Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

HSRP ನಂಬರ್ ಪ್ಲೇಟ್ ಅಳವಡಿಕೆಗೆ ಮೇ 31 ಲಾಸ್ಟ್ ಡೇಟ್ : ಜೂನ್‌ 1ರಿಂದ ದಂಡ ವಸೂಲಿಗೆ ನಿರ್ಧಾರ ..!!

Dhrishya News by Dhrishya News
13/05/2024
in ಸುದ್ದಿಗಳು
0
0
SHARES
37
VIEWS
Share on FacebookShare on Twitter

ಬೆಂಗಳೂರು :ಮೇ 13:ಕರ್ನಾಟಕ ಸಾರಿಗೆ ಇಲಾಖೆಯು ವಾಹನಗಳ ಸುರಕ್ಷತೆ ದೃಷ್ಟಿಯಿಂದ ಅಳವಡಿಸುತ್ತಿರುವ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌( HSRP) ಅಳವಡಿಕೆಗೆ 2024 ರ ಮೇ 31 ಕಡೆಯ ದಿನ. ಆನಂತರ ನೋಂದಣಿ ಮಾಡಿಸದ ವಾಹನಗಳಿಗೆ ದಂಡ ವಿಧಿಸುವ ಪ್ರಕ್ರಿಯೆ ಶುರುವಾಗುವ ಸಾಧ್ಯತೆಯಿದೆ

ಇದಕ್ಕಾಗಿ ಕರ್ನಾಟಕ ಸಾರಿಗೆ ಇಲಾಖೆಯು ಸಿದ್ದತೆಗಳನ್ನು ಕೂಡ ಮಾಡಿಕೊಳ್ಳುತ್ತಿದೆ. ನಿಮ್ಮ ನಾಲ್ಕು ಚಕ್ರ ಇಲ್ಲವೇ ದ್ವಿಚಕ್ರ ವಾಹನ, ತ್ರಿಚಕ್ರ ವಾಹನಗಳ ನಂಬರ್‌ ಪ್ಲೇಟ್‌ ಅನ್ನು ಎಚ್‌ಎಸ್‌ಆರ್‌ಪಿ ಮಾದರಿಗೆ ಬದಲಿಸಿಕೊಳ್ಳಬೇಕು. ಈಗಾಗಲೇ ಮೂರು ವರ್ಷದ ಹಿಂದೆಯೇ ಆದೇಶ ಜಾರಿಯಾಗಿದ್ದರೂ ಒಂದು ವರ್ಷದ ಅವಧಿಯಲ್ಲಿ ನೋಂದಣಿ ಪ್ರಮಾಣವೂ ಹೆಚ್ಚಿದೆ. ಆದರೆ ನಿರೀಕ್ಷೆಯಷ್ಟು‌ ನೋಂದಣಿ ಆಗಿಲ್ಲ. ಈ ಕಾರಣದಿಂದಲೇ ಮೇ ಗಡುವು ಮುಗಿದ ನಂತರ ದಂಡ ಪ್ರಯೋಗಕ್ಕೆ ಸಾರಿಗೆ ಇಲಾಖೆ ಮುಂದಾಗುತ್ತಿದೆ.

 

ಕರ್ನಾಟಕದಲ್ಲಿ ಅಂದಾಜು 2 ಕೋಟಿ ವಾಹನಗಳಿವೆ. ಇದರಲ್ಲಿ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ಹಾಗೂ ಆರು ಚಕ್ರದ ವಾಹನಗಳೂ ಇವೆ. ಇವುಗಳಲ್ಲಿ ದ್ವಿಚಕ್ರ ವಾಹನದ ಪ್ರಮಾಣವೇ ಅಧಿಕ. ಕಾರು, ಆಟೋ ರಿಕ್ಷಾ, ಬಸ್‌ಗಳು ಕೂಡ ಇವೆ. ಈ ಎಲ್ಲಾ ವಾಹನಗಳ ಸುರಕ್ಷತೆ ಕಾರಣಕ್ಕೆ ಎಚ್‌ಎಸ್‌ಆರ್‌ಪಿ ಪ್ಲೇಟ್‌ ಅನ್ನು ಕಡ್ಡಾಯಗೊಳಿಸಲಾಗಿದೆ. ಈವರೆಗೂ ಸಾರಿಗೆ ಇಲಾಖೆಯಲ್ಲಿ ಲಭ್ಯ ಇರುವ ಮಾಹಿತಿ ಪ್ರಕಾರ 36 ಲಕ್ಷ ವಾಹನಗಳಿಗೆ ಮಾತ್ರ ಎಚ್‌ಎಚ್‌ಎಸ್‌ಆರ್‌ಪಿ ಪ್ಲೇಟ್‌ ಅಳವಡಿಕೆಯಾಗಿದೆ. ಅಂದರೆ ಶೇ. 18 ರಷ್ಟು ಮಾತ್ರ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೂ 1.64 ಕೋಟಿ ವಾಹನಗಳಿಗೆ ಈ ಪ್ರಕ್ರಿಯೆ ಬಾಕಿಯಿದೆ. ಮೇ ಅಂತ್ಯದೊಳಗೆ ಇನ್ನಷ್ಟು ವಾಹನ ನೋಂದಣಿಯಾದರೂ ಅದು ಶೇ. 20 ರಷ್ಟನ್ನು ಮಾತ್ರ ತಲುಪಬಹುದು 

ಆದರೆ ಈಗಾಗಲೇ ಮೂರು ಬಾರಿ ಗಡುವು ವಿಸ್ತರಿಸಿದರೂ ನೋಂದಣಿ ಪ್ರಮಾಣದಲ್ಲಿ ಏರಿಕೆಯೇ ಕಾಣುತ್ತಿಲ್ಲ. ಇದರಿಂದ ಈ ಬಾರಿ ನೋಂದಣಿ ಅವಧಿ ವಿಸ್ತರಣೆ ಮಾಡದೇ ಇರುವ ಕುರಿತು ಸಾರಿಗೆ ಇಲಾಖೆ ಚಿಂತನೆ ನಡೆಸುತ್ತಿದೆ. ಅವಧಿ ವಿಸ್ತರಿಸಿದಷ್ಟು ಜನ ಮುಂದೆ ನೋಡಿದರಾಯಿತು ಎನ್ನುವ ಮನಸ್ಥಿತಿಯಲ್ಲಿ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಜೂನ್‌ 1ರ ನಂತರ ಸಾರಿಗೆ ಇಲಾಖೆಯಿಂದಲೇ ಎಚ್‌ಎಸ್‌ಆರ್‌ಪಿ ಪ್ಲೇಟ್‌ ಅಳವಡಿಸದ ವಾಹನಗಳಿಗೆ ದಂಡ ವಿಧಿಸುವ ಪ್ರಕ್ರಿಯೆ ಶುರುವಾಗಲಿದೆ. ಮೊದಲ ಬಾರಿ ನಿಯಮ ಉಲ್ಲಂಘಿಸಿದವರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ಆನಂತರ ಸಿಕ್ಕಿ ಬಿದ್ದರೆ 1000 ರೂ. ದಂಡ ಪಾವತಿಸಬೇಕಾಗುತ್ತದೆ. ಆನಂತರ ಪ್ರತೀ ಬಾರಿಯೂ 1000 ರೂ.ದಂಡ ತೆರುವುದು ಅನಿವಾರ್ಯವಾಗುತ್ತದೆ ಎನ್ನುವುದು ಸಾರಿಗೆ ಇಲಾಖೆ ಅಧಿಕಾರಿಗಳ ವಿವರಣೆ.

ಎಚ್‌ಎಸ್‌ಆರ್‌ಪಿ ಪ್ಲೇಟ್‌ ಅಳವಡಿಸುವ ವಿಚಾರದಲ್ಲಿ ಸಾರಿಗೆ ಇಲಾಖೆ ಆದೇಶ ಸ್ಪಷ್ಟವಾಗಿದೆ. ನೋಂದಣಿ ಮಾಡಿಸಿಕೊಂಡವರಿಗೆ ಸಮಯ ಇರುತ್ತದೆ. ಅಂತವರಿಗೆ ದಂಡ ಇರುವುದಿಲ್ಲ. ನೋಂದಣಿ ಮಾಡಿಸದೇ ಇದ್ದವರಿಗೆ ದಂಡ ಹಾಕುವ ಕುರಿತು ನಿರ್ಧಾರ ಆಗಲಿದೆ ಎನ್ನುವುದು ಸಾರಿಗೆ ಮತ್ತು ಸುರಕ್ಷತೆ ಇಲಾಖೆ ಆಯುಕ್ತ ಎ.ಎಂ.ಯೋಗೀಶ್‌ ನೀಡುವ ಸೂಚನೆ.

ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸಲು ಆನ್‌ಲೈನ್‌ನಲ್ಲಿ ನೋಂದಣಿ ವೇಳೆ ಸಮಸ್ಯೆ ಉಂಟಾದರೆ ನೆರವಾಗಲು ಸಾರಿಗೆ ಇಲಾಖೆಯ ಸಹಾಯವಾಣಿಯೂ ಈಗಾಗಲೇ ಕೆಲಸ ಮಾಡುತ್ತಿದೆ.ಸಾರ್ವಜನಿಕರು ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಸಹಾಯವಾಣಿ 9449863429/26 ಸಂಪರ್ಕಿಸಿ ಗೊಂದಗಳಿದ್ದರೆ ಬಗೆಹರಿಸಿಕೊಳ್ಳಬಹುದು. ಕೆಲವೊಮ್ಮೆ ನಿಧಾನವಾದ ದೂರುಗಳೂ ಬಂದಿದ್ದು, ಸಹಾಯವಾಣಿಗೆ ಸಂಪರ್ಕಿಸಿದರೆ ಸೂಕ್ತ ಮಾರ್ಗದರ್ಶನವೂ ಸಿಗಲಿದೆ.

ಇದಲ್ಲದೇ https://transport.karnataka.gov.in ಅಥವಾ www.siam.inಗೆ ಭೇಟಿ ನೀಡಿ ವಾಹನಗಳಿಗೆ ನೋಂದಣಿ ಫಲಕಗಳನ್ನು ಅಳವಡಿಸಿಕೊಳ್ಳಲು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ಫಲಕ ಅಳವಡಿಸುವ ದಿನಾಂಕ, ವಾಹನ ಮಾರಾಟ ಕೇಂದ್ರದ ಹೆಸರು ಮತ್ತು ವಿಳಾಸವನ್ನು ವೆಬ್‌ಸೈಟ್‌ ಮೂಲಕವೇ ಖಚಿತಪಡಿಸಿಕೊಳ್ಳಬೇಕು. ಈ ವೆಬ್‌ಸೈಟ್‌ಗಳ ಮೂಲಕ ನೋಂದಣಿ ಮಾಡಿ ಅಳವಡಿಸಿದ ಎಚ್‌ಎಸ್‌ಆರ್‌ಪಿಗಳು ಮಾತ್ರ ಮಾನ್ಯತೆ ಹೊಂದಿರಲಿವೆ. ಇತರ ವೆಬ್‌ ಪೋರ್ಟಲ್‌ ಬಳಸುವ ಮುನ್ನ ಎಚ್ಚರಿಕೆ ವಹಿಸಿ ಎನ್ನುವುದು ಸಾರಿಗೆ ಅಧಿಕಾರಿಗಳು ನೀಡುವ ಸೂಚನೆ.

Previous Post

ಭೀಕರ ರಸ್ತೆ ಅಪಘಾತದಲ್ಲಿ​ ಕಿರುತೆರೆ ನಟಿ ಪವಿತ್ರಾ ಜಯರಾಮ್ ದುರ್ಮರಣ..!!

Next Post

ಶ್ರೀ ಕೃಷ್ಣ ಮಠದಲ್ಲಿ ಯಾತ್ರಾರ್ಥಿಗಳ ಉಪಯೋಗಕ್ಕಾಗಿ ” ಕೃಷ್ಣ ಗೀತಾ ಟೂರ್ಸ್ ” ಶುಭಾರಂಭ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಶ್ರೀ ಕೃಷ್ಣ ಮಠದಲ್ಲಿ ಯಾತ್ರಾರ್ಥಿಗಳ ಉಪಯೋಗಕ್ಕಾಗಿ " ಕೃಷ್ಣ ಗೀತಾ ಟೂರ್ಸ್ " ಶುಭಾರಂಭ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

13/08/2026
ಬ್ರಹ್ಮಾವರದ ವೃದ್ಧಾಶ್ರಮದಿಂದ ಯುವಕ ನಾಪತ್ತೆ..!

ಬ್ರಹ್ಮಾವರದ ವೃದ್ಧಾಶ್ರಮದಿಂದ ಯುವಕ ನಾಪತ್ತೆ..!

13/08/2026
ಇನ್ನಾ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕಳ್ಳತನ: ₹1.20 ಲಕ್ಷ ನಗದು ಕಳವು..!

ಇನ್ನಾ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕಳ್ಳತನ: ₹1.20 ಲಕ್ಷ ನಗದು ಕಳವು..!

13/08/2026
ಸುಮೇಧಾ ಫ್ಯಾಷನ್ ನಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮ

ಸುಮೇಧಾ ಫ್ಯಾಷನ್ ನಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮ

13/08/2026

Recent News

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

13/08/2026
ಬ್ರಹ್ಮಾವರದ ವೃದ್ಧಾಶ್ರಮದಿಂದ ಯುವಕ ನಾಪತ್ತೆ..!

ಬ್ರಹ್ಮಾವರದ ವೃದ್ಧಾಶ್ರಮದಿಂದ ಯುವಕ ನಾಪತ್ತೆ..!

13/08/2026
ಇನ್ನಾ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕಳ್ಳತನ: ₹1.20 ಲಕ್ಷ ನಗದು ಕಳವು..!

ಇನ್ನಾ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕಳ್ಳತನ: ₹1.20 ಲಕ್ಷ ನಗದು ಕಳವು..!

13/08/2026
ಸುಮೇಧಾ ಫ್ಯಾಷನ್ ನಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮ

ಸುಮೇಧಾ ಫ್ಯಾಷನ್ ನಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮ

13/08/2026