ಉಡುಪಿ : ಆಗಸ್ಟ್ 15:ಕರ್ನಾಟಕ ದಲಿತ ಹಕ್ಕುಗಳ ಸಮಿತಿ(DHS)ಉಡುಪಿ ಜಿಲ್ಲಾ ಸಂಚಾಲನ ಸಮಿತಿ ನೇತೃತ್ವದಲ್ಲಿ ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಛೇರಿಯ ಸ್ಥಾನೀಯ ತಹಶಿಲ್ದಾರರ ಮೂಲಕ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ನೀಡಲಾಯಿತು.

ಪ್ರತಿಭಟನೆ ಯಲ್ಲಿDHS ಜಿಲ್ಲಾ ಮುಖಂಡರಾದ ಸಂಜೀವ ಬಳ್ಕೂರ್, ರವಿ.ವಿ.ಎಂ,ರಾಮ ಕಾರ್ಕಡ, ನಾಗರತ್ನ ನಾಡ,ವಿನಯ,ಶಶಿಧರ, ಕಿರಣ್,ನಾಗರತ್ನ ಎಲ್ ,ಸಿಐಟಿಯು ಜಿಲ್ಲಾ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಎಚ್.ನರಸಿಂಹ, ರಾಜು ಪಡುಕೋಣೆ, ಚಂದ್ರಶೇಖರ. ವಿ.ಜನವಾದಿ ಸಂಘಟಣೆಯ ಮುಖಂಡರಾದ ಶೀಲಾವತಿ,ನಳಿನಿ ಸಿಐಟಿಯು ಉಡುಪಿ ವಲಯ ಸಂಚಾಲಕ ರಾದ ಕವಿರಾಜ್. ಎಸ್.ಕಾಂಚನ್, ಮುಖಂಡರಾದ ಮೋಹನ್, ಕುಪ್ಪಣ್ಣ,ಉಪಸ್ಥಿತರಿದ್ದರು








