Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಾಹೆಯ ಎಂಕಾಪ್ಸ್‌ನಿಂದ 3 ನೆಯ ರಾಷ್ಟ್ರೀಯ ಮಣಿಪಾಲ್‌ ಫಾರ್ಮಾಸ್ಯುಟಿಕ್ಸ್‌ ಸಮಾವೇಶ…!!

Dhrishya News by Dhrishya News
01/09/2024
in ಸುದ್ದಿಗಳು
0
0
SHARES
17
VIEWS
Share on FacebookShare on Twitter

ಮಣಿಪಾಲ, ಸೆಪ್ಟೆಂಬರ್ 01: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ವತಿಯಿಂದ ಮಣಿಪಾಲ್‌ ಕಾಲೇಜ್‌ ಆಫ್‌ ಫಾರ್ಮಾಸ್ಯುಟಿಕಲ್‌ ಸಾಯನ್ಸಸ್‌ [ಎಂಕಾಪ್ಸ್‌]ನ ಫಾರ್ಮಾಸ್ಯುಟಿಕ್ಸ್‌ ವಿಭಾಗದ ವತಿಯಿಂದ ಮಣಿಪಾಲದಲ್ಲಿ ಆಗಸ್ಟ್‌ 29 ರಿಂದ 31 ರವರೆಗೆ 3 ನೆಯ ರಾಷ್ಟ್ರೀಯ ಮಣಿಪಾಲ್‌ ಫಾರ್ಮಾಸ್ಯುಟಿಕ್ಸ್‌ ಸಮಾವೇಶ [ಎಂಪಿಕಾನ್‌-2024] ಆಯೋಜನೆಗೊಂಡಿತು. ಮಾಹೆಯ ಎಂಕಾಪ್ಸ್‌ ಆವರಣದಲ್ಲಿ ಔಷಧೀಯ ವಿಜ್ಞಾನದ ತಜ್ಞರು, ಸಂಶೋಧಕರು, ವೃತ್ತಿಪರರನ್ನು ಕಲೆಹಾಕುವಲ್ಲಿ ಮಣಿಪಾಲ್‌ ಫಾರ್ಮಾಸ್ಯುಟಿಕ್ಸ್‌ ಸಮಾವೇಶ [ಎಂಪಿಕಾನ್‌-2024] ಯಶಸ್ವಿಯಾಯಿತು. ‘ಫಾರ್ಮಾಸ್ಯುಟಿಕಲ್ಸ್‌ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನದ ಒಲವುಗಳು’ ಎಂಬ ವಿಷಯ ಕೇಂದ್ರಿತವಾಗಿ, ಔಷಧ ಉದ್ಯಮವನ್ನು ರೂಪಿಸುತ್ತಿರುವ ಇತ್ತೀಚೆಗಿನ ಸುಧಾರಿತ ತಂತ್ರಜ್ಞಾನದ ಬಗ್ಗೆ ಸಮಗ್ರ ಅವಲೋಕನವನ್ನು ಈ ಸಮಾವೇಶದಲ್ಲಿ ಮಾಡಲಾಯಿತು. ವಿವಿಧ ಔಷಧೀಯ ವಿಜ್ಞಾನ ಸಂಸ್ಥೆಗಳ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಉದ್ಯಮಗಳ ಪ್ರತಿನಿಧಿಗಳು ಸೇರಿದಂತೆ 200 ಮಂದಿ ಪ್ರಮುಖರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. 

ಸಮಾವೇಶದಲ್ಲಿ ಫಾರ್ಮಾಸ್ಯುಟಿಕಲ್ಸ್‌ ಉದ್ಯಮದ ತಜ್ಞರು ಔಷಧೀಯ ವಿಜ್ಞಾನದ ಇತ್ತೀಚೆಗಿನ ತಂತ್ರಜ್ಞಾನದ ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳ ಕುರಿತು ಪ್ರಧಾನ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ನಾಲ್ಕು ಫಾರ್ಮಾಸ್ಯುಟಿಕಲ್ಸ್‌ ವಿಭಾಗಗಳಲ್ಲಿ ಸಂಶೋಧನೆ ಮತ್ತು ಪ್ರಬಂಧಗಳ ಮಂಡನೆ, ಪೋಸ್ಟರ್‌ ಪ್ರಸ್ತುತಿ, ಮೌಖಿಕ ಸ್ಪರ್ಧೆಗಳು ಜರಗಿದವು. ಆಗಸ್ಟ್‌ 29 ರಂದು ಸಮಾವೇಶ-ಪೂರ್ವ ಕಾರ್ಯಾಗಾರವನ್ನು ನಡೆಸಲಾಯಿತು. 

ಎಂಕಾಪ್ಸ್‌ನ ಪ್ರಾಂಶುಪಾಲರಾದ ಡಾ. ಶ್ರೀನಿವಾಸ ಮುತಾಲಿಕ್‌ ಅವರು, ‘ಪ್ರಸ್ತುತ ಸಮಾವೇಶದಲ್ಲಿ ಭಾಗವಹಿಸಿದವರು ಔಷಧ ವಿಜ್ಞಾನ ಕ್ಷೇತ್ರದಲ್ಲಿ ಪ್ರಸ್ತುತ ಕಾಲಘಟ್ಟದ ನಾವೀನ್ಯ ಮತ್ತು ಪರಿವರ್ತನೀಯ ಪ್ರಗತಿಗಳ ಕುರಿತ ಅನುಭವಗಳನ್ನು ಗಳಿಸುತ್ತಾರೆ. ಈ ಸಮಾವೇಶವು ಔಷಧ ಸಂಶೋಧನ ಕ್ಷೇತ್ರದಲ್ಲಿ ಮಹತ್ತ್ವದ ಪರಿಣಾಮ ಬೀರಲಿದೆ’ ಎಂಬ ಆಶಯ ವ್ಯಕ್ತಪಡಿಸಿದರು.  

ಮಣಿಪಾಲ್‌ ಫಾರ್ಮಾಸ್ಯುಟಿಕ್ಸ್‌ ಸಮಾವೇಶ [ಎಂಪಿಕಾನ್‌-2024]ನ ಸಂಯೋಜನ ಕಾರ್ಯದರ್ಶಿಯಾಗಿರುವ ಡಾ. ಶೈಲಾ ಲೂಯಿಸ್‌ ಅವರು ಮಾತನಾಡುತ್ತ, ’ಲ್ಯೂಪಿನ್‌, ನೊವೋ ನಾರ್ಡಿಸ್ಕ್, ಬಾರ್ಕ್‌ ಅಮ್ನೀಲ್‌ ಫಾರ್ಮಾಸ್ಯುಟಿಕಲ್ಸ್‌, ಬಯೋಪ್ಲಸ್‌ ಲೆಫ್‌ ಸಾಯನ್ಸಸ್‌ ಮತ್ತು ಆರ್‌ಸಿ2 ಫಾರ್ಮಾ ಸೊಲ್ಯುಶನ್ಸ್‌ ಪ್ರಮುಖ ಸಂಸ್ಥೆಗಳ ತಜ್ಞರು ಪ್ರಸ್ತುತ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದು, ಈ ಸಮಾವೇಶವು ಶೈಕ್ಷಣಿಕ-ಔದ್ಯಮಿಕ ಕ್ಷೇತ್ರಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ತ್ವದ ಉಪಕ್ರಮ [ಇನಿಶಿಯೇಟಿವ್‌] ವಾಗಿ ಆಯೋಜನೆಗೊಂಡಿದೆ. ಫಾರ್ಮಾಸ್ಯುಟಿಕಲ್ಸ್‌ನ ಹೊಸ ತಂತ್ರಜ್ಞಾನದ ಸಂಶೋಧನೆ-ಅನ್ವಯಗಳಿಗೆ ಸಂಬಂಧಿಸಿ ಸಹಭಾಗಿತ್ವದ ಬೆಳವಣಿಗೆಗಳಿಗೆ ಪೂರಕವಾದ ಸಮಾನವೇದಿಕೆಯನ್ನು ಈ ಸಮಾವೇಶ ಕಲ್ಪಿಸಿಕೊಟ್ಟಿದೆ’ ಎಂದರು. 

ಫಾರ್ಮಾಸ್ಯುಟಿಕಲ್‌ ತಂತ್ರಜ್ಞಾನದ ವ್ಯಾಪಕ ಪ್ರಗತಿಯನ್ನು ಪ್ರತಿಬಿಂಬಿಸುವಲ್ಲಿ ಈ ಸಮಾವೇಶವು ಯಶಸ್ವಿಯಾಯಿತು ಮತ್ತು ಮಾಹೆಯ ಘಟಕವಾಗಿರುವ ಎಂಕಾಪ್ಸ್‌ ಸಂಸ್ಥೆಯು ಜ್ಞಾನಪ್ರಸರಣ ಮತ್ತು ಸಹಭಾಗಿತ್ವದ ಮೂಲಕ ಔಷಧೀಯ ವಿಜ್ಞಾನ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರುವ ಬದ್ಧತೆಯನ್ನು ಹೊಂದಿದ್ದು ಈ ಆಶಯಕ್ಕೆ ಪೂರಕವಾಗಿ ಸಮಾವೇಶ ಸಂಪನ್ನಗೊಂಡಿತು.

ಸಮಾವೇಶದ ಕೊನೆಗೆ ಮೊಸರು ಕುಡಿಕೆ, ಪಿಲಿನಲಿಕೆ, ಧೋಲ್‌ ತಾಸೆ ಸೇರಿದಂತೆ ’ವ್ಯಾಘ್ರ ಲೀಲಾ’ ಸಾಂಸ್ಕೃತಿಕ ವೈವಿಧ್ಯವನ್ನು ಎಂಕಾಪ್ಸ್‌ ಪ್ರಸ್ತುತಿಪಡಿಸಿತು, 

ಮಾಹೆಯ ಎಂಕಾಪ್ಸ್‌ ಸಂಸ್ಥೆಯು ಎನ್‌ಐಆರ್‌ಎಫ್‌ನ 2024 ಶ್ರೇಯಾಂಕದಲ್ಲಿ ಭಾರತದ ಅತ್ಯುನ್ನತ ಫಾರ್ಮಸಿ ಸಂಸ್ಥೆಗಳಲ್ಲಿ 8ನೆಯ ಸ್ಥಾನವನ್ನು ಪಡೆದಿರುವುದು ಇಲ್ಲಿ ಉಲ್ಲೇಖಾರ್ಹವಾಗಿದೆ. 

Previous Post

ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಗಾಗಿ ಕೇಂದ್ರ ಸರ್ಕಾರದಿಂದ ಮಹತ್ವದ ಹೆಜ್ಜೆ : she box ಪೋರ್ಟಲ್ ಆರಂಭ..!!

Next Post

ಕ್ವಿಡೆಲ್ ಆರ್ಥೋ ಸಂಸ್ಥೆಯು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ರಕ್ತ ಕೇಂದ್ರದೊಂದಿಗಿನ 15 ವರ್ಷಗಳ ಸಹಭಾಗಿತ್ವ ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಇಮ್ಯುನೊಹೆಮಾಟಾಲಜಿ ಪಾಲುದಾರಿಕೆಯನ್ನು ಗೌರವಿಸಿದೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಕ್ವಿಡೆಲ್ ಆರ್ಥೋ ಸಂಸ್ಥೆಯು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ರಕ್ತ ಕೇಂದ್ರದೊಂದಿಗಿನ 15 ವರ್ಷಗಳ ಸಹಭಾಗಿತ್ವ ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಇಮ್ಯುನೊಹೆಮಾಟಾಲಜಿ ಪಾಲುದಾರಿಕೆಯನ್ನು ಗೌರವಿಸಿದೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

13/08/2026
ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

13/08/2026
ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

13/08/2026
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

13/08/2026

Recent News