Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಭಕ್ತಿ ಮಾರ್ಗದ ಜೊತೆಗೆ ದೈಹಿಕ-ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರುವ ಕುಣಿತದ ಭಜನೆ ಅಭ್ಯಾಸ ಮಹತ್ವಪೂರ್ಣ : ರಂಗನಾಥ ಭಟ್

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು: ಹಿರಿಯಡ್ಕದಲ್ಲಿ ಉಚಿತ ಕುಣಿತದ ಭಜನಾ ತರಬೇತಿ ಶಿಬಿರ

Dhrishya News by Dhrishya News
29/07/2024
in ಸುದ್ದಿಗಳು
0
0
SHARES
5
VIEWS
Share on FacebookShare on Twitter

ಉಡುಪಿ : ಜುಲೈ 29:ದೇವಸ್ಥಾನದ ಒಳಗೆ ದೇವರಿಗೆ ಪೂಜೆ ನಡೆದರೆ, ದೇವರ ಸಾನಿಧ್ಯದಲ್ಲಿ ನೂರಾರು ಭಜಕರರು ದೇವರಿಗೆ ಪ್ರಿಯವಾದ ಸಂಕೀರ್ತನೆಯೊಂದಿಗೆ ಕುಣಿತದ ಭಜನೆಯಲ್ಲಿ ತೊಡಗಿರುವುದು ಶ್ಲಾಘನೀಯ. ಭಕ್ತಿ ಮಾರ್ಗದ ಜೊತೆಗೆ ದೈಹಿಕ ಮಾನಸಿಕ ಅರೋಗ್ಯಕ್ಕೂ ಪೂರಕವಾಗಿರುವ ಕುಣಿತದ ಭಜನಾ ಅಭ್ಯಾಸ ಅತ್ಯಂತ ಮಹತ್ವಪೂರ್ಣ ಎಂದು ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ರಂಗನಾಥ ಭಟ್ ಅವರು ಹೇಳಿದರು.

ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ವತಿಯಿಂದ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಹಿರಿಯಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ.) ಉಡುಪಿ ತಾಲೂಕು ಹಾಗೂ ಎಸ್.ವಿ.ಟಿ. ಕರಸೇವಕರು ಹಿರಿಯಡ್ಕ ಇವರ ಜಂಟಿ ಸಹಯೋಗದಲ್ಲಿ ಹಿರಿಯಡ್ಕ ದೇವಳದ ಸಭಾಂಗಣದಲ್ಲಿ ನೊಂದಾಯಿತ ಶಿಬಿರಾರ್ಥಿಗಳಿಗೆ ಜು.28ರಿಂದ ಆ.25ರ ವರೆಗೆ ಪ್ರತೀ ರವಿವಾರ ನಡೆಯುವ 5 ದಿನಗಳ ‘ಉಚಿತ ಕುಣಿತದ ಭಜನಾ ತರಬೇತಿ ಶಿಬಿರ’ವನ್ನು ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ಶುಭ ಹಾರೈಸಿದರು.

ಭಜನಾ ಪರಿಷತ್ತಿನ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಮಾತನಾಡಿ, ಹಿರಿಯಡ್ಕದಲ್ಲಿ ಪ್ರಥಮ ಬಾರಿಗೆ 300ಕ್ಕೂ ಹೆಚ್ಚು ಭಜನಾಸಕ್ತರನ್ನು ಒಗ್ಗೂಡಿಸಿ ಮಾದರಿಯಾಗಿ ಕುಣಿತದ ಭಾಜನಾ ತರಬೇತಿಯನ್ನು ಹಮ್ಮಿಕೊಂಡಿರುವ ಉಡುಪಿ ತಾಲೂಕು ಭಜನಾ ಪರಿಷತ್ತಿನ ಸತ್ಕಾರ್ಯ ಪ್ರಶಂಸನೀಯ. ನೊಂದಾಯಿತ ಭಜಕರು ಎಲ್ಲ 5 ದಿನಗಳ ತರಗತಿಯಲ್ಲಿ ತಪ್ಪದೇ ಭಾಗವಹಿಸಿ, ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಮಾತನಾಡಿ, ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ನುರಿತ ತರಬೇತುದಾರರಿಂದ 5 ದಿನಗಳಲ್ಲಿ ಏಕ ಕಾಲದಲ್ಲಿ ನಡೆಯುವ ಕುಣಿತದ ಭಜನಾ ತರಬೇತಿಯಲ್ಲಿ ತಾಳ ಹಾಗೂ ಸಾಂಪ್ರದಾಯಿಕ ಉಡುಗೆಯೊಂದಿಗೆ ಭಾಗವಹಿಸಿದ 300ಕ್ಕೂ ಮಿಕ್ಕಿದ ಬಾಲಕ-ಬಾಲಕಿಯರು, ಯುವಕ-ಯುವತಿಯರು ಮತ್ತು ಮಹಿಳಾ ಶಿಭಿರಾರ್ಥಿಗಳಿಗೆ ಆ.25ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ವತಿಯಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುವುದು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್., ಶ್ರೀ ವೀರಭದ್ರ ದೇವಸ್ಥಾನದ ಕರ ಸೇವಕರ ಪ್ರಮುಖ ಶ್ರೀನಿವಾಸ ರಾವ್ ಹಿರಿಯಡ್ಕ, ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಮುದ್ರಾಡಿ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸತ್ಯಾನಂದ ನಾಯಕ್ ಆತ್ರಾಡಿ, ತಾಲೂಕು ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಕೋಶಾಧಿಕಾರಿ ಹಾಗೂ ತರಬೇತುದಾರೆ ಪೂರ್ಣಿಮಾ ಪೆರ್ಡೂರು, ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪೇತ್ರಿ, ತರಬೇತಿ ಕಾರ್ಯಾಗಾರದ ಗೌರವ ಸಲಹೆಗಾರ ನಟರಾಜ್ ಹೆಗ್ಡೆ ಹಿರಿಯಡ್ಕ, ಯೋಜನೆಯ ಹಿರಿಯಡ್ಕ ವಲಯ ಮೇಲ್ವಿಚಾರಕ ಸಂತೋಷ್, ಒಕ್ಕೂಟದ ಹಿರಿಯಡ್ಕ ವಲಯಾದ್ಯಕ್ಷ ಗಣೇಶ್ ನಾಯಕ್, ತರಬೇತುದಾರರಾದ ಪ್ರಕಾಶ್ ಮಂದಾರ್ತಿ, ನಿತ್ಯಾನಂದ್ ಕಬ್ಯಾಡಿ, ರೋಹಿತ್ ಕಬ್ಯಾಡಿ, ತಾಲೂಕು ಜನಜಾಗೃತಿ ವೇದಿಕೆಯ ಸಮಿತಿ ಸದಸ್ಯೆ ನಳಿನಾದೇವಿ ಎಮ್.ಆರ್., ಪ್ರಮುಖರಾದ ನಿತೀಶ್ ಕುಮಾರ್ ಶೆಟ್ಟಿ ಕೊಂಡಾಡಿ, ಮಾಣೈ ಮುಖ್ಯಪ್ರಾಣ ಮಠದ ವಿನೋದ ಶೆಡ್ತಿ, ಪ್ರಭಾಕರ ಶೆಟ್ಟಿ ಪ್ರಭಾವನ ಕಬ್ಯಾಡಿ, ಸುಭಾಶ್ ಶೆಟ್ಟಿ ಕೈರಾಳಿ, ರಾಮ ನಾಯ್ಕ್ ಪೆರ್ಣಂಕಿಲ, ದಿನೇಶ್ ಪೂಜಾರಿ ಮೂಡು ಅಂಜಾರು, ಸುಂದರ್ ಅಂಜಾರು ಬಜೆ, ಉದ್ಯಮಿ ಉಮೇಶ್ ಶೆಟ್ಟಿ, ಗೋಪಾಲ್ ಸೇರಿಗಾರ್, ಶಂಕರ ಆಚಾರ್ಯ, ಗೋಕುಲ್ ದಾಸ್ ನಾಯಕ್, ರಮೇಶ್ ದೇವಾಡಿಗ, ಚೇತನ್ ಪೆರ್ಡೂರು, ವಿವಿಧ ಭಜನಾ ಮಂಡಳಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮತ್ತು ಒಕ್ಕೂಟದ ಪದಾಧಿಕಾರಿಗಳು ಹಾಗೂ ಶ್ರೀ ವೀರಭದ್ರ ದೇವಸ್ಥಾನದ ಕರ ಸೇವಕರು, ಭಜನಾಸಕ್ತರು ಉಪಸ್ಥಿತರಿದ್ದರು.

Previous Post

ಉಡುಪಿ : ಚಿರತೆ ಚಲನವಲನ ಪತ್ತೆಹಚ್ಚಲು ಕ್ಯಾಮರಾ ಅಳವಡಿಕೆ: ಇನ್ನೂ ಸುಳಿವಿಲ್ಲ – ಭೀತಿಯಲ್ಲಿ ಸ್ಥಳೀಯರು ..!!

Next Post

ಕಾರ್ಕಳ :ರಾಹೆ_ 169 : ಮುರತಂಗಡಿ ಪರಿಸರದಲ್ಲಿ ಗುಡ್ಡ ಕುಸಿತ.. ಭಾರೀ ಅಪಾಯದ ಮುನ್ಸೂಚನೆ ??

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಕಾರ್ಕಳ :ರಾಹೆ_ 169 : ಮುರತಂಗಡಿ ಪರಿಸರದಲ್ಲಿ ಗುಡ್ಡ ಕುಸಿತ.. ಭಾರೀ ಅಪಾಯದ ಮುನ್ಸೂಚನೆ ??

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

13/08/2026
ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

13/08/2026
ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

13/08/2026
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

13/08/2026

Recent News