Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

‘ಸ್ವರ್ಣ ಕಾರ್ಕಳ’ ಪರಿಕಲ್ಪನೆಯಡಿ ಅಭಿವೃದ್ಧಿಗೆ ಮತ್ತಷ್ಟು ವೇಗ: ಶಾಸಕ ಸುನಿಲ್ ಕುಮಾರ್

Dhrishya News by Dhrishya News
27/06/2026
in ಸುದ್ದಿಗಳು
0
‘ಸ್ವರ್ಣ ಕಾರ್ಕಳ’ ಪರಿಕಲ್ಪನೆಯಡಿ ಅಭಿವೃದ್ಧಿಗೆ ಮತ್ತಷ್ಟು ವೇಗ: ಶಾಸಕ ಸುನಿಲ್ ಕುಮಾರ್
0
SHARES
3
VIEWS
Share on FacebookShare on Twitter

ಕಾರ್ಕಳ : ಸ್ವರ್ಣ ಕಾರ್ಕಳ ಪರಿಕಲ್ಪನೆಯಡಿ ಕ್ಷೇತ್ರದ ಅಭಿವೃದ್ಧಿಗೆ ಹೊಸ ಯೋಜನೆಗಳೊಂದಿಗೆ ಮತ್ತಷ್ಟು ವೇಗ ನೀಡಲಾಗುವುದು ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು.

ಅವರು ಜೂ. 27ರಂದು ಕಾರ್ಕಳ ಪತ್ರಿಕಾ ಭವನದಲ್ಲಿ ಕಾರ್ಕಳ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ತಾವು ಸಚಿವರಾಗಿದ್ದ ಅವಧಿಯಲ್ಲಿ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ರಸ್ತೆ, ಸೇತುವೆ, ಕುಡಿಯುವ ನೀರು, ವಿದ್ಯುತ್, ಗ್ರಾಮೀಣ ಸಂಪರ್ಕ ರಸ್ತೆ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಬಳಸಲಾಗಿದೆ. ಸಂಪರ್ಕವಿಲ್ಲದ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದ್ದು, ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಅಭಿವೃದ್ಧಿಯ ಈ ವೇಗವನ್ನು ಮುಂದುವರಿಸಿಕೊಡು ಹೋಗಲಾಗುವುದು ಎಂದು ತಿಳಿಸಿದರು.

ಉದಯಕುಮಾರ್ ಶೆಟ್ಟಿಯೇ ಕಾರಣ
ಪರಶುರಾಮ ಥೀಮ್ ಪಾರ್ಕ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯೋಜನೆಯ ಇಂದಿನ ಸ್ಥಿತಿಗೆ ಮುನಿಯಾಲು ಉದಯಕುಮಾರ್ ಶೆಟ್ಟಿಯೇ ಕಾರಣ. ಅಭಿವೃದ್ಧಿ ವಿಷಯವನ್ನು ರಾಜಕೀಯಕ್ಕೆ ಬಳಸುತ್ತಿರುವ ಕಾಂಗ್ರೆಸ್ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.. ಪರಶುರಾಮ ಥೀಮ್ ಪಾರ್ಕ್ ಆವರಣದಲ್ಲಿ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಆಗ್ರಹಿಸಿದ ಅವರು, ಸಾರ್ವಜನಿಕ ಆಸ್ತಿಯನ್ನು ಜನರ ಬಳಕೆಗೆ ಮುಕ್ತಗೊಳಿಸಬೇಕು ಎಂದರು.

ಕಾರ್ಕಳ ಪುರಸಭೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಮಹಿಳಾ ಸಿಬ್ಬಂದಿಯೊಂದಿಗೆ ಯೋಜನಾ ನಿರ್ದೇಶಕರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಕುರಿತು ಮಾತನಾಡಿದ ಅವರು, ಆರೋಪಗಳು ಸತ್ಯವಾಗಿದ್ದರೆ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸರ್ಕಾರಿ ಕಚೇರಿಗಳಲ್ಲಿ ಮಹಿಳಾ ಸಿಬ್ಬಂದಿಯ ಗೌರವ ಮತ್ತು ಸುರಕ್ಷತೆಗೆ ಯಾವುದೇ ಧಕ್ಕೆಯಾಗಬಾರದು ಎಂದು ಹೇಳಿದರು.

9/11 ವಿಶೇಷ ಪ್ರಾಧಿಕಾರ ರದ್ದತಿ ವಿಚಾರದಲ್ಲಿ ಕಾಂಗ್ರೆಸ್ ಸರಕಾರವನ್ನು ಟೀಕಿಸಿದ ಸುನಿಲ್ ಕುಮಾರ್, ಸರ್ಕಾರಕ್ಕೆ ಪ್ರಾಧಿಕಾರವನ್ನು ರದ್ದುಗೊಳಿಸುವ ಇಚ್ಛಾಶಕ್ತಿಯೇ ಇಲ್ಲ ಎಂದು ಆರೋಪಿಸಿದರು. ಮೂರು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಈ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ದೃಢ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು. ಭೂಮಾಪಕರ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.

ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯಕ್ಕಿಂತ ಜನಹಿತವೇ ಮುಖ್ಯವಾಗಬೇಕು. ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಕೃಷಿ ಹಾಗೂ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ಕಾರ್ಕಳವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ಗುರಿಯಿದೆ ಎಂದ ಅವರು ಪತ್ರಕರ್ತರು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿ ಕ್ಷೇತ್ರದ ಪ್ರಮುಖ ಅಭಿವೃದ್ಧಿ ಯೋಜನೆಗಳು, ಸರ್ಕಾರದ ವಿವಿಧ ಕಾರ್ಯಕ್ರಮಗಳು ಹಾಗೂ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಉದಯ ಕುಮಾರ್ ಮುಂಡ್ಕೂರು, ಜಿಲ್ಲಾ ಕೋಶಾಧಿಕಾರಿ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಹರೀಶ್ ಸಚ್ಚರಿಪೇಟೆ ಉಪಸ್ಥಿತರಿದ್ದರು. ಕಾರ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Previous Post

ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯ ವತಿಯಿಂದ ವೃತ್ತಿಪರ ತರಬೇತಿ ಕಾರ್ಯಕ್ರಮ 

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
‘ಸ್ವರ್ಣ ಕಾರ್ಕಳ’ ಪರಿಕಲ್ಪನೆಯಡಿ ಅಭಿವೃದ್ಧಿಗೆ ಮತ್ತಷ್ಟು ವೇಗ: ಶಾಸಕ ಸುನಿಲ್ ಕುಮಾರ್

‘ಸ್ವರ್ಣ ಕಾರ್ಕಳ’ ಪರಿಕಲ್ಪನೆಯಡಿ ಅಭಿವೃದ್ಧಿಗೆ ಮತ್ತಷ್ಟು ವೇಗ: ಶಾಸಕ ಸುನಿಲ್ ಕುಮಾರ್

27/06/2026
ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯ ವತಿಯಿಂದ ವೃತ್ತಿಪರ ತರಬೇತಿ ಕಾರ್ಯಕ್ರಮ 

ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯ ವತಿಯಿಂದ ವೃತ್ತಿಪರ ತರಬೇತಿ ಕಾರ್ಯಕ್ರಮ 

27/06/2026
ಪತ್ರಿಕಾ ಪ್ರಕಟಣೆ:  ಗೃಹ ಲಕ್ಷ್ಮೀ ಯೋಜನೆಯಲ್ಲಿ ಭಾರೀ ಅಕ್ರಮ ನೈತಿಕತೆ ಇದ್ದರೆ ತಾಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ರಮೇಶ್ ಕಾಂಚನ್ ರಾಜೀನಾಮೆ ನೀಡಲಿ : ದಿನೇಶ್ ಅಮೀನ್ ಆಗ್ರಹ

ಪತ್ರಿಕಾ ಪ್ರಕಟಣೆ: ಗೃಹ ಲಕ್ಷ್ಮೀ ಯೋಜನೆಯಲ್ಲಿ ಭಾರೀ ಅಕ್ರಮ ನೈತಿಕತೆ ಇದ್ದರೆ ತಾಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ರಮೇಶ್ ಕಾಂಚನ್ ರಾಜೀನಾಮೆ ನೀಡಲಿ : ದಿನೇಶ್ ಅಮೀನ್ ಆಗ್ರಹ

26/06/2026
ಕಾರ್ಕಳ ರಸ್ತೆ ಯಲ್ಲಿ ಕಾಣಿಸಿಕೊಂಡ ಚಿರತೆ

ಕಾರ್ಕಳ ರಸ್ತೆ ಯಲ್ಲಿ ಕಾಣಿಸಿಕೊಂಡ ಚಿರತೆ

26/06/2026

Recent News

‘ಸ್ವರ್ಣ ಕಾರ್ಕಳ’ ಪರಿಕಲ್ಪನೆಯಡಿ ಅಭಿವೃದ್ಧಿಗೆ ಮತ್ತಷ್ಟು ವೇಗ: ಶಾಸಕ ಸುನಿಲ್ ಕುಮಾರ್

‘ಸ್ವರ್ಣ ಕಾರ್ಕಳ’ ಪರಿಕಲ್ಪನೆಯಡಿ ಅಭಿವೃದ್ಧಿಗೆ ಮತ್ತಷ್ಟು ವೇಗ: ಶಾಸಕ ಸುನಿಲ್ ಕುಮಾರ್

27/06/2026
ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯ ವತಿಯಿಂದ ವೃತ್ತಿಪರ ತರಬೇತಿ ಕಾರ್ಯಕ್ರಮ 

ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯ ವತಿಯಿಂದ ವೃತ್ತಿಪರ ತರಬೇತಿ ಕಾರ್ಯಕ್ರಮ 

27/06/2026
ಪತ್ರಿಕಾ ಪ್ರಕಟಣೆ:  ಗೃಹ ಲಕ್ಷ್ಮೀ ಯೋಜನೆಯಲ್ಲಿ ಭಾರೀ ಅಕ್ರಮ ನೈತಿಕತೆ ಇದ್ದರೆ ತಾಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ರಮೇಶ್ ಕಾಂಚನ್ ರಾಜೀನಾಮೆ ನೀಡಲಿ : ದಿನೇಶ್ ಅಮೀನ್ ಆಗ್ರಹ

ಪತ್ರಿಕಾ ಪ್ರಕಟಣೆ: ಗೃಹ ಲಕ್ಷ್ಮೀ ಯೋಜನೆಯಲ್ಲಿ ಭಾರೀ ಅಕ್ರಮ ನೈತಿಕತೆ ಇದ್ದರೆ ತಾಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ರಮೇಶ್ ಕಾಂಚನ್ ರಾಜೀನಾಮೆ ನೀಡಲಿ : ದಿನೇಶ್ ಅಮೀನ್ ಆಗ್ರಹ

26/06/2026
ಕಾರ್ಕಳ ರಸ್ತೆ ಯಲ್ಲಿ ಕಾಣಿಸಿಕೊಂಡ ಚಿರತೆ

ಕಾರ್ಕಳ ರಸ್ತೆ ಯಲ್ಲಿ ಕಾಣಿಸಿಕೊಂಡ ಚಿರತೆ

26/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved