ಆರೋಗ್ಯ ವಿಮೆ ಇಂದಿನ ತುರ್ತು ಅಗತ್ಯ. ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಬೇರೊಂದಿಲ್ಲ. ಜೀವನದಲ್ಲಿ ನಮ್ಮ ತಪ್ಪುಗಳಿಂದಾಗಿ ಯಾ ನಾನಾ ಕಾರಣಗಳಿಂದ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ.
ಚಿಕಿತ್ಸೆಗಾಗಿ ದುಬಾರಿ ವೆಚ್ಚಗಳನ್ನು ಇಳಿವಯಸ್ಸಿನಲ್ಲಿ ಭರಿಸುವುದು ಕಷ್ಟಕರ. ಇದಕ್ಕಾಗಿ ಆರೋಗ್ಯ ವಿಮೆ ಅತೀ ಅಗತ್ಯ ಎಂದು ಹಿರಿಯ ನಾಗರಿಕರ ಸಂಘ ಕಾರ್ಕಳ ರವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಕೇರ್ ಹೆಲ್ತ್ ಇನ್ಸೂರೆನ್ಸ್ ಕಂಪಾನಿ ಪ್ರಾದೇಶಿಕ ಪ್ರಬಂಧಕರಾದ ಕೆ. ವಸಂತ ಕುಮಾರ್ ಕರೆ ನೀಡಿದರು.
ಮಂಗಳೂರು ಶಾಖೆಯ ಪ್ರಬಂಧಕರಾದ ಕುಮಾರಿ ನವ್ಯ ಅವರು ಆರೋಗ್ಯ ವಿಮಾ ಪಾಲಿಸಿಗಳ ಬಗ್ಗೆ ಮಾಹಿತಿ ನೀಡಿದರು ಸಂಘದ ಅಧ್ಯಕ್ಷ ಎಂ . ಕಮಲಾಕ್ಷ ಕಾಮತ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಜಯರಾಮ ಕಾಮತ್ ಪ್ರಾರ್ಥನೆ ಹಾಡಿದರು. ಪ್ರದೀಪ್ ನಾಯಕ ಸರ್ವರನ್ನು ಸ್ವಾಗತಿಸಿದರು.ಕಾರ್ಯದರ್ಶಿ ಜಗದೀಶ್ ಗೋಖಲೆ ಧನ್ಯವಾದ ಸಲ್ಲಿಸಿದ್ದು ಶ್ರೀಮತಿ . ಶೈಲಜಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.






