Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಉಡುಪಿ ಸೀರೆಗಳ ಪುನಶ್ಚೇತನಕ್ಕೆ ಜೀವ ತುಂಬಿದ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಎಚ್, ಐ.ಎ.ಎಸ್..!!

Dhrishya News by Dhrishya News
14/01/2024
in ಕರಾವಳಿ, ಸುದ್ದಿಗಳು
0
0
SHARES
127
VIEWS
Share on FacebookShare on Twitter

ಉಡುಪಿ : ಜನವರಿ 14:ದ್ರಶ್ಯ ನ್ಯೂಸ್ :ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದಜಿ ಐ ಟ್ಯಾಗ್ ಪಡೆದಿರುವ ಉಡುಪಿ ಸೀರೆಗಳು ಬಹಳ ಸದ್ದು ಮಾಡುತ್ತಿವೆ ಮತ್ತು ಜನಪ್ರಿಯವಾಗುತ್ತಿವೆ. ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನ ಸೇರಿಕೊಂಡು ಉಡುಪಿ ಸೀರೆಗಳ ಉತ್ಪಾದನಾ ಮತ್ತು ಮಾರುಕಟ್ಟೆ ಕ್ಷೇತ್ರಗಳನ್ನು ವಿಸ್ತರಿಸಿ, ಜನಪ್ರಿಯಗೊಳಿಸುವ ಸಾಧ್ಯತೆಗಳ ಬಗ್ಗೆ ಅನ್ವೇಷಿಸುತ್ತಿರುವ ಸಂದರ್ಭದಲ್ಲಿ, ಕಾಕತಾಳಿಯವೆಂಬಂತೆ ಇದರ ಬಗ್ಗೆ ವಿಶೇಷ ಆಸಕ್ತಿ ವಹಿಸಿ, ಜಿಲ್ಲಾಡಳಿತದ ಮೂಲಕ ಸಹಾಯ ಹಸ್ತ ಚಾಚಿ ಉಡುಪಿ ಸೀರೆಗಳ ಪುನಶ್ಚೇತನಕ್ಕೆ ಜೀವ ತುಂಬಿದವರು ಉಡುಪಿಯ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್.

ಉಡುಪಿ ಸೀರೆಗಳನ್ನು ನೇಯುವ ಎಲ್ಲಾ ನೇಕಾರರು ಹಿರಿಯರಾಗಿದ್ದು, ಯುವ ಪೀಳಿಗೆಯ ನೇಕಾರರ ಕೊರತೆಯನ್ನು ನೀಗಿಸಲು, ತರಬೇತಿ ವೇತನ ಸಹಿತ 6 ತಿಂಗಳ ಕೈಮಗ್ಗ ನೇಯ್ಗೆ ತರಬೇತಿಯನ್ನು ನೀಡಿದರೆ ಮಾತ್ರ ಹೊಸ ಪೀಳಿಗೆಯ ನೇಕಾರರನ್ನು ಕರೆ ತರುವುದು ಸಾಧ್ಯ ಎಂಬ ನಮ್ಮ ಅನಿಸಿಕೆಯನ್ನು ಪ್ರೊಬೇಶನರಿ ಐ.ಎ.ಎಸ್ ಅಧಿಕಾರಿ ಓರ್ವರ ಮೂಲಕ ಶ್ರೀ ಪ್ರಸನ್ನ ಎಚ್ ರವರು ಅಧ್ಯಯನ ಮಾಡಿಸಿದರು. ಗ್ರಾಮೀಣ ಸೊಗಡನ್ನು ಬಿಂಬಿಸುವ ಉಡುಪಿ ಸೀರೆಗಳ ಕಲಾ ಕೌಶಲ್ಯ ಸಹಿತ ಹಲವಾರು ವೈಶಿಷ್ಟ್ಯಗಳನ್ನು ಗುರುತಿಸಿ, ಇದರ ಪುನಶ್ಚೇತನದ ಅವಶ್ಯಕತೆಯನ್ನು ಮನಗಂಡು, ಅಂದಿನ ಜಿಲ್ಲಾಧಿಕಾರಿಯವರಿಗೆ ಮನದಟ್ಟು ಮಾಡಿಸಿದರು.

ಈ ಮೂಲಕ ಜಿಲ್ಲಾ ಖನಿಜ ನಿಧಿಯ ಅನುದಾನದಿಂದ, ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರದಲ್ಲಿ 25 ಮಹಿಳೆಯರು 6 ತಿಂಗಳ ಕೈಮಗ್ಗ ನೇಯ್ಗೆ ತರಬೇತಿ ಪಡೆಯಲು ಕಾರಣೀಕರ್ತರಾದರು. ಅವರಲ್ಲಿ 22 ಮಹಿಳೆಯರು ಈಗಾಗಲೇ ಕೈಮಗ್ಗದ ನೇಕಾರಿಕೆ ವೃತ್ತಿ ಮಾಡಲು ಆರಂಭಿಸಿರುವುದು ಉಲ್ಲೇಖನೀಯ.

ಉಡುಪಿ ಸೀರೆಗಳ ಉತ್ಪಾದನೆ ಗಣನೀಯವಾಗಿ ಏರಲು ಇನ್ನೊಂದು ತರಬೇತಿ ಕಾರ್ಯಾಗಾರದ ಅವಶ್ಯಕತೆಗಳ ಬಗ್ಗೆ ತಿಳಿಸಿದಾಗ, ನಬಾರ್ಡ್ ಮತ್ತು ರೋಬೊಸೋಪ್ಟ್ ಟೆಕ್ನಾಲಜಿಸ್ ನ ಸಿ.ಎಸ್.ಆರ್ ಅನುದಾನಗಳು ಶೀಘ್ರದಲ್ಲಿ ಬಿಡುಗಡೆಯಾಗಿ, 30 ಮಹಿಳೆಯರಿಗೆ ತಲಾ ರೂ. 8,000/- ತರಬೇತಿ ವೇತನ ಸಹಿತ ಕೈಮಗ್ಗದ ನೇಯ್ಗೆ ತರಬೇತಿ ಆರಂಭಿಸಲು ಕಾರಣೀಕರ್ತರಾಗಿದ್ದಾರೆ.

ತರಬೇತಿಯ ಬಳಿಕ ಸೀರೆಗಳ ಉತ್ಪಾದನೆಗೆ ಮತ್ತು ಹೊಸ ತರಬೇತಿಗೆ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದಲ್ಲಿ ಸ್ಥಳಾವಕಾಶದ ಕೊರತೆ ಇರುವುದನ್ನು ಮನಗಂಡು, ತಾತ್ಕಾಲಿಕ ವ್ಯವಸ್ಥೆಯಾಗಿ 50 ಕೈಮಗ್ಗಗಳನ್ನು ಇಡುವಷ್ಟು ದೊಡ್ಡ ಸ್ಥಳವನ್ನು ಉಡುಪಿ ಬನ್ನಂಜೆಯಲ್ಲಿರುವ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ಒದಗಿಸಿಕೊಟ್ಟು, ಕೈಮಗ್ಗ ನೇಯ್ಗೆ ಕೇಂದ್ರ ಸ್ಥಾಪಿಸಲು ಸಕಲ ವ್ಯವಸ್ಥೆ ಮಾಡಿ, ಈ ಉದ್ಯಮ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಮುನ್ನುಡಿ ಬರೆದಿದ್ದಾರೆ.

ಉಡುಪಿ ಸೀರೆಗಳು ಭಾರೀ ಜನಪ್ರಿಯತೆ ಮತ್ತು ಬೇಡಿಕೆ ಪಡೆಯುವ ದಿನಗಳು ದೂರವಿಲ್ಲ. ಆದರೂ, ಉಡುಪಿಯ ಸಮಸ್ತ ನೇಕಾರ ಸಮುದಾಯ, ಉಡುಪಿ ಸೀರೆಗಳ ಪುನಶ್ಚೇತನದ ಮೊದಲ ಮೆಟ್ಟಿಲನ್ನು ಹತ್ತಿಸಿದ ಶ್ರೀ ಪ್ರಸನ್ನ ಎಚ್, ಐ.ಎ.ಎಸ್ ರವರನ್ನು ಎಂದೂ ಮರೆಯದು. ಉಡುಪಿ ಸೀರೆಗಳ ಪುನಶ್ಚೇತನ ಮಾಡಬೇಕೆನ್ನುವ ನಮ್ಮ ಕನಸುಗಳು ಚಿಗುರೊಡೆದ ಸಂದರ್ಭದಲ್ಲಿಯೇ ಉಡುಪಿ ಜಿಲ್ಲಾ ಪಂಚಾಯತ್ ನ ಕಾರ್ಯನಿರ್ವಹಣಾಧಿಕಾರಿಯಾಗಿ ಇವರು ಬಂದದ್ದು ನೇಕಾರ ಸಮುದಾಯದ ಸುಯೋಗ ಎಂದೇ ಹೇಳಬೇಕು.

ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಯಾಗಿ ಉಡುಪಿಯ ಗ್ರಾಮೀಣ ಸೊಗಡನ್ನು ಅಭಿವೃದ್ಧಿ ಪಡಿಸಲು ವಿವಿಧ ಆಯಾಮಗಳಲ್ಲಿ ಪ್ರಯತ್ನಿಸಿರುವುದನ್ನು ನಾವು ಕಂಡಿದ್ದೇವೆ. ವರ್ಗಾವಣೆ ಹೊಂದುತ್ತಿರುವ ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ಎಚ್, ಐ.ಎ.ಎಸ್ ರವರ ಭವಿಷ್ಯ ಉಜ್ವಲವಾಗಲಿ ಎಂದು ಸಮಸ್ತ ನೇಕಾರರ ಪರವಾಗಿ  ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷರಾದ ರತ್ನಾಕರ್ ಇಂದ್ರಾಳಿ ಶುಭ ಹಾರೈಸಿದ್ದಾರೆ

Previous Post

ಕಾರ್ಕಳ :ಸಂತ ಲಾರೆನ್ಸ್ ಬಸಿಲಿಕ ಅತ್ತೂರು ವಾರ್ಷಿಕ ಮಹೋತ್ಸವಕ್ಕೆ ಚಾಲನೆ ಹಾಗೂ ಸಂತ ಸಾಬೆಸ್ಟಿಯನ್ನರ ಹಬ್ಬದ ಆಚರಣೆ..!!

Next Post

ಮಕರ ಸಂಕ್ರಾಂತಿ : ಹಸುಗಳಿಗೆ ಆಹಾರ ನೀಡಿ, ಹಬ್ಬದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಮಕರ ಸಂಕ್ರಾಂತಿ : ಹಸುಗಳಿಗೆ ಆಹಾರ ನೀಡಿ, ಹಬ್ಬದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

13/08/2026
ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

13/08/2026
ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

13/08/2026
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

13/08/2026

Recent News