Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಇಂಡಿಯನ್ ಸೊಸೈಟಿ ಆಫ್ ಕ್ರಿಟಿಕಲ್ ಕೇರ್ ಮೆಡಿಸಿನ್ (ಐಎಸ್ ಸಿ ಸಿ ಎಂ) ಮಣಿಪಾಲ ಶಾಖೆಯಿಂದ ಸೆಪ್ಸಿಸ್ ಕುರಿತು ಜಾಗೃತಿ ಶಿಕ್ಷಣ ಕಾರ್ಯಕ್ರಮ..!!

Dhrishya News by Dhrishya News
08/02/2024
in ಸುದ್ದಿಗಳು
0
0
SHARES
19
VIEWS
Share on FacebookShare on Twitter

ಮಣಿಪಾಲ, 09 ಫೆಬ್ರವರಿ 2024: ಇಂಡಿಯನ್ ಸೊಸೈಟಿ ಆಫ್ ಕ್ರಿಟಿಕಲ್ ಕೇರ್ ಮೆಡಿಸಿನ್ (ಐಎಸ್ ಸಿ ಸಿ ಎಂ) ವಿವಿಧ ಐಎಸ್ ಸಿ ಸಿ ಎಂ ಶಾಖೆಗಳು ನಡೆಸುವ ಕಾರ್ಯಕ್ರಮಗಳ ಮೂಲಕ ಸೆಪ್ಸಿಸ್ ಮತ್ತು ಅದರ ಮಾರಣಾಂತಿಕ ತೊಡಕುಗಳ ಬಗ್ಗೆ ರಾಷ್ಟ್ರವ್ಯಾಪಿ ಜಾಗೃತಿ ಮೂಡಿಸಲು ಉಪಕ್ರಮವನ್ನು ತೆಗೆದುಕೊಂಡಿದೆ. ಸೆಪ್ಸಿಸ್ ಒಂದು ಮಾರಣಾಂತಿಕ ಸೋಂಕಾಗಿದ್ದು, ಭಾರತದಲ್ಲಿ ಪ್ರತಿ ವರ್ಷ ಸುಮಾರು 1.2 ಕೋಟಿ ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಭಾರತದಲ್ಲಿ ಪ್ರತಿ ವರ್ಷ ಸುಮಾರು 30 ಲಕ್ಷ ಜನರು ಸಾವನ್ನಪ್ಪುತ್ತಾರೆ. ಸೆಪ್ಸಿಸ್ ನಿಂದ ಹೆಚ್ಚಿನ ಸಂಖ್ಯೆಯ ಸಾವುಗಳಿಗೆ ಹೋಲಿಸಿದರೆ, 2023 ರಲ್ಲಿ ಭಾರತದಲ್ಲಿ ಸುಮಾರು 32,000 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗವು ಮಣಿಪಾಲದಲ್ಲಿ ಇಂಡಿಯನ್ ಸೊಸೈಟಿ ಆಫ್ ಕ್ರಿಟಿಕಲ್ ಕೇರ್ ಮೆಡಿಸಿನ್ (ISCCM) ಮಣಿಪಾಲ ಶಾಖೆಯ ವತಿಯಿಂದ ಜಾಗೃತಿ ಶಿಕ್ಷಣ ಅಭಿಯಾನವನ್ನು ಶಾಖೆಯ ಸದಸ್ಯರು, ಸಾರ್ವಜನಿಕರು, ವೈದ್ಯರು, ಮತ್ತು ಇತರ ಆರೋಗ್ಯ ವೃತ್ತಿಪರರಿಗೆ ಶೈಕ್ಷಣಿಕ ಉಪಕ್ರಮದ ಭಾಗವಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಣಿಪಾಲದ ಕಸ್ತೂರಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ಅಧ್ಯಾಪಕರು ಮಾಹಿತಿ ನೀಡಿ , ಮೂತ್ರ ಅಥವಾ ಚರ್ಮ ಅಥವಾ ಶ್ವಾಸಕೋಶದ ಸೋಂಕಿನ ಜ್ವರ ಸೇರಿದಂತೆ ಯಾವುದೇ ಸೋಂಕನ್ನು ಜನರು ಎಂದಿಗೂ ನಿರ್ಲಕ್ಷಿಸಬಾರದು ಮತ್ತು ಆದಷ್ಟು ಬೇಗ ವೈದ್ಯಕೀಯ ಸಹಾಯವನ್ನು ಪಡೆಯಬೇಕು ಎಂದು ಒತ್ತಿ ಹೇಳಿದರು. ಸೋಂಕು ಹರಡುವುದನ್ನು ತಡೆಯಲು ನಿಯಮಿತವಾಗಿ ಕೈ ತೊಳೆಯುವಂತಹ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು, ಇದು ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಐಎಸ್‌ಸಿಸಿಎಂ ಮಣಿಪಾಲ ಶಾಖೆಯ ಅಧ್ಯಕ್ಷ ಡಾ. ಸೌವಿಕ್ ಚೌಧುರಿ, ಕಾರ್ಯದರ್ಶಿ ಡಾ. ಸುನಿಲ್ ಆರ್ ಮತ್ತು ಖಜಾಂಚಿ ಡಾ. ಮಾರ್ಗಿ ಭಟ್ ಮತ್ತು ಐಎಸ್‌ಸಿಸಿಎಂ ಮಣಿಪಾಲ ಶಾಖೆಯ ಇತರ ಪ್ರಮುಖ ಸದಸ್ಯರು ಸೆಪ್ಸಿಸ್ ಲಕ್ಷಣಗಳನ್ನು ಸಾಮಾನ್ಯರಿಗೆ ಶೀಘ್ರವಾಗಿ ಗುರುತಿಸುವ ಮಹತ್ವವನ್ನು ವಿವರಿಸಿದರು. ಸಾರ್ವಜನಿಕರು, ವೈದ್ಯರು ಇತರ ವೈದ್ಯಕೀಯ ವೃತ್ತಿಪರರು ಸೇರಿದಂತೆ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಮತ್ತು ಈ ಮಹತ್ವದ ಉಪಕ್ರಮವನ್ನು ಪ್ರತಿ ವರ್ಷ ವಿವಿಧ ಚಟುವಟಿಕೆಗಳ ಮೂಲಕ ಮುಂದುವರಿಸುವ ಗುರಿಯನ್ನು ಹೊಂದಲಾಗಿದೆ.

Previous Post

ಫೆಬ್ರವರಿ 17 ರಂದು ಇಸ್ರೋದಿಂದ ‘ಇನ್ಸಾಟ್-3ಡಿಎಸ್’ ಬಾಹ್ಯಾಕಾಶ ನೌಕೆ ಉಡಾವಣೆಗೆ ಸಜ್ಜು…!!

Next Post

ಉತ್ತರಾಖಂಡ ಮಸೀದಿ ತೆರವು ವೇಳೆ ಹಿಂಸಾಚಾರ ಪ್ರಕರಣ: ನಾಲ್ವರು ಸಾವು, 250ಕ್ಕೂ ಹೆಚ್ಚು ಮಂದಿಗೆ ಗಾಯ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉತ್ತರಾಖಂಡ ಮಸೀದಿ ತೆರವು ವೇಳೆ ಹಿಂಸಾಚಾರ ಪ್ರಕರಣ: ನಾಲ್ವರು ಸಾವು, 250ಕ್ಕೂ ಹೆಚ್ಚು ಮಂದಿಗೆ ಗಾಯ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

13/08/2026
ಬ್ರಹ್ಮಾವರದ ವೃದ್ಧಾಶ್ರಮದಿಂದ ಯುವಕ ನಾಪತ್ತೆ..!

ಬ್ರಹ್ಮಾವರದ ವೃದ್ಧಾಶ್ರಮದಿಂದ ಯುವಕ ನಾಪತ್ತೆ..!

13/08/2026
ಇನ್ನಾ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕಳ್ಳತನ: ₹1.20 ಲಕ್ಷ ನಗದು ಕಳವು..!

ಇನ್ನಾ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕಳ್ಳತನ: ₹1.20 ಲಕ್ಷ ನಗದು ಕಳವು..!

13/08/2026
ಸುಮೇಧಾ ಫ್ಯಾಷನ್ ನಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮ

ಸುಮೇಧಾ ಫ್ಯಾಷನ್ ನಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮ

13/08/2026

Recent News