಧನೆ ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಅನುಗ್ರಹಿಸಿದರು.

ಪೂಜ್ಯ ವಿದೇಶತೀರ್ಥ ಶ್ರೀಪಾದರು ಪುತ್ತಿಗೆ ಶ್ರೀಯವರನ್ನು ಗೌರವಿಸಿ ಮಾತನಾಡುತ್ತಾ, ಶ್ರೀಗಳ ಬಾಲ್ಯ ಸಾಧನೆಗಳನ್ನು ನೆನಪಿಸಿ, ಧರ್ಮ ಪ್ರಚಾರಕ್ಕೆ ಶ್ರೀಪಾದರು ಸುಗುಣ ವಿದ್ಯಾಪೀಠ ಮತ್ತು ಸುಗುಣಮಾಲಾ ಪತ್ರಿಕೆಗಳ ರೂಪದಲ್ಲಿ ಧರ್ಮಪ್ರಚಾರವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುತ್ತಿರುವುದನ್ನು ಶ್ಲಾಘಿಸಿ ಶುಭಕೋರಿದರು.

ಪುತ್ತಿಗೆ ಕಿರಿಯ ಶ್ರೀಪಾದರು ಮಾತನಾಡುತ್ತಾ, ಗುರುಗಳು 63ರಂತೆ ಇಲ್ಲದೆ 36 ವರ್ಷದಂತೆ ಯುವ ಉತ್ಸಾಹದಲ್ಲಿ ಕರ್ತವ್ಯಗಳನ್ನು ನಡೆ
ಸುತ್ತಿದ್ದು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಅವರ ಅನುಗ್ರಹದಿಂದ ನಾವು ಸಾಧನೆ ಮಾಡುವಂತಾಗಲಿ ಎಂದು ಪ್ರಾರ್ಥಿಸಿದರು. ಗುರುಗಳಿಗೆ ಪುಷ್ಪದ ಕಿರೀಟವನ್ನು ತೊಡಿಸಿ ನಮನ ಸಲ್ಲಿಸಿದರು.

ಪೂಜ್ಯ ಶ್ರೀಪಾದಂಗಳವರಿಗೆ ಶ್ರೀಪುತ್ತಿಗೆ ವಿದ್ಯಾಪೀಠದ ಹಳೆವಿದ್ಯಾರ್ಥಿಗಳು ಮತ್ತು ಮಠದ ಸಿಬ್ಬಂದಿ ವರ್ಗದವರು ಮಾಲಿಕೆ ಮಂಗಳಾರತಿಯೊಂದಿಗೆ ವಿಶೇಷ ಗೌರವವನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಶ್ರೀಪಾದರ ಎರಡು ಕೃತಿಗಳನ್ನು ಆದಮಾರು ಹಿರಿಯ ಶ್ರೀಪಾದರು ಮತ್ತು ಭಂಡಾರಕೇರಿ ಶ್ರೀಪಾದಂಗಳವರು ಬಿಡುಗಡೆಗೊಳಿಸಿದರು. ಕೃತಿಸಂಗ್ರಹವನ್ನು ಮಾಡಿ ಪ್ರಕಟಿಸಲು ಶ್ರಮಿಸಿದ ಶ್ರೀ ಓಂಪ್ರಕಾಶ ಭಟ್ಟರನ್ನು ಶ್ರೀಪಾದರು ಗೌರವಿಸಿದರು. ಶ್ರೀಮಠದ ವಿದ್ವಾಂಸರಾದ ವಿದ್ವಾನ್ ಬಿ. ಗೋಪಾಲಾಚಾರ್ಯ ಕಾರ್ಯಕ್ರಮವನ್ನು ನಿರ್ವಹಿಸಿ ಧನ್ಯವಾದವಿತ್ತರು.

Previous Post

ನಾಳೆಯಿಂದ ಮೂರು ದಿನಗಳ ನಡೆಯಲಿರುವ ಸೆಮಿಕಾನ್ ಇಂಡಿಯಾ 2024 ಸಮಾವೇಶ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆ..!

Next Post

ಮತ್ಸ್ಯ ಸಂಪದ ಯೋಜನೆಯಡಿ ಮತ್ಸ್ಯಾವಾಹಿನಿ’ ವಾಹನಗಳಲ್ಲಿ ಮೀನು ಮಾರಾಟಕ್ಕಾಗಿ ಅರ್ಜಿ ಅಹ್ವಾನ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಮತ್ಸ್ಯ ಸಂಪದ ಯೋಜನೆಯಡಿ ಮತ್ಸ್ಯಾವಾಹಿನಿ' ವಾಹನಗಳಲ್ಲಿ ಮೀನು ಮಾರಾಟಕ್ಕಾಗಿ ಅರ್ಜಿ ಅಹ್ವಾನ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

13/08/2026
ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

13/08/2026
ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

13/08/2026
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

13/08/2026

Recent News