Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಂಗಳೂರು : ತೀಕ್ಷ್ಣ ಬೆಳಕಿನ LED ಲೈಟ್ ಅಳವಡಿಸಿರುವ ವಾಹನಗಳ ವಿರುದ್ಧ ಪೊಲೀಸ್ ಕಾರ್ಯಾಚರಣೆ : 1170 ಪ್ರಕರಣಗಳು ದಾಖಲು, 5.86 ಲಕ್ಷ ರೂ.ದಂಡ ಸಂಗ್ರಹ..!!

Dhrishya News by Dhrishya News
25/07/2024
in ಸುದ್ದಿಗಳು
0
0
SHARES
10
VIEWS
Share on FacebookShare on Twitter

ಮಂಗಳೂರು, ಜುಲೈ 25: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹೈ ಬೀಮ್ ಹಾಗೂ ಅತಿ ಹೆಚ್ಚು ಪ್ರಖರವಾಗಿ ಬೆಳಗುವ ಅಥವಾ ಕಣ್ಣುಕುಕ್ಕುವ ಎಲ್​ಇಡಿ ಲೈಟ್ ಹೊಂದಿರುವ ವಾಹನಗಳ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಜುಲೈ 15 ರಿಂದ 23 ರವರೆಗೆ 1170 ಪ್ರಕರಣಗಳು ದಾಖಲಾಗಿದ್ದು, 5.86 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

1989 ರ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ನಿರ್ದಿಷ್ಟಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಾರ್ವಜನಿಕರು ವಾನಹಗಳಲ್ಲಿ ಹೆಡ್‌ಲೈಟ್‌ಗಳನ್ನು ಅಳವಡಿಸಬೇಕು. ಎದುರಿನ ವಾಹನಗಳ ಮೇಲೆ ಪರಿಣಾಮ ಬೀರುವ ಹೆಚ್ಚುವರಿ ಅಲಂಕಾರಿಕ ಮತ್ತು ಹೆಚ್ಚಿನ-ಫೋಕಸ್ ಲೈಟ್​​​ಗಳನ್ನು ಬಳಸಬಾರದು. ಹೆದ್ದಾರಿಗಳಲ್ಲಿ ಮತ್ತು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಬೀದಿ ದೀಪಗಳಿರುವಲ್ಲಿ ಹೈ ಬೀಮ್‌ಗಳನ್ನು ಬಳಸಬಾರದು ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಹೇಳಿದ್ದಾರೆ

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಒಂದು ಅಥವಾ ಎರಡು ಹೆಡ್‌ಲೈಟ್‌ಗಳನ್ನು ಮಾತ್ರ ಹೊಂದಿರಬೇಕು. ನಾಲ್ಕು ಚಕ್ರ ಮತ್ತು ದೊಡ್ಡ ವಾಹನಗಳು ಎರಡು ಅಥವಾ ನಾಲ್ಕು ಹೆಡ್‌ಲೈಟ್‌ಗಳನ್ನು ಹೊಂದಿರಬಹುದು. ವಾಹನಗಳ ಹೆಡ್​ಲೈಟ್​​​ನಿಂದ ಹೊರಸೂಸುವ ಬೆಳಕನ್ನು ಯಾವಾಗಲೂ ಕೆಳಮುಖವಾಗಿ ಕೇಂದ್ರೀಕರಿಸಬೇಕು ಮತ್ತು ಎಂಟು ಮೀಟರ್ ದೂರದಲ್ಲಿ ವಾಹನದಲ್ಲಿ ಕುಳಿತುಕೊಳ್ಳುವ ವ್ಯಕ್ತಿಯ ಕಣ್ಣಿಗೆ ತೊಂದರೆಯಾಗಬಾರದು ಎಂದು ಅವರು ಹೇಳಿದ್ದಾರೆ.

ತೀಕ್ಷ್ಣ ಬೆಳಕಿನ ಎಲ್​ಇಡಿ ಲೈಟ್​ಗಳನ್ನು, ಅದರಲ್ಲಿಯೂ ಕೇಂದ್ರ ಮೋಟಾರು ವಾಹನ ಕಾಯ್ದೆಯ ನಿಯಮ ಉಲ್ಲಂಘಿಸಿ ಲೈಟ್ ಅಳವಡಿಸುವ ವಾಹನ ಮಾಲೀಕರ ವಿರುದ್ಧ ರಾಜ್ಯ ಸಂಚಾರ ಪೊಲೀಸರು ಈ ತಿಂಗಳ ಆರಂಭದಲ್ಲಿಯೇ ಕಾರ್ಯಾಚರಣೆ ಶುರು ಮಾಡಿದ್ದಾರೆ. ಜೂನ್​ ತಿಂಗಳಲ್ಲಿಯೇ ಪೊಲೀಸರು ಎಚ್ಚರಿಕೆಯನ್ನು ನೀಡಿದ್ದರು. ಅದರಂತೆ ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಯುತ್ತಿದೆ.

Previous Post

ಭಾರೀ ಗಾಳಿ ಮಳೆಗೆ ಚಿಕ್ಕಮಗಳೂರು – ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೆಗುರುಳಿದ ಬೃಹತ್ ಮರಗಳು : ಸಂಚಾರ ಸ್ಥಗಿತ..!!

Next Post

ಚೆಕ್‌ ಅಮಾನ್ಯ ಪ್ರಕರಣ : ಆರೋಪಿಯನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ಆದೇಶ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಚೆಕ್‌ ಅಮಾನ್ಯ ಪ್ರಕರಣ : ಆರೋಪಿಯನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ಆದೇಶ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ದೂಪದ ಕಟ್ಟೆ: ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ…!

ದೂಪದ ಕಟ್ಟೆ: ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ…!

26/03/2026
ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ: ಸಮಾಜಸೇವಕರಿಂದ ಆಸ್ಪತ್ರೆಗೆ ದಾಖಲಾತಿ…!

ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ: ಸಮಾಜಸೇವಕರಿಂದ ಆಸ್ಪತ್ರೆಗೆ ದಾಖಲಾತಿ…!

26/03/2026
🔴 ಮಹಾವೀರ ಜಯಂತಿ ರಜೆ ದಿನಾಂಕ ಬದಲಾವಣೆ! ಮಾರ್ಚ್ 31 ಬದಲು 30ರಂದು ರಜೆ ಸಾಧ್ಯತೆ

🔴 ಮಹಾವೀರ ಜಯಂತಿ ರಜೆ ದಿನಾಂಕ ಬದಲಾವಣೆ! ಮಾರ್ಚ್ 31 ಬದಲು 30ರಂದು ರಜೆ ಸಾಧ್ಯತೆ

26/03/2026
ಮೀನುಗಾರಿಕಾ ದೋಣಿಗಳಿಗೆ ಡೀಸೆಲ್ ಕೊರತೆ: ಕೇಂದ್ರ ಸಚಿವರಿಗೆ ಉಡುಪಿ ಜನಪ್ರತಿನಿಧಿಗಳ ಮನವಿ…!

ಮೀನುಗಾರಿಕಾ ದೋಣಿಗಳಿಗೆ ಡೀಸೆಲ್ ಕೊರತೆ: ಕೇಂದ್ರ ಸಚಿವರಿಗೆ ಉಡುಪಿ ಜನಪ್ರತಿನಿಧಿಗಳ ಮನವಿ…!

26/03/2026

Recent News

ದೂಪದ ಕಟ್ಟೆ: ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ…!

ದೂಪದ ಕಟ್ಟೆ: ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ…!

26/03/2026
ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ: ಸಮಾಜಸೇವಕರಿಂದ ಆಸ್ಪತ್ರೆಗೆ ದಾಖಲಾತಿ…!

ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ: ಸಮಾಜಸೇವಕರಿಂದ ಆಸ್ಪತ್ರೆಗೆ ದಾಖಲಾತಿ…!

26/03/2026
🔴 ಮಹಾವೀರ ಜಯಂತಿ ರಜೆ ದಿನಾಂಕ ಬದಲಾವಣೆ! ಮಾರ್ಚ್ 31 ಬದಲು 30ರಂದು ರಜೆ ಸಾಧ್ಯತೆ

🔴 ಮಹಾವೀರ ಜಯಂತಿ ರಜೆ ದಿನಾಂಕ ಬದಲಾವಣೆ! ಮಾರ್ಚ್ 31 ಬದಲು 30ರಂದು ರಜೆ ಸಾಧ್ಯತೆ

26/03/2026
ಮೀನುಗಾರಿಕಾ ದೋಣಿಗಳಿಗೆ ಡೀಸೆಲ್ ಕೊರತೆ: ಕೇಂದ್ರ ಸಚಿವರಿಗೆ ಉಡುಪಿ ಜನಪ್ರತಿನಿಧಿಗಳ ಮನವಿ…!

ಮೀನುಗಾರಿಕಾ ದೋಣಿಗಳಿಗೆ ಡೀಸೆಲ್ ಕೊರತೆ: ಕೇಂದ್ರ ಸಚಿವರಿಗೆ ಉಡುಪಿ ಜನಪ್ರತಿನಿಧಿಗಳ ಮನವಿ…!

26/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved