Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಮಣಿಪಾಲ್‌ ಸ್ಕೂಲ್‌ ಆಫ್‌ ಇನ್‌ಫಾರ್ಮೇಶನ್‌ ಸೈನ್ಸಸ್ [ಎಂಎಸ್‌ಐಎಸ್‌] ನ ರಜತಮಹೋತ್ಸವ ಪ್ರಯುಕ್ತ ಸರಣಿ ಕಾರ್ಯಕ್ರಮಗಳು..!!

Dhrishya News by Dhrishya News
24/12/2023
in ಕರಾವಳಿ, ಮುಖಪುಟ, ಸುದ್ದಿಗಳು
0
0
SHARES
14
VIEWS
Share on FacebookShare on Twitter

ಮಣಿಪಾಲ, 24, ಡಿಸೆಂಬರ್‌ 2023 – ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ಇದರ ಪ್ರತಿಷ್ಠಿತ ಘಟಕವಾಗಿರುವ ಮಣಿಪಾಲ್ ಸ್ಕೂಲ್ ಆಫ್ ಇನ್ಫಾರ್ಮೇಶನ್ ಸೈನ್ಸಸ್ [ಎಂಎಸ್ಐಎಸ್] 25 ವರ್ಷಗಳನ್ನು ಪೂರೈಸುತ್ತಿದ್ದು , ಈ ಸಂಭ್ರಮಾಚರಣೆಯನ್ನು ವರ್ಷವಿಡೀ ವಿವಿಧ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಆಚರಿಸಲಾಗುತ್ತಿದೆ.

ಮಣಿಪಾಲ್ ಸ್ಕೂಲ್ ಆಫ್ ಇನ್ಫಾರ್ಮೇಶನ್ ಸೈನ್ಸಸ್ [ಎಂಎಸ್ಐಎಸ್] ನ ನಿರ್ದೇಶಕರಾಗಿರುವ ಡಾ. ಕೀರ್ತನಾ ಪ್ರಸಾದ್ ಅವರು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಎಂಎಸ್ಐಎಸ್ನ ಪ್ರಾಮುಖ್ಯದ ಕುರಿತು ಹೇಳುತ್ತ, ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ನೀಡುವ ಭಾರತದ ಕೆಲವೇ ಸಂಸ್ಥೆಗಳಲ್ಲಿ ಮಣಿಪಾಲದ ಎಂಎಸ್ಐಎಸ್ ಕೂಡ ಒಂದು ಎಂದರು. ವರ್ಷವಿಡೀ ನಡೆಯುವ ಸಂಭ್ರಮಾಚರಣೆಯಲ್ಲಿ ಬೋಧಕ ವರ್ಗ, ಸಿಬಂದಿಗಳು, ವಿದ್ಯಾರ್ಥಿಗಳು. ಹಳೆವಿದ್ಯಾರ್ಥಿಗಳು, ಪೋಷಕರು, ಉದ್ಯಮ ತಜ್ಞರು, ಸ್ಥಳೀಯ ಗಣ್ಯರು- ಮೊದಲಾದವರೆಲ್ಲ ಭಾಗವಹಿಸಲಿದ್ದು, ವಿಚಾರಗೋಷ್ಠಿಗಳು, ಕಾರ್ಯಾಗಾರಗಳು, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದರು.

ಮಾಹೆಯ ಉಪಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್ ಅವರು, ಮಣಿಪಾಲ್ ಸ್ಕೂಲ್ ಆಫ್ ಇನ್ಫಾರ್ಮೇಶನ್ ಸೈನ್ಸಸ್ [ಎಂಎಸ್ಐಎಸ್] ಸಂಸ್ಥೆಯ 25 ವರ್ಷಗಳ ನಿರಂತರ ಪಯಣವು ಶಿಕ್ಷಣ ಮತ್ತು ನಾವೀನ್ಯತೆಗೆ ನಮ್ಮ ಅಚಲವಾದ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು. ‘ಇಪ್ಪತ್ತೈದು ವರ್ಷಗಳ ಆಚರಣೆ ಎಂಬುದು ಕೇವಲ ಗತಕಾಲದ ದಿನಗಳ ಸಂಭ್ರಮವಲ್ಲ, ಸಂಸ್ಥೆಯ ಭವಿಷ್ಯವನ್ನು ರೂಪಿಸುವ ಚಿಂತನೆಗೆ ಅವಕಾಶ ಮಾಡಿಕೊಡುವ ವೇದಿಕೆಯೂ ಹೌದು. ಹಳೆವಿದ್ಯಾರ್ಥಿಗಳು ಮತ್ತು ಉದ್ಯಮತಜ್ಞರ ಬೆಂಬಲದೊಂದಿಗೆ ಉದ್ಯಮದಲ್ಲಿ ನೇರ ಅನುಭವದ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಉದ್ಯಮಶೀಲತೆಗೆ ಪ್ರಸ್ತುತವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ. ಕಲಿಕೆಯ ವಾತಾವರಣವನ್ನು ಬೆಳೆಸುವುದನ್ನು ಮುಂದುವರಿಸುವುದು ನಮ್ಮ ದೃಷ್ಟಿ. ಅದು ಪ್ರತಿಭೆಯನ್ನು ಪೋಷಿಸುತ್ತದೆ, ಸಂಶೋಧನೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಸಮಾಜದ ಸುಧಾರಣೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.’ ಎಂದರು.

