Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಣಿಪಾಲ :ಎಂಐಟಿ, ಮಾಹೆ ವತಿಯಿಂದ 78 ನೆಯ ಸ್ವಾತಂತ್ರ್ಯೋತ್ಸವ..!!

Dhrishya News by Dhrishya News
15/08/2024
in ಸುದ್ದಿಗಳು
0
0
SHARES
13
VIEWS
Share on FacebookShare on Twitter

ಮಣಿಪಾಲ 15, ಆಗಸ್ಟ್‌, 2024 : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್ (ಮಾಹೆ) ಇದರ ಘಟಕವಾಗಿರುವ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ [ಎಂಐಟಿ] ಯು ರಾಷ್ಟ್ರದ 78ನೆಯ ಸ್ವಾತಂತ್ರ್ಯೋತ್ಸವವನ್ನು ಬೇಸಿಕ್ ಸಾಯನ್ಸ್‌ ಕಟ್ಟಡ [ಹಿಂದಿನ ಎಂಎಂಎಂಸಿ, ಮಣಿಪಾಲ] ದ ಮುಂಭಾಗದಲ್ಲಿ ಆಗಸ್ಟ್‌ 15, 2024 ರಂದು ಆಚರಿಸಿತು.   

ಡಾ. ಎಚ್‌. ಎಸ್‌. ಬಲ್ಲಾಳ್‌ ಸಹ-ಕುಲಾಧಿಪತಿಗಳು, ಮಾಹೆ ಇವರು ಪ್ರಧಾನ ಅಭ್ಯಾಗತರಾಗಿ ಮತ್ತು ಲೆ. ಜ. [ಡಾ.] ಎಂ. ಡಿ. ವೆಂಕಟೇಶ್‌, ಉಪಕುಲಪತಿಗಳು, ಮಾಹೆ, ಮಣಿಪಾಲ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ. ಪಿ. ಗಿರಿಧರ ಕಿಣಿ, ಕುಲಸಚಿವರು, ಮಾಹೆ, ಮಣಿಪಾಲ ಮತ್ತು ಡಾ. ಸೋಮಶೇಖರ ಭಟ್‌, ಜಂಟಿ ನಿರ್ದೇಶಕರು, ಎಂಐಟಿ ಅವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಚೆಂದಗಾಣಿಸಿಕೊಟ್ಟರು. 

ಬೆಳಗ್ಗೆ 8.50ಕ್ಕೆ ಬೇಸಿಕ್‌ ಸಾಯನ್ಸ್‌ ಬಿಲ್ಡಿಂಗ್‌ನ ಮುಂಭಾಗದಲ್ಲಿ ಆರಂಭವಾದ ಕಾರ್ಯಕ್ರಮದ ಆರಂಭದಲ್ಲಿ ಎಂಐಟಿಯ ಜಂಟಿ ನಿರ್ದೇಶಕರಾದ ಡಾ. ಸೋಮಶೇಖರ ಭಟ್‌ ಅವರು ಸ್ವಾಗತ ಭಾಷಣ ಮಾಡಿದರು. ಮುಖ್ಯ ಅತಿಥಿಗಳು ಸಮಾವೇಶ, ಪಥಸಂಚಲನದೊಂದಿಗೆ ರಾಷ್ಟ್ರಧ್ವಜಾರೋಹಣ ಮಾಡಿದರು. ಬಳಿಕ, ಸ್ವಾತಂತ್ರ್ಯೋತ್ಸವ ಸಂದೇಶವನ್ನು ನೀಡಿ, ಸ್ಪರ್ಧಾವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.

ಡಾ. ಎಚ್‌. ಎಸ್‌. ಬಲ್ಲಾಳ್‌ ಅವರು ತಮ್ಮ ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಹೀಗೆ ಹೇಳಿದರು: ನಾವು ಇವತ್ತು ರಾಷ್ಟ್ರದ ಸ್ವಾತಂತ್ರ್ಯೋತ್ಸವವನ್ನು ಆಚರಿಸುವುದರ ಜೊತೆಗೆ ಸೌಹಾರ್ದತೆ, ಉದಾರತೆ ಮತ್ತು ಮಾನವೀಯತೆಯ ಗುಣಗಳನ್ನು ಸಂಭ್ರಮಿಸುತ್ತಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವುದಕ್ಕಾಗಿ ಬಲಿದಾನ ಮಾಡಿದ ಗತಕಾಲದ ಮಹಾತ್ಮರನ್ನು ಗೌರವಿಸಬೇಕು. ಜೊತೆಗೆಯೇ ಸಾಕಲ್ಯ, ನಾವೀನ್ಯ ಮತ್ತು ಶಿಕ್ಷಣವನ್ನು ಹೊಂದಿರುವ ಭವಿಷ್ಯದ ಜನಾಂಗವನ್ನು ರೂಪಿಸುವುದರ ಕಡೆಗೆ ನಾವು ಪ್ರಯತ್ನಶೀಲರಾಗಬೇಕು. ನಮ್ಮ ಒಗ್ಗಟ್ಟಿನ ಕೆಲಸದಿಂದ ಸಮಾಜದ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಮತ್ತು ಈ ದೇಶದ ಅದ್ಭುತ ಪರಂಪರೆಯನ್ನು ಎತ್ತಿಹಿಡಿದು ಹೆಮ್ಮೆ ಪಡಬೇಕು.

ಲೆ. ಜ. [ಡಾ.] ಎಂ. ಡಿ. ವೆಂಕಟೇಶ್‌ ಅವರು ತಮ್ಮ ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಹೀಗೆ ಹೇಳಿದರು : 

ಸ್ವಾತಂತ್ರ್ಯೋತ್ಸವ ಆಚರಣೆಯ ಈ ಸಂದರ್ಭದಲ್ಲಿ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಡಲು ಶ್ರಮಿಸಿದವರನ್ನು ಮತ್ತು ಸಮಗ್ರತೆ, ದೃಢತೆ, ಅಭಿವೃದ್ಧಿಯ ಅವಿಚ್ಛಿನ್ನ ಸಂಕಲ್ಪಗಳೊಂದಿಗೆ ಭವ್ಯ ರಾಷ್ಟ್ರವನ್ನು ರೂಪಿಸಿದವರನ್ನು ಸ್ಮರಿಸಬೇಕಾಗಿದೆ. ಶೈಕ್ಷಣಿಕ ಆವರಣದ ಒಳಗೆ ಮತ್ತು ಹೊರಗೆ ರಾಷ್ಟ್ರಪರವಾದ ಗುಣಗಳನ್ನು ಪ್ರೋತ್ಸಾಹಿಸುವ ಬದ್ಧತೆಯನ್ನು ಹೊಂದಬೇಕು. ನಾವೀನ್ಯ, ಸಾಕಲ್ಯ ಮತ್ತು ಶ್ರೇಷ್ಠತೆಯನ್ನು ಬೆಂಬಲಿಸುವುದರ ಮೂಲಕ ರಾಷ್ಟ್ರದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಒಮ್ಮತದಿಂದ ಸಹಕಾರ ನೀಡಬೇಕಾಗಿದೆ. ಎಲ್ಲರಿಗೂ 78 ನೆಯ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. 

ಎಂಐಟಿಯ ಮೆಕ್ಯಾನಿಕಲ್‌ ಮತ್ತು ಇಂಡಸ್ಟ್ರಿಯಲ್‌ ಇಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ [ಹಿರಿಯ ಶ್ರೇಣಿ] ಪ್ರೊ ಸುಹಾಸ್‌ ಕೌಶಿಕ್‌ ಮತ್ತು ಮೆಕ್ಯಾಟ್ರಾನಿಕ್ಸ್‌ ಇಂಜಿನಿಯರಿಂಗ್‌ ವಿಭಾಗ, ಎಂಐಟಿ, ಮಣಿಪಾಲ ಇದರ ಸಹಾಯಕ ಪ್ರಾಧ್ಯಾಪಕರಾದ ಡಾ. ಶಿಲ್ಪಾ ಸುರೇಶ್‌ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. 

ಡಾ. ಶ್ರೀರಾಮ ಕೆ. ವಿ. , ಎಮ್ ಐ ಟಿ ಯ ಸಹ-ನಿರ್ದೇಶಕರು ಹಾಗು ಇಂಡಸ್ಟ್ರಿ ಸಂಪರ್ಕ, ಪ್ಲೇಸ್‌ಮೆಂಟ್‌ ಮತ್ತು ಪ್ರಾಕ್ಟೀಸ್‌ ಅವರು ಧನ್ಯವಾದ ಸಮರ್ಪಿಸುತ್ತ, ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. 

ತಂಡ [ಕಂಟಿನ್‌ಜೆಂಟ್‌] ಪ್ರಶಸ್ತಿ ಪುರಸ್ಕೃತರು:

ಎಂಐಟಿಯು ಕೌಶಲ, ಬದ್ಧತೆ ಮತ್ತು ಒಗ್ಗಟ್ಟಿನಿಂದ ಪ್ರಯತ್ನದಿಂದ ಪ್ರತಿಷ್ಠಿತ ಪ್ರಥಮ ತಂಡ ಪ್ರಶಸ್ತಿಯನ್ನು ಗಳಿಸಿದೆ. ಕೆಎಂಸಿಯು ಎರಡನೆಯ ಸ್ಥಾನವನ್ನು ಪಡೆದರೆ, ಮೂರನೆಯ ಸ್ಥಾನವನ್ನು ಮಣಿಪಾಲ್ ಕಾಲೇಜು ಆಫ್‌ ಹೆಲ್ತ್‌ ಪ್ರೊಫೆಶನಲ್ಸ್‌ ಗಿಟ್ಟಿಸಿಕೊಂಡಿದೆ.  

Previous Post

ಉಡುಪಿ:ಗೀತಾಮಂದಿರದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ..!!

Next Post

ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಸಹಾಯಧನ, ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಸಹಾಯಧನ, ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

13/08/2026
ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

13/08/2026
ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

13/08/2026
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

13/08/2026

Recent News