Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಾಹೆ ಮತ್ತು ಟೀಚ್‌ಸ್ಪೂನ್‌ ಎಡ್‌ಟೆಕ್‌ ಪ್ರೈ. ಲಿ. ಒಡಂಬಡಿಕೆ..!!

Dhrishya News by Dhrishya News
10/07/2024
in ಸುದ್ದಿಗಳು
0
0
SHARES
18
VIEWS
Share on FacebookShare on Twitter

ಮಣಿಪಾಲ, 10 ಜುಲೈ 2024 : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ಮತ್ತು ಟೀಚ್‌ಸ್ಪೂನ್‌ ಎಡ್‌ಟೆಕ್‌ ಪ್ರೈ. ಲಿ. ಇತ್ತೀಚೆಗೆ ಪರಸ್ಪರ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದು ಈ ಸಹಭಾಗಿತ್ವವು ಶೈಕ್ಷಣಿಕ-ಔದ್ಯಮಿಕ ಕ್ಷೇತ್ರಗಳ ಮಹತ್ತ್ವದ ಒಡಂಬಡಿಕೆಯಾಗಿದೆ. ಜಂಟಿ ಕಾರ್ಯತಂತ್ರ ನಿರ್ವಹಣೆಯ ಕುರಿತ ಈ ಸಹಯೋಗವು ಡಿಜಿಟಲ್‌ ಕಲಿಕೆಗೆ ಅವಕಾಶ ನೀಡುವ ಉಪಕ್ರಮಗಳು, ಶಿಕ್ಷಣ ವಿಷಯಕ ಕಾರ್ಯಾಗಾರ ಮತ್ತು ಅಂತರ್ಜಾಲಗೋಷ್ಠಿ [ವೆಬಿನಾರ್‌] ಗಳ ಆಯೋಜನೆ ಮತ್ತು ಜಂಟಿ ಸಂಶೋಧನಾತ್ಮಕ ಚಟುವಟಿಕೆಗಳ ಉತ್ತೇಜನೆ- ಮುಂತಾದವುಗಳತ್ತ ಗಮನ ಹರಿಸಲಿದೆ. 

ಈ ಒಪ್ಪಂದ ಪತ್ರಕ್ಕೆ ಮಾಹೆಯ ಕುಲಸಚಿವ [ರಿಜಿಸ್ಟ್ರಾರ್‌] ರಾದ ಡಾ. ಗಿರಿಧರ್‌ ಪಿ. ಕಿಣಿ ಮತ್ತು ಟೀಚ್‌ಸ್ಪೂನ್‌ ಎಡ್‌ಟೆಕ್‌ ಪ್ರೈ. ಲಿ. ನ ಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪಲಕ್‌ ಭಂಡಾರಿ ಅವರು ಸಹಿಹಾಕಿದರು. ಟೀಚ್‌ಸ್ಪೂನ್‌ ಎಡ್‌ಟೆಕ್‌ ಪ್ರೈ. ಲಿ. ಸಂಸ್ಥೆಯು ಶಿಕ್ಷಣ ಮತ್ತು ಕಲಿಕೆಗೆ ಸಂಬಂಧಿಸಿದ ನವೋದ್ಯಮವಾಗಿದ್ದು ಇದರ ಸ್ಥಾಪಕರಾದ ಡಾ. ಪಲಕ್‌ ಭಂಡಾರಿ ಅವರು ಮಂಗಳೂರಿನ ಮಣಿಪಾಲ್‌ ಕಾಲೇಜ್‌ ಆಫ್‌ ಡೆಂಟಲ್‌ ಸಾಯನ್ಸಸ್‌ [ಎಂಸಿಒಡಿಎಸ್‌] ನ ಹಳೆವಿದ್ಯಾರ್ಥಿಯಾಗಿದ್ದಾರೆ.  

ಡಾ. ಗಿರಿಧರ ಕಿಣಿಯವರು, ‘ಮಾಹೆ ಮತ್ತು ಟೀಸ್ಪೂನ್‌ ಎಡ್‌ಟೆಕ್‌ ಪ್ರೈ ಲಿ. ನಡುವಿನ ಈ ಸಹಭಾಗಿತ್ವವು ಜ್ಞಾನ ಮತ್ತು ಅನುಭವವನ್ನು ವಿನಿಮಯ ಮಾಡಿಕೊಳ್ಳುವ ಮಹತ್ತ್ವದ ಪ್ರಯತ್ನವಾಗಿದೆ. ಈ ಒಪ್ಪಂದದ ಮುಖ್ಯ ಆಶಯವು ಡಿಜಿಟಲ್‌ ಕಲಿಕೆಯನ್ನು ವೃದ್ಧಿಪಡಿಸುವುದಾಗಿದೆ. ಈ ಮೂಲಕ ಮಾಹೆಯಲ್ಲಿರುವ ವಿವಿಧ ಕ್ಷೇತ್ರಗಳ ತಜ್ಞರು ತಮ್ಮ ಜ್ಞಾನವನ್ನು ಸಹಭಾಗಿಗಳೊಂದಿಗೆ ಹಂಚಿಕೊಳ್ಳಬಹುದಾಗಿದೆ ಮತ್ತು ಸಮಷ್ಟಿ ಪ್ರಗತಿಯ ಮನೋಭಾವವನ್ನು ಬೆಳೆಸಿಕೊಳ್ಳಬಹುದಾಗಿದೆ’ ಎಂದರು. 

ಮಂಗಳೂರಿನ ಮಣಿಪಾಲ್‌ ಕಾಲೇಜ್‌ ಆಫ್‌ ಡೆಂಟಲ್‌ ಸಾಯನ್ಸಸ್‌ [ಎಂಸಿಒಡಿಎಸ್‌] ನ ಡೀನ್‌ ಡಾ. ಅಶಿತಾ ಉಪ್ಪೂರ್‌ ಅವರು ದಂತವೆದ್ಯಕೀಯ ಶಿಕ್ಷಣದಲ್ಲಿ ಶೈಕ್ಷಣಿಕ ಮತ್ತು ಔದ್ಯಮಿಕ ಕ್ಷೇತ್ರಗಳು ಸಹಯಾನ ನಡೆಸುವುದರ ಪ್ರಾಮುಖ್ಯವನ್ನು ವಿವರಿಸಿದರು. ಪ್ರಸ್ತುತ ಒಡಂಬಡಿಕೆಯು ಭವಿಷ್ಯದ ಶಿಕ್ಷಣ ಕ್ಷೇತ್ರಕ್ಕೆ ಪ್ರಯೋಜನಕಾರಿಯಾಗಲಿದೆ ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದರು.  

ಟೀಚ್‌ಸ್ಪೂನ್‌ ಎಡ್‌ಟೆಕ್‌ ಪ್ರೆ ಲಿ. ನ ಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಡಾ. ಪಲಕ್‌ ಭಂಡಾರಿ ಅವರು ಮಾಹೆಯೊಂದಿಗೆ ತಮ್ಮ ಸಂಸ್ಥೆ ಸಹಭಾಗಿತ್ವ ಹೊಂದಿರುವ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು. ಡಿಜಿಟಲ್‌ ಕಲಿಕೆಯನ್ನು ಬೆಳೆಸುವುದು ಮತ್ತು ಉತ್ತೇಜಿಸುವ ಪ್ರಯತ್ನದಲ್ಲಿ ಎರಡೂ ಸಂಸ್ಥೆಗಳು ಕೈಜೋಡಿಸಲಿವೆ. ಅತ್ಯುತ್ತಮ ಗುಣಮಟ್ಟದ ಕಾರ್ಯಾಗಾರ ಮತ್ತು ವಿಜಾರಗೋಷ್ಠಿಗಳನ್ನು ಆಯೋಜಿಸಿ ಅಭಿವೃದ್ದಿ ಹೊಂದುತ್ತಿರುವ ಡಿಜಿಟಲ್‌ ಶಿಕ್ಷಣ ಕ್ಷೇತ್ರಕ್ಕೆ ಮಹತ್ತ್ವದ ಕೊಡುಗೆಗಳನ್ನು ನೀಡಲಿವೆ’ ಎಂದರು. 

ಸಾಂಸ್ಥೀಯ ಸಂಬಂಧಗಳ ವಿಭಾಗ [ಕಾರ್ಪೊರೇಟ್‌ ರಿಲೇಶನ್ಸ್‌]ದ ನಿರ್ದೇಶಕ ಡಾ. ಹರೀಶ್‌ ಕುಮಾರ್‌ ಎಸ್‌. ಅತಿಥಿಗಳನ್ನು ಸ್ವಾಗತಿಸಿದರು. ಟೀಚ್‌ ಸ್ಪೂನ್‌ ಪ್ರೈ. ಲಿ. ನ ಸಾಮಗ್ರಿ ಸಿದ್ಧತಾ ವಿಭಾಗ [ಕಂಟೆಂಟ್‌ ಪ್ರೊಡಕ್ಷನ್‌] ವಿಭಾಗದ ಮುಖ್ಯಸ್ಥರಾದ ಡಾ. ಚಾಂದಿನಿ ಪಿಂಟೊ ಉಪಸ್ಥಿತರಿದ್ದರು. 

Previous Post

ಉಡುಪಿ :ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನ..!!

Next Post

ಉಡುಪಿ : ಜಿಲ್ಲೆಯ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ‘ಯಕ್ಷ ಶಿಕ್ಷಣ’ ಯಕ್ಷಗಾನ ತರಬೇತಿ ಉದ್ಘಾಟನೆ ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ : ಜಿಲ್ಲೆಯ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ 'ಯಕ್ಷ ಶಿಕ್ಷಣ' ಯಕ್ಷಗಾನ ತರಬೇತಿ ಉದ್ಘಾಟನೆ ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕುಕ್ಕುಂದೂರಿನಲ್ಲಿ ಕಲ್ಲು ಕಟ್ಟಿಂಗ್‌ ಪ್ಯಾಕ್ಟರಿಯ ಉಪಯೋಗವಾಗದ ಕಲ್ಲುಗಳನ್ನು ರಸ್ತೆಗೆ ಸುರಿದು ಸಾರ್ವಜನಿಕ ರಸ್ತೆ ಹಾಳು – ಗ್ರಾಮಸ್ಥರ ಆಕ್ರೋಶ

ಕುಕ್ಕುಂದೂರಿನಲ್ಲಿ ಕಲ್ಲು ಕಟ್ಟಿಂಗ್‌ ಪ್ಯಾಕ್ಟರಿಯ ಉಪಯೋಗವಾಗದ ಕಲ್ಲುಗಳನ್ನು ರಸ್ತೆಗೆ ಸುರಿದು ಸಾರ್ವಜನಿಕ ರಸ್ತೆ ಹಾಳು – ಗ್ರಾಮಸ್ಥರ ಆಕ್ರೋಶ

16/06/2026
ಮಣಿಪಾಲ :ಯುವಕ ನಾಪತ್ತೆ ಪ್ರಕರಣ ದಾಖಲು

ಕೊಡವೂರು :ವ್ಯಕ್ತಿ ನಾಪತ್ತೆ..!

15/06/2026
ಗೃಹಲಕ್ಷ್ಮಿ ಯೋಜನೆ : ಅನರ್ಹರ ಖಾತೆಗಳಿಗೆ ಹಣ ಸ್ಥಗಿತ..!

ಗೃಹಲಕ್ಷ್ಮಿ ಯೋಜನೆ : ಅನರ್ಹರ ಖಾತೆಗಳಿಗೆ ಹಣ ಸ್ಥಗಿತ..!

15/06/2026
ಉಡುಪಿಯಲ್ಲಿ  ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ

ಉಡುಪಿಯಲ್ಲಿ  ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ

15/06/2026

Recent News

ಕುಕ್ಕುಂದೂರಿನಲ್ಲಿ ಕಲ್ಲು ಕಟ್ಟಿಂಗ್‌ ಪ್ಯಾಕ್ಟರಿಯ ಉಪಯೋಗವಾಗದ ಕಲ್ಲುಗಳನ್ನು ರಸ್ತೆಗೆ ಸುರಿದು ಸಾರ್ವಜನಿಕ ರಸ್ತೆ ಹಾಳು – ಗ್ರಾಮಸ್ಥರ ಆಕ್ರೋಶ

ಕುಕ್ಕುಂದೂರಿನಲ್ಲಿ ಕಲ್ಲು ಕಟ್ಟಿಂಗ್‌ ಪ್ಯಾಕ್ಟರಿಯ ಉಪಯೋಗವಾಗದ ಕಲ್ಲುಗಳನ್ನು ರಸ್ತೆಗೆ ಸುರಿದು ಸಾರ್ವಜನಿಕ ರಸ್ತೆ ಹಾಳು – ಗ್ರಾಮಸ್ಥರ ಆಕ್ರೋಶ

16/06/2026
ಮಣಿಪಾಲ :ಯುವಕ ನಾಪತ್ತೆ ಪ್ರಕರಣ ದಾಖಲು

ಕೊಡವೂರು :ವ್ಯಕ್ತಿ ನಾಪತ್ತೆ..!

15/06/2026
ಗೃಹಲಕ್ಷ್ಮಿ ಯೋಜನೆ : ಅನರ್ಹರ ಖಾತೆಗಳಿಗೆ ಹಣ ಸ್ಥಗಿತ..!

ಗೃಹಲಕ್ಷ್ಮಿ ಯೋಜನೆ : ಅನರ್ಹರ ಖಾತೆಗಳಿಗೆ ಹಣ ಸ್ಥಗಿತ..!

15/06/2026
ಉಡುಪಿಯಲ್ಲಿ  ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ

ಉಡುಪಿಯಲ್ಲಿ  ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ

15/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved