ಜೂನ್ 29:ಗೂಗಲ್ ತನ್ನ ಬಳಕೆದಾರರಿಗೆ ಮ್ಯಾಪ್, ಜಿಮೇಲ್, ಕ್ರೋಮ್, ಗೂಗಲ್ ಡ್ರೈವ್‌ನಂತಹ ಹಲವಾರು ಉಪಯುಕ್ತ ಅಪ್ಲಿಕೇಶನ್‌ಗಳನ್ನು ನೀಡುತ್ತಾ ಬಂದಿದೆ. ಅವುಗಳಲ್ಲಿ ಗೂಗಗ್ ಟ್ರಾನ್ಸ್‌ಲೇಟರ್ ಪ್ರಪಂಚದಾದ್ಯಂತ ಬಹಳಷ್ಟು ಜನಪ್ರಿಯವಾಗಿದೆ.
ಇದಕ್ಕೆ ಕಾರಣವೆಂದರೆ ಇದು ಹೊಂದಿರುವ ಅತ್ಯುತ್ತಮ ಭಾಷಾ ಅನುವಾದ ವೈಶಿಷ್ಟ್ಯಗಳು. ಗೂಗಲ್ ಟ್ರಾನ್ಸ್‌ಲೇಟರ್‌ನಲ್ಲಿ ಇಲ್ಲಿಯವರೆಗೆ ಕನ್ನಡ, ಹಿಂದಿ, ತೆಲುಗು ಸೇರಿದಂತೆ ಭಾರತದ ಪ್ರಮುಖ ಭಾಷೆಗಳ ಭಾಷಾಂತರ ಸೌಲಭ್ಯ ಮಾತ್ರ ಲಭ್ಯವಿತ್ತು.
ಇದೀಗ ಗೂಗಲ್ ಅನುವಾದ ಪಟ್ಟಿಗೆ ತುಳು ಭಾಷೆಯೂ ಕೂಡಾ ಸೇರ್ಪಡೆಯಾಗಿದ್ದು, ಈ ಮೂಲಕ ಟೆಕ್ ದೈತ್ಯ ಗೂಗಲ್‌ನಲ್ಲಿ ತುಳುವಿಗೂ ಗೌರವ ಸಿಕ್ಕಂತಾಗಿದೆ. ಈ ವಿಚಾರ ತುಳುವರಿಗೆ ಸಂತಸವನ್ನು ತಂದಿದೆ.








