Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಾಹೆಯ ಅಂತರ್‌ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರದ ‘ಯಕ್ಷಗಾನ’ ಕಿರು ಚಿತ್ರಕ್ಕೆ ತೀರ್ಪುಗಾರರ ಪ್ರಶಸ್ತಿ..!!

Dhrishya News by Dhrishya News
06/12/2023
in ಕರಾವಳಿ, ಮುಖಪುಟ, ಸುದ್ದಿಗಳು
0
0
SHARES
8
VIEWS
Share on FacebookShare on Twitter

ಮಣಿಪಾಲ:ಡಿಸೆಂಬರ್ 06: ದ್ರಶ್ಯ ನ್ಯೂಸ್ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ಇದರ ಅಂತರ್‌ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರವು [ಇಂಟರ್‌ ಫಾರ್‌ ಕಲ್ಚರಲ್‌ ಸ್ಟಡೀಸ್‌ ಆ್ಯಂಡ್‌ ಡಯಲಾಗ್‌-ಸಿಐಎಸ್‌ಡಿ] ತುಳು ಕರಾವಳಿಯ ಸಂಸ್ಕೃತಿ ಅಧ್ಯಯನ, ಸಂಶೋಧನೆ ಮತ್ತು ದಾಖಲೀಕರಣದ ವಿಭಾಗಗಳಲ್ಲಿ ಮಹತ್ತ್ವದ ಕೆಲಸಗಳನ್ನು ಮಾಡುತ್ತಿದ್ದು ಇದರ ‘ಯಕ್ಷಗಾನ’ ಸಾಕ್ಷ್ಯಚಿತ್ರವು ವಾರಾಣಸಿಯಲ್ಲಿ ಡಿಸೆಂಬರ್‌ 1 ರಿಂದ 3 ರವರೆಗೆ ಜರಗಿದ ಸಾಂಸ್ಕೃತಿಕ ಪ್ರವಾಸೋದ್ಯಮದ ಕುರಿತ ಪ್ರತಿಷ್ಠಿತ ಆರನೆಯ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ತೀರ್ಪುಗಾರರ ಪ್ರಶಸ್ತಿ [ಜೂರಿ ಅವಾರ್ಡ್‌]ಗೆ ಭಾಜನವಾಗಿದೆ.

ಈ ಚಿತ್ರೋತ್ಸವದಲ್ಲಿ 44 ದೇಶಗಳ 94 ಕಿರುಚಿತ್ರಗಳು ಭಾಗವಹಿಸಿದ್ದು ಕರಾವಳಿಯ ಶ್ರೀಮಂತ ಕಲಾಪರಂಪರೆಯನ್ನು ಪ್ರತಿನಿಧಿಸುವ ‘ಯಕ್ಷಗಾನ’ ಕಿರುಚಿತ್ರವು ಎಲ್ಲ ಕಿರುಚಿತ್ರಗಳನ್ನು ಹಿಂದಿಕ್ಕಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಯಕ್ಷಗಾನ’ ಕಿರುಚಿತ್ರವನ್ನು ಸಿಐಎಸ್‌ಡಿಯ ‘ತುಳುನಾಡಿನ ಸಜೀವ ಸಂಸ್ಕೃತಿಗಳ ಮೂಲಕ ಭಾರತದ ಸೂಕ್ಷ್ಮ ಅರಿವು’ [ಡಿಸರ್ನಿಂಗ್‌ ಇಂಡಿಯ : ಲಿವಿಂಗ್‌ ಕಲ್ಚರ್ಸ್‌ ಆಫ್‌ ತುಳುನಾಡು] ಯೋಜನೆಯಲ್ಲಿ ಸಿದ್ಧಗೊಳಿಸಲಾಗಿದೆ. ಈ ಯೋಜನೆಯ ಮೂಲಕ ಕರ್ನಾಟಕದ ಕರಾವಳಿ ಜಿಲ್ಲೆಗಳ ಮತ್ತು ಕೇರಳದ ಕಾಸರಗೋಡಿನ ಸಂಸ್ಕೃತಿ-ಪರಂಪರೆಗಳ ಕುರಿತು ಅಧ್ಯಯನ, ಸಂಶೋಧನೆ ಮತ್ತು ದಾಖಲೀಕರಣವನ್ನು ನಡೆಸುತ್ತಿದೆ. ಭಾರತೀಯ ಪುರಾಣಗಳನ್ನು ಸಂಭಾಷಣೆ -ಅಭಿನಯ-ಸಂಗೀತ- ನ್ರತ್ಯ – ವೇಷಭೂಷಣದ ಮೂಲಕ ಪ್ರಸ್ತುತಿಪಡಿಸುವ ಅತ್ಯಂತ ಜನಪ್ರಿಯ ಕಲೆ ಯಕ್ಷಗಾನದ ಕುರಿತು ಈ ಕಿರುಚಿತ್ರ ಸಿದ್ಧಗೊಂಡಿರುವುದು ಗಮನಾರ್ಹವಾಗಿದೆ. 

ಸಾಂಸ್ಕೃತಿಕ ಪ್ರವಾಸೋದ್ಯಮದ ಕುರಿತ ಆರನೆಯ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಲಭಿಸಿರುವ ಜೂರಿ ಅವಾರ್ಡ್‌ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಮತ್ತು ಪ್ರಸರಣವನ್ನು ಉತ್ತೇಜಿಸುವಲ್ಲಿ ಸಿಐಎಸ್‌ಡಿಯ ಬದ್ಧತೆಗೆ ದೊರೆತ ಮನ್ನಣೆಯಾಗಿದೆ. ಈ ಕಿರುಚಿತ್ರದ ಯಶಸ್ಸು ಭಾರತದ ಪ್ರಾದೇಶಿಕ ಕಲೆಗಳು ಹೊಂದಿರುವ ಜಾಗತಿಕ ಮಟ್ಟದ ಪ್ರಾಮುಖ್ಯವನ್ನು ಎತ್ತಿ ಹಿಡಿಯುತ್ತದೆ.

ಇದರ ಜೊತೆಗೆ, ‘ಡಿಸರ್ನಿಂಗ್‌ ಇಂಡಿಯ: ‘ಯಕ್ಷಗಾನ’ ಕಿರುಚಿತ್ರವು ತ್ರಿಶೂರ್‌ ಅಂತಾರಾಷ್ಟ್ರೀಯ ಚಿತ್ರೋತ್ಸವ [ಐಎಫ್‌ಎಫ್‌ಟಿ] ಆಯೋಜಿಸುವ 7 ನೆಯ ಅಂತಾರಾಷ್ಟ್ರೀಯ ಜಾನಪದ ಚಿತ್ರೋತ್ಸವ [ಐಎಫ್‌ಎಫ್‌ಎಫ್‌] ಕ್ಕೂ ಆಯ್ಕೆಯಾಗಿದೆ. 2023ರ ಎಪ್ರಿಲ್‌ನಲ್ಲಿ ಹೈದರಾಬಾದ್‌ನಲ್ಲಿ ಜರಗಿದ ಸಿಇಸಿ-ಯುಜಿಸಿಯ ರಾಷ್ಟ್ರಮಟ್ಟದ ಶೈಕ್ಷಣಿಕ ಚಿತ್ರೋತ್ಸವ ಸ್ಪರ್ಧೆಯಲ್ಲಿಯೂ ಸಿಐಎಸ್‌ಡಿಯ ‘ಯಕ್ಷಗಾನ’ದ ಪಠ್ಯಕ್ಕೆ ಅತ್ಯುತ್ತಮ ಚಿತ್ರಕತೆ ಬಹುಮಾನ ಲಭಿಸಿರುವುದು ಉಲ್ಲೇಖನೀಯ.

ಮಾಹೆಯ ಅಂತರ್‌ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರವು ಸಿದ್ಧಪಡಿಸಿದ ‘ಯಕ್ಷಗಾನ’ ಕಿರುಚಿತ್ರಕ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ಪ್ರಶಸ್ತಿ ಲಭಿಸಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಮಾಹೆಯ ಉಪಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್‌ ಅವರು, ‘ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಸಂಸ್ಥೆಯು ಸ್ಥಳೀಯ ಸಂಸ್ಕೃತಿಯ ಅಧ್ಯಯನಕ್ಕೆ ಆದ್ಯತೆ ನೀಡುತ್ತಿದೆ. ಪ್ರಾದೇಶಿಕತೆಯ ಗವಾಕ್ಷಿಯ ಮೂಲಕ ಸಮಗ್ರ ಭಾರತೀಯ ಸಂಸ್ಕೃತಿಯ ದರ್ಶನ ಮಾಡಿಸುವಲ್ಲಿ ಅರ್ಥಪೂರ್ಣ ಹೆಜ್ಜೆಗಳನ್ನಿರಿಸುತ್ತಿದೆ. ‘ಯಕ್ಷಗಾನ’ ಕಿರುಚಿತ್ರವು ಪ್ರಾದೇಶಿಕ ಕಲೆಯೊಂದರ ವೈಶಿಷ್ಟ್ಯವನ್ನು ಸಾರಿ ಹೇಳುವುದಷ್ಟೇ ಅಲ್ಲ, ಪ್ರಾದೇಶಿಕ ಕಲೆಗಳು ಜಾಗತಿಕ ಮಟ್ಟದಲ್ಲಿಯೂ ಮಹತ್ತ್ವವನ್ನು ಹೊಂದಿರುವುದನ್ನು ಎತ್ತಿಹಿಡಿಯುತ್ತದೆ. ಸಾಂಸ್ಕೃತಿಕ- ಶೈಕ್ಷಣಿಕ [ಕಲ್ಚರಲ್‌ ಎಜುಕೇಶನ್‌] ಕ್ಷೇತ್ರದಲ್ಲಿ ಪ್ರಾಯೋಗಿಕ ಪ್ರಯತ್ನಗಳ ಮೂಲಕ ಮಾಹೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಜ್ಞಾನ ಪರಂಪರೆಯ ಅರಿವು ಮೂಡಿಸುವುದಕ್ಕೆ ಬದ್ಧವಾಗಿದೆ’ ಎಂದು ಹೇಳಿದರು.

 

ಮಾಹೆಯ ಆಡಳಿತ ಶಾಸ್ತ್ರ, ಕಾನೂನು, ಮಾನವಿಕ ಮತ್ತು ಸಮಾಜವಿಜ್ಞಾನ ವಿಭಾಗದ ಸಹಉಪಕುಲಪತಿಗಳಾದ ಪ್ರೊ. [ಡಾ.] ಮಧು ವೀರರಾಘವನ್‌ ಅವರು, ‘ಈ ಪ್ರಶಸ್ತಿಯು ಸಿಐಎಸ್‌ಡಿ ತಂಡದ ಪರಿಶ್ರಮಕ್ಕೆ ದೊರೆತ ಮನ್ನಣೆಯಾಗಿದೆ. ಜೊತೆಗೆ, ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ದೊರೆತ ಗೌರವವೂ ಹೌದು. ಭಾರತದ ಪರಂಪರೆಯ ಬಹುತ್ವವನ್ನು ಪ್ರತಿನಿಧಿಸುವ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ, ಸಂಶೋಧನೆ ಮತ್ತು ದಾಖಲೀಕರಣಗಳಂಥ ಕೆಲಸಗಳನ್ನು ಮುಂದುವರಿಸಲು ಈ ಪ್ರಶಸ್ತಿಯಿಂದ ಉತ್ತೇಜನ ದೊರೆತಂತಾಗಿದೆ’ ಎಂದು ಅಭಿಪ್ರಾಯ ಪಟ್ಟರು.

ಅಂತರ್‌ಸಾಂಸ್ಕೃತಿಕ ಸಂವಾದ ಮತ್ತು ತಿಳಿವಳಿಕೆಯನ್ನು ಉತ್ತೇಜಿಸುವ ಸಿಐಎಸ್‌ಡಿ ಯು ಮಾಹೆಯ ಮಣಿಪಾಲ್‌ ಐರೋಪ್ಯ ಅಧ್ಯಯನ ಕೇಂದ್ರ [ಎಂಸಿಇಎಸ್‌] ದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಶಸ್ತಿ ಪುರಸ್ಕೃತ ‘ಯಕ್ಷಗಾನ‘ ಕಿರುಚಿತ್ರವು ಸ್ಥಳೀಯ ಜ್ಞಾನಪರಂಪರೆಯನ್ನು ಸಂರಕ್ಷಿಸುವ ಮತ್ತು ತುಳುನಾಡಿನ ಅನನ್ಯ ಪರಂಪರೆಗಳ ಬಗ್ಗೆ ಜಾಗತಿಕವಾಗಿ ಅರಿವು ಮೂಡಿಸುವ ಆರಂಭಿಕ ಪ್ರಯತ್ನದ ಭಾಗವಾಗಿ ಸಿದ್ಧಗೊಂಡಿದೆ.

 

Previous Post

ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಟ್ರಾನ್ಸ್ಫ್ಯೂಷನ್ ಮೆಡಿಸಿನ್ ಸೆಂಟರ್ ಸಂಕೀರ್ಣ ಹೊಂದಾಣಿಕೆಯಾಗದ ರಕ್ತದ ಸುರಕ್ಷಿತ ವರ್ಗಾವಣೆಗಾಗಿ “MMA” ಅನ್ನು ಪರಿಚಯಿಸಿದೆ.!!

Next Post

ರಾಜ್ಯ ಸರ್ಕಾರದಿಂದ ನೂತನ ಹೆಲ್ತ್ ಕಾರ್ಡ್ ಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ರಾಜ್ಯ ಸರ್ಕಾರದಿಂದ ನೂತನ ಹೆಲ್ತ್ ಕಾರ್ಡ್ ಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

29/01/2026
ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

29/01/2026
ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

29/01/2026
ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

29/01/2026

Recent News

ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

29/01/2026
ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

29/01/2026
ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

29/01/2026
ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

29/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved