Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಹಿರಿಯ ನಟಿ ಹೇಮಾ ಚೌಧರಿಗೆ ತೀವ್ರ ಅನಾರೋಗ್ಯ ಆಸ್ಪತ್ರೆಗೆ ದಾಖಲು:ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ.!!

Dhrishya News by Dhrishya News
20/12/2023
in ಮುಖಪುಟ, ರಾಜ್ಯ/ ರಾಷ್ಟ್ರೀಯ, ಸುದ್ದಿಗಳು
0
0
SHARES
39
VIEWS
Share on FacebookShare on Twitter

ಬೆಂಗಳೂರು : ಡಿಸೆಂಬರ್ 20: ದ್ರಶ್ಯ ನ್ಯೂಸ್ :ಮೆದುಳಿನ ರಕ್ತಸ್ರಾವದಿಂದ ಹೆಸರಾಂತ ಹಿರಿಯ ನಟಿ ಹೇಮಾ ಚೌಧರಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ

ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ದಿನಗಳ ಹಿಂದೆ ಹೇಮಾ ಚೌಧರಿಗೆ ಬ್ರೈನ್ ಹ್ಯಾಮರೇಜ್‌ ಆಗಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ ಅವರನ್ನು ಇಡಲಾಗಿದೆ.

ಹೇಮಾ ಅವರ ಮಗ ಐರ್ಲೆಂಡ್​ನಲ್ಲಿ ಇದ್ದಾರೆ. ಅವರ ಆಗಮನಕ್ಕಾಗಿ ಕಾಯಲಾಗುತ್ತಿದೆ. ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಹಿರಿಯ ನಟಿ ಶೀಘ್ರ ಗುಣಮುಖರಾಗಿ ಮೊದಲಿನಂತಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಇತ್ತೀಚೆಗೆ ನಿಧನರಾದ ಹಿರಿಯ ನಟಿ ಲೀಲಾವತಿ ಅವರ ಪುಣ್ಯತಿಥಿ ಮೊನ್ನೆ 18ರಂದು ಅವರ ನೆಲಮಂಗಲದ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ನೆರವೇರಿತ್ತು. ಅದಕ್ಕೆ ಹೇಮಾ ಚೌಧರಿಯವರು ಬಂದಿದ್ದರು. ಅದಾದ ನಂತರ ಇದ್ದಕ್ಕಿದ್ದಂತೆ ತೀವ್ರ ಅನಾರೋಗ್ಯ ಉಂಟಾಗಿದೆ.

ಕನ್ನಡ ಸೇರಿದಂತೆ ತೆಲುಗು, ಮಲಯಾಳಂ ಮತ್ತು ತಮಿಳು ಸುಮಾರು 180ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್‌, ಕಮಲ್ ಹಾಸನ್, ಚಿರಂಜೀವಿ, ಮೋಹನ್ ಬಾಬು, ಮಲಯಾಳಂ ಸೂಪರ್ ಸ್ಟಾರ್ ಪ್ರೇಮ್ ನಜೀರ್, ಅನಂತ್ ನಾಗ್, ಶಂಕರ್ ನಾಗ್, ರವಿಚಂದ್ರನ್ ಹೀಗೆ ಅನೇಕ ನಟರ ಜತೆ ಹೇಮಾ ಚೌಧರಿ ತೆರೆ ಹಂಚಿಕೊಂಡಿದ್ದರು. 2011ರಲ್ಲಿ ಕನ್ನಡ ಕಿರುತೆರೆಗೆ ಜನಪ್ರಿಯ ಧಾರವಾಹಿ ‘ಅಮೃತವರ್ಷಿಣಿ’ಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿ ಜನರ ಮನಸೂರೆಗೊಂಡಿದ್ದರು

Previous Post

‘ಕ್ರಿಸ್ ಮಸ್’ ಪ್ರಯುಕ್ತ KSRTCಯಿಂದ 1000 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಜೊತೆಗೆ ಶೇ.10ರಷ್ಟು ರಿಯಾಯಿತಿ…!!

Next Post

ಉಡುಪಿ : ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಹೊಸ ಬದುಕಿಗೆ ಪಾದಾರ್ಪಣೆ ಮಾಡಿದ ಎರಡು ಜೋಡಿಗಳು..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ : ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಹೊಸ ಬದುಕಿಗೆ ಪಾದಾರ್ಪಣೆ ಮಾಡಿದ ಎರಡು ಜೋಡಿಗಳು..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರಾಜ್ಯ ಸರ್ಕಾರದ ಬಗ್ಗೆ ಬಿಜೆಪಿ ಶಾಸಕರ ಮಿಥ್ಯಾರೋಪಗಳಿಗೆ ಕಾಂಗ್ರೆಸಿನಿಂದ ನಾಳೆ ಕಾರ್ಕಳದಲ್ಲಿ ಸತ್ಯಮೇವ ಜಯತೆ

ರಾಜ್ಯ ಸರ್ಕಾರದ ಬಗ್ಗೆ ಬಿಜೆಪಿ ಶಾಸಕರ ಮಿಥ್ಯಾರೋಪಗಳಿಗೆ ಕಾಂಗ್ರೆಸಿನಿಂದ ನಾಳೆ ಕಾರ್ಕಳದಲ್ಲಿ ಸತ್ಯಮೇವ ಜಯತೆ

07/10/2026
ಬಿಜೆಪಿ ಶಾಸಕರ ಸುಳ್ಳು ಆರೋಪಗಳಿಗೆ ಉತ್ತರವಾಗಿ ಕಾರ್ಕಳ ಕಾಂಗ್ರೆಸಿನಿಂದ ಸತ್ಯಮೇವ ಜಯತೆ ಕಾರ್ಯಕ್ರಮದ ಪೂರ್ವಭಾವಿ ಸಭೆ

ಬಿಜೆಪಿ ಶಾಸಕರ ಸುಳ್ಳು ಆರೋಪಗಳಿಗೆ ಉತ್ತರವಾಗಿ ಕಾರ್ಕಳ ಕಾಂಗ್ರೆಸಿನಿಂದ ಸತ್ಯಮೇವ ಜಯತೆ ಕಾರ್ಯಕ್ರಮದ ಪೂರ್ವಭಾವಿ ಸಭೆ

06/10/2026
ಅಕ್ಷರ ಕಾಯಕಕ್ಕೆ ಸಂದ ಅರ್ಹ ಗೌರವ: ಶಿಕ್ಷಕಿ ತಾರಾಮತಿ ದೇವಾಡಿಗ ಅವರ ಸಾಧನೆ ನಾಡಿಗೆ ಆದರ್ಶ

ಅಕ್ಷರ ಕಾಯಕಕ್ಕೆ ಸಂದ ಅರ್ಹ ಗೌರವ: ಶಿಕ್ಷಕಿ ತಾರಾಮತಿ ದೇವಾಡಿಗ ಅವರ ಸಾಧನೆ ನಾಡಿಗೆ ಆದರ್ಶ

06/10/2026
ಮಾಹೆಯಲ್ಲಿ ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನ ಆಚರಣೆ

ಮಾಹೆಯಲ್ಲಿ ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನ ಆಚರಣೆ

06/10/2026

Recent News

imunify-bot-check