ಬೆಳ್ಳಿಹಬ್ಬ ವರ್ಷದ ಇನ್ನೊಂದು ವಿಶೇಷತೆ ಎಂದರೆ, ಸ್ಟ್ಯಾಟ್ ಆ್ಯನ್ ಫ್ಯಾಕ್ಟ್, ಕೋಚ್‌ಬುಡ್ಡಿ, ಸಪ್ತರಶ್ಮಿಗಳಂಥ ಪ್ರಪ್ರಥಮ ಉಪಕ್ರಮಗಳನ್ನು ಪರಿಚಯಿಸುತ್ತಿರುವುದು. ಇವನ್ನು ಬೋಧಕ ಸಿಬಂದಿ, ಹಳೆವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಸಂಯುಕ್ತ ಸಹಕಾರದೊಂದಿಗೆ ಸಿದ್ಧಗೊಳಿಸಲಾಗಿದೆ. ಇದು ಭವಿಷ್ಯದಲ್ಲಿ ಶಿಕ್ಷಣ, ಸಂಶೋಧನೆ ಮತ್ತು ಪ್ರಾಯೋಗಿಕ ಅನ್ವಯಗಳು ಜೊತೆಯಾಗುವುದರ ಪ್ರಾತಿನಿಧಿಕ ಬೆಳವಣಿಗೆಯೂ ಹೌದು.

ಸಮುದಾಯಕ್ಕೆ ತಲುಪುವಿಕೆಯನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಸಮುದಾಯ-ಕೇಂದ್ರಿತ ವಿಧಾನಕ್ಕೆ ಅನುಗುಣವಾಗಿಎಂಎಸ್ಐಎಸ್ ಸ್ಥಳೀಯ ಶಿಕ್ಷಣ ಸಂಸ್ಥೆಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಹಲವು ಕಾಲೇಜುಗಳೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿಹಾಕುವುದರ ಮೂಲಕ ತನ್ನ ಕಾರ್ಯವ್ಯಾಪ್ತಿ ಮತ್ತು ಪ್ರಭಾವವನ್ನು ವಿಸ್ತರಿಸಿಕೊಂಡಿದೆ.ಡಾ ದಿನೇಶ್ ರಾವ್ ಅವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭವಾದ ಸಮಾರೋಪ ಸಮಾರಂಭವು ಸಂಭ್ರಮಾಚರಣೆ ಮತ್ತು ಪ್ರತಿಬಿಂಬದ ಸ್ವರವನ್ನು ಹೊಂದಿಸಿತು, ಡಾ. ಪ್ರಶಾಂತ್ ಕುಮಾರ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಇಡೀ ಎಂಎಸ್ಐಎಸ್ ಸಮುದಾಯದವು ಈ ಸಂಭ್ರಮಕ್ಕೆ ಸಾಕ್ಷಿಯಾಯಿತು .

Previous Post

ಉಡುಪಿ : ಮಲ್ಪೆ ಮೀನುಗಾರರ ಬಲೆಗೆ ಬಿತ್ತು ದೈತ್ಯ ಮೀನು..!

Next Post

ಕಾರ್ಕಳ : ಉಚಿತ ಕೌಶಲ್ಯ ತರಬೇತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಕಾರ್ಕಳ : ಉಚಿತ ಕೌಶಲ್ಯ ತರಬೇತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೆ ವಿನೂತನ ಲೀಸಿಂಗ್ ಮತ್ತು ಆರ್ಥಿಕ ಪರಿಹಾರ ಒದಗಿಸಲು ಟಾಟಾ ಮೋಟಾರ್ಸ್ ಜತೆ ಡ್ರಿವನ್ ಮಹತ್ವದ ಒಪ್ಪಂದ

ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೆ ವಿನೂತನ ಲೀಸಿಂಗ್ ಮತ್ತು ಆರ್ಥಿಕ ಪರಿಹಾರ ಒದಗಿಸಲು ಟಾಟಾ ಮೋಟಾರ್ಸ್ ಜತೆ ಡ್ರಿವನ್ ಮಹತ್ವದ ಒಪ್ಪಂದ

21/08/2026
ಅಲೆವೂರಿನಲ್ಲಿ ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ದಿಢೀರ್ ದಾಳಿ: ಹಾನಿಕಾರಕ ರಾಸಾಯನಿಕ ವಶ..!

ಅಲೆವೂರಿನಲ್ಲಿ ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ದಿಢೀರ್ ದಾಳಿ: ಹಾನಿಕಾರಕ ರಾಸಾಯನಿಕ ವಶ..!

20/08/2026
ಪಡುಬಿದ್ರಿಯಲ್ಲಿ ವ್ಯಕ್ತಿ ನಾಪತ್ತೆ..!

ಪಡುಬಿದ್ರಿಯಲ್ಲಿ ವ್ಯಕ್ತಿ ನಾಪತ್ತೆ..!

20/08/2026
ಉಪ್ಪೂರಿನಲ್ಲಿ ದುರ್ಗಾಂಬ ಬಸ್ ಬೆಂಕಿಗಾಹುತಿ: ಪ್ರಯಾಣಿಕರ ಸುರಕ್ಷತೆ ಕುರಿತು ಆತಂಕ

ಉಪ್ಪೂರಿನಲ್ಲಿ ದುರ್ಗಾಂಬ ಬಸ್ ಬೆಂಕಿಗಾಹುತಿ: ಪ್ರಯಾಣಿಕರ ಸುರಕ್ಷತೆ ಕುರಿತು ಆತಂಕ

20/08/2026

Recent News