Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕಾರ್ಕಳ : ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ಉಡುಪಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಸ್ಪಷ್ಟನೆ..!!

Dhrishya News by Dhrishya News
24/08/2024
in ಸುದ್ದಿಗಳು
0
0
SHARES
129
VIEWS
Share on FacebookShare on Twitter

ಕಾರ್ಕಳ : ಆಗಸ್ಟ್ 24:ಜಿಲ್ಲೆಯ ಕಾರ್ಕಳದ ಹಿಂದೂ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಮಾಡಿದ ಅಲ್ತಾಫ್ ಬಗ್ಗೆ ಪೊಲೀಸರು ಘಟನೆ ಭಯಾನಕತೆಯನ್ನು ಬಿಚ್ಚಿಟ್ಟಿದ್ದು, ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ಉಡುಪಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

ಕಾರ್ಕಳದಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡ ಹಿಂದೂ ಯುವತಿಯನ್ನು ಕೇವಲ 3 ತಿಂಗಳಲ್ಲಿ ಪುಸಲಾಯಿಸಿದ ಮುಸ್ಲಿಂ ಸಮುದಾಯದ ಯುವಕರಿಬ್ಬರು, ಕಾರಿನಲ್ಲಿ ಪಾರ್ಟಿ ಮಾಡುವುದಾಗಿ ಕರೆದೊಯ್ದು ಬಿಯರ್‌ನಲ್ಲಿ ಡ್ರಗ್ಸ್ ಮಿಶ್ರಣ ಮಾಡಿ ಕೊಟ್ಟು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದಾರೆ. ಇದರಲ್ಲಿ ಯುವಕ ಅಲ್ತಾಫ್ ಅತ್ಯಾಚಾರ ಮಾಡಿದ್ದು, ಇದು ಗ್ಯಾಂಗ್ ರೇಪ್ ಅಲ್ಲವೆಂದು ಉಡುಪಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ಅತ್ಯಾಚಾರ ಸಂತ್ರಸ್ತೆಯಾಗಿರುವ ಯುವತಿಗೂ ಅತ್ಯಾಚಾರ ಮಾಡಿದ ಯುವಕನಿಗೂ ಪರಸ್ಪರ ಮೂರು ತಿಂಗಳಿಂದ ಇನ್ ಸ್ಟ್ರಾಗ್ರಾಂ ನಲ್ಲಿ ಪರಿಚಯ ಇತ್ತು. ಆದರೆ, ಸಂತ್ರಸ್ತೆಯ ತಂದೆಯ ಜೊತೆ ಆರೋಪಿಗೆ ಹಲವು ವರ್ಷಗಳ ಪರಿಚಯ ಇತ್ತು. ಇನ್ನು ತಂದೆಗೆ ಆರೋಪಿ ಪರಿಚಯ ಇದ್ದ ಕಾರಣ, ಯುವತಿ ಇನ್‌ಸ್ಟಾಗ್ರಾಮ್‌ ಮೂಲಕ ಪರಿಚಯವಾಗಿದ್ದ ಆರೋಪಿಯ ಕಾರಿನಲ್ಲಿ ಬರಲು ಒಪ್ಪಿಕೊಂಡಿದ್ದಳು. ಆದರೆ, ಆತನ ಇಬ್ಬರು ಸ್ನೇಹಿತರು ಬಂದು ಬಿಯರ್ ಕೊಟ್ಟಿದ್ದರು.

ಯುವತಿಗೆ ಬಿಯರ್ ಕೊಡುವ ಮೊದಲೇ ಅದರಲ್ಲಿ ಡ್ರಗ್ಸ್ ಮಿಶ್ರಣ ಮಾಡಿ ಕೊಡಲಾಗಿದೆ. ಇದರಿಂದ ಬಿಯರ್ ಸೇವನೆ ಮಾಡುತ್ತಿದ್ದಂತೆಯೇ ಯುವತಿ ಮೂರ್ಚೆ ಹೋಗಿದ್ದಾಳೆ. ನಂತರ ಆಕೆ ಅಮಲಿನಲ್ಲಿರುವುದನ್ನು ದುರ್ಬಳಕೆ ಮಾಡಿಕೊಂಡ ಆರೋಪಿ ಅತ್ಯಾಚಾರ ಮಾಡಿದ್ದಾರೆ. ಆಕೆಯನ್ನು ಮನೆಗೆ ತಲುಪಿಸಿದಾಗ ಯುವತಿಯ ಸ್ಥಿತಿಯನ್ನು ನೋಡಿದ ಮನೆಯವರು ಕೂಡಲೇ ವಿಚಾರಣೆ ಮಾಡಿದಾಗ ಘಟನೆ ಬಗ್ಗೆ ಬಾಯಿ ಬಿಟ್ಟಿದ್ದಾಳೆ.

ಕೂಡಲೇ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆ ನೀಡುವ ಮುಂಚೆ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಅತ್ಯಾಚಾರ ದೂರು ದಾಖಲಿಸಿದ್ದಾರೆ.ಅತ್ಯಾಚಾರ ಮಾಡಲು ಆತನಿಗೆ ಇಬ್ಬರು ಬಿಯರ್ ತಂದುಕೊಡಲು ಸಹಕಾರ ನೀಡಿದ್ದಾರೆ ಎಂಬುದು ಗೊತ್ತಾಗಿದೆ.

ಆದರೆ, ಆತನೊಂದಿಗೆ ಕಾರಿನಲ್ಲಿ ಬೇರೆ ಯಾರಾದರೂ ಹೋಗಿದ್ದರಾ, ಅತ್ಯಾಚಾರ ಮಾಡಿದ್ದರಾ ಎಂಬುದರ ಬಗ್ಗೆ ತನಿಖೆಯಿಂದ ಗೊತ್ತಾಗಬೇಕು. ಇನ್ನು ಎಫ್‌ಐಆರ್ ಪ್ರಕಾರ ಇದು ಗ್ಯಾಂಗ್ ರೇಪ್ ಅನಿಸುವುದಿಲ್ಲ. ಅತ್ಯಾಚಾರ ಪ್ರಕರಣದ ಬಗ್ಗೆ ದೂರು ಬಂದಿದೆ. ಸಂತ್ರಸ್ತೆ ಈಗ ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇಲ್ಲ. ಆಕೆಯ ಹೇಳಿಕೆ ಬಂದ ನಂತರ ಪೂರ್ಣವಿವರ ತಿಳಿಯಬಹುದು ಎಂದು ಮಾಹಿತಿ ನೀಡಿದರು.

Previous Post

ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯವೇತನ ಶೇ.25ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ..!!

Next Post

ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಪ್ರಯುಕ್ತ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ “ಬಾಪೂಜಿ ಪ್ರಬಂಧ ಸ್ಪರ್ಧೆ”..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಪ್ರಯುಕ್ತ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ "ಬಾಪೂಜಿ ಪ್ರಬಂಧ ಸ್ಪರ್ಧೆ"..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಣಿಪಾಲದಲ್ಲಿ ಅಂದರ್‌ ಬಾಹರ್‌ ಜುಗಾರಿ: 6 ಮಂದಿ ವಶಕ್ಕೆ

ಮಣಿಪಾಲದಲ್ಲಿ ಅಂದರ್‌-ಬಾಹರ್‌ ಜುಗಾರಿ; ಆರು ಮಂದಿ ವಶಕ್ಕೆ

30/09/2026
ಬೈಂದೂರು: ಅರಣ್ಯ ಪ್ರದೇಶದಲ್ಲಿ ಇಬ್ಬರ ಮೃತದೇಹ ಪತ್ತೆ

ಬೈಂದೂರು: ಅರಣ್ಯ ಪ್ರದೇಶದಲ್ಲಿ ಇಬ್ಬರ ಮೃತದೇಹ ಪತ್ತೆ

30/09/2026
ಶಿರ್ವದಲ್ಲಿ ಕೋಳಿ ಜೂಜಾಟ: 9 ಮಂದಿ ಬಂಧನ, 13 ಕೋಳಿ ಹುಂಜಗಳು ಸಹಿತ ವಿವಿಧ ವಸ್ತುಗಳ ಸ್ವಾಧೀನ

ಮಲ್ಪೆಯಲ್ಲಿ ಕೋಳಿ ಅಂಕಕ್ಕೆ ಪೊಲೀಸರ ದಾಳಿ; ಐವರು ವಶಕ್ಕೆ

30/09/2026
ಕಾರ್ಕಳ: ಸ್ವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಮುಳುಗಿ ಸಾವು

ಕಾರ್ಕಳ: ಸ್ವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಮುಳುಗಿ ಸಾವು

30/09/2026

Recent News

ಮಣಿಪಾಲದಲ್ಲಿ ಅಂದರ್‌ ಬಾಹರ್‌ ಜುಗಾರಿ: 6 ಮಂದಿ ವಶಕ್ಕೆ

ಮಣಿಪಾಲದಲ್ಲಿ ಅಂದರ್‌-ಬಾಹರ್‌ ಜುಗಾರಿ; ಆರು ಮಂದಿ ವಶಕ್ಕೆ

30/09/2026
ಬೈಂದೂರು: ಅರಣ್ಯ ಪ್ರದೇಶದಲ್ಲಿ ಇಬ್ಬರ ಮೃತದೇಹ ಪತ್ತೆ

ಬೈಂದೂರು: ಅರಣ್ಯ ಪ್ರದೇಶದಲ್ಲಿ ಇಬ್ಬರ ಮೃತದೇಹ ಪತ್ತೆ

30/09/2026
ಶಿರ್ವದಲ್ಲಿ ಕೋಳಿ ಜೂಜಾಟ: 9 ಮಂದಿ ಬಂಧನ, 13 ಕೋಳಿ ಹುಂಜಗಳು ಸಹಿತ ವಿವಿಧ ವಸ್ತುಗಳ ಸ್ವಾಧೀನ

ಮಲ್ಪೆಯಲ್ಲಿ ಕೋಳಿ ಅಂಕಕ್ಕೆ ಪೊಲೀಸರ ದಾಳಿ; ಐವರು ವಶಕ್ಕೆ

30/09/2026
ಕಾರ್ಕಳ: ಸ್ವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಮುಳುಗಿ ಸಾವು

ಕಾರ್ಕಳ: ಸ್ವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಮುಳುಗಿ ಸಾವು

30/09/2026
imunify-bot-check