ಉಡುಪಿ: ಜನವರಿ 31 : ಭರತನಾಟ್ಯಂ ಮಾರ್ಗಂ ಸಾಂಸ್ಕೃತಿಕ ಕಾರ್ಯಕ್ರಮವು ಜನವರಿ 30ರಂದು ಶ್ರೀ ಕೃಷ್ಣ ಮಠ ದಲ್ಲಿ ನೆರವೇರಿತು. ಶ್ರೀಮತಿ ಸೌದಾಮಿನಿ ರಾವ್ ಅವರ ಸುಂದರ ನೃತ್ಯಾಭಿನಯ ಪ್ರೇಕ್ಷಕರ ಮನಗೆದ್ದಿತು. ನಟ್ಟುವಂಗವನ್ನು ಆಚಾರ್ಯ ಶ್ರೀಮತಿ ಇಂದಿರಾ ಕದಂಬಿ ಅವರು ನಿಭಾಯಿಸಿದರು.
ಸಂಗೀತ ವಿಭಾಗದಲ್ಲಿ ಮೃದಂಗದಲ್ಲಿ ವಿದ್ವಾನ್ ವಿದ್ಯಾಶಂಕರ್ ಎನ್ ಹಾಗೂ ತಂಜಾವೂರು ಮುರುಗಭೂಪತಿ, ಗಾನದಲ್ಲಿ ವಿದ್ವಾನ್ ಅಭಿಷೇಕ್ ಎನ್. ಎಸ್, ಫ್ಲೂಟ್‌ನಲ್ಲಿ ವಿದ್ವಾನ್ ನಿತೀಶ್ ಅಮ್ಮಣ್ಣಾಯ, ವೀಣೆಯಲ್ಲಿ ಶ್ರೀಮತಿ ನಿರ್ಮಲಾ ರಾಜಶೇಖರ್, ವಯಲಿನ್‌ನಲ್ಲಿ ಶ್ರೀಹರಿ ವಿಟ್ಠಲ್ ಅವರು ಉತ್ತಮ ಸಾಥ್ ನೀಡಿದರು.






