Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

14 ರ ವಯೋಮಾನದ ರಾಜ್ಯಮಟ್ಟದ ಬಾಲಕ- ಬಾಲಕಿಯರ ಕ್ರೀಡಾಕೂಟ: ದಕ್ಷಿಣ ಕನ್ನಡ ಜಿಲ್ಲಾ ತಂಡ ಸಮಗ್ರ ಚಾಂಪಿಯನ್..!!

Dhrishya News by Dhrishya News
04/11/2023
in ಕರಾವಳಿ, ಸುದ್ದಿಗಳು
0
0
SHARES
9
VIEWS
Share on FacebookShare on Twitter

ಉಡುಪಿ :ನವೆಂಬರ್ 04: ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾಡಳಿತ, ಜಿ.ಪಂ., ಶಾಲಾ ಶಿಕ್ಷಣ ಇಲಾಖೆ, ಉಡುಪಿ ಸೈಂಟ್ ಸಿಸಿಲೀಸ್‌ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ 14ರ ವಯೋಮಾನದ ಶಾಲಾ ಬಾಲಕ- ಬಾಲಕಿಯರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡಗಳು ಒಟ್ಟಾರೆಯಾಗಿ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡವು.

ದಕ್ಷಿಣ ಕನ್ನಡದ ಅಫೀಟ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಕ್ರೀಡಾಕೂಟದಲ್ಲಿ ಒಟ್ಟು ನಾಲ್ಕು ಚಿನ್ನದ ಪದಕ, ಎರಡು ಬೆಳ್ಳಿ ಪದಕ ಹಾಗೂ ಎರಡು ಕಂಚಿನ ಪದಕಗಳನ್ನು ಗೆದ್ದು 28 ಅಂಕಗಳನ್ನು ಸಂಗ್ರಹಿಸುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡರು.

ಕ್ರೀಡಾಕೂಟದ ಬಾಲಕರ ವಿಭಾಗದ ತಂಡ ಪ್ರಶಸ್ತಿ 20 ಅಂಕಗಳನ್ನು ಸಂಗ್ರಹಿಸಿದ ಬಳ್ಳಾರಿ ತಂಡದ ಪಾಲಾದರೆ, ಬಾಲಕಿಯರ ವಿಭಾಗದ ತಂಡ ಪ್ರಶಸ್ತಿ 19 ಅಂಕಗಳೊಂದಿಗೆ ಅಗ್ರಸ್ಥಾನಿಯಾದ ಬೆಂಗಳೂರಿನ ವಿದ್ಯಾಸಾಗರ ಸ್ಪೋರ್ಟ್ಸ್ ಸ್ಕೂಲ್‌ನ ಪಾಲಾಯಿತು.

ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದ ಅತ್ಯುತ್ತಮ ಕ್ರೀಡಾಪಟು ಆಗಿ ರಾಯಚೂರು ತಂಡದ ದುರ್ಗೇಶ್ ಆಯ್ಕೆಯಾದರು. ಇವರು ಡಿಸ್ಕಸ್ ಎಸೆತದಲ್ಲಿ ಚಿನ್ನದ ಪದಕ ಪಡೆದಿದ್ದರೆ, ಬಾಲಕಿಯರ ವಿಭಾಗದ ಅತ್ಯುತ್ತಮ ಕ್ರೀಡಾಪಟುವಾಗಿ ಬೆಳಗಾವಿ ಜಿಲ್ಲೆಯ ಗೌರಿ ಪೂಜಾರಿ ಆಯ್ಕೆಯಾದರು. ಇವರು 600ಮೀ. ಓಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು

ಸಂಜೆ ನಡೆದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಡಿಡಿಪಿಐ ಗಣಪತಿ ಕೆ. ವಹಿಸಿದ್ದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ, ತೋಟದಮನೆ ಶ್ರೀ ಶಿರಡಿ ಸಾಯಿಬಾಬ ಮಂದಿರದ ಮೊತ್ತೇಸರ ದಿವಾಕ‌ ಶೆಟ್ಟಿ, ಕನ್ನರ್ಪಾಡಿ ಶ್ರೀ ಜಯದುರ್ಗಾ ದೇವಸ್ಥಾನದ ಅಧ್ಯಕ್ಷ ರಾಘವೇಂದ್ರ ಭಟ್, ಗಣ್ಯರಾದ ಪುರುಷೋತ್ತಮ್ ಶೆಟ್ಟಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ ಜಯಪ್ರಕಾಶ್ ಕೆದ್ಲಾಯ, ಸುಧೀರ್‌ಕುಮಾರ್ ಶೆಟ್ಟಿ, ಅನಿಲ್ ಲೋಬೊ, ರಮೇಶ್ ಕಾಂಚನ್ ಮತ್ತು ಸೈಂಟ್ ಸಿಸಿಲಿ ಸಮೂಹ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ತೆರೇಸಾ ಜ್ಯೋತಿ, ಸೈಂಟ್ ಸಿಸಿಲಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಪ್ರೀತಿ ಜೆ. ಕ್ರಾಸ್ತಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ತಾಲೂಕು ಅಧ್ಯಕ್ಷ
ಚಂದ್ರಶೇಖರ್ ಸುವರ್ಣ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ನಗರಸಭೆ ಪೌರಾಯುಕ್ತ ರಾಯಪ್ಪ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್‌ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Tags: #ಉಡುಪಿ#ಅಜ್ಜರಕಾಡು#ಕ್ರೀಡಾಕೂಟ#ನ್ಯೂಸ್
Previous Post

ರಕ್ಷಿಸಲ್ಪಟ್ಟ ಹರಿಯಾಣದ ಮಹಿಳೆಯನ್ನು ಪತಿಗೆ ಹಸ್ತಾಂತರಿಸುವ ಮೂಲಕ ಯಶಸ್ವಿ ಕಾರ್ಯಾಚರಣೆ..!!

Next Post

ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಇಂದಿನಿಂದ ಮೂರು ದಿನಗಳ ಕಾಲ ನಿರ್ಬಂಧ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಇಂದಿನಿಂದ ಮೂರು ದಿನಗಳ ಕಾಲ ನಿರ್ಬಂಧ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಸ್ಥಳೀಯರ ವಿರೋಧ…!

ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಸ್ಥಳೀಯರ ವಿರೋಧ…!

18/03/2026
ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಉಚಿತ ಶೂ-ಸಾಕ್ಸ್ ವಿತರಣೆ …..!

ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಉಚಿತ ಶೂ-ಸಾಕ್ಸ್ ವಿತರಣೆ …..!

18/03/2026
ಏಪ್ರಿಲ್ 1ರಿಂದ UPI-ATM ಹಣ ತೆಗೆಯುವಿಕೆಗೆ ಶುಲ್ಕ: ಉಚಿತ ಮಿತಿ ಬಳಿಕ ₹20-25 ಚಾರ್ಜ್ ಸಾಧ್ಯ….!

ಏಪ್ರಿಲ್ 1ರಿಂದ UPI-ATM ಹಣ ತೆಗೆಯುವಿಕೆಗೆ ಶುಲ್ಕ: ಉಚಿತ ಮಿತಿ ಬಳಿಕ ₹20-25 ಚಾರ್ಜ್ ಸಾಧ್ಯ….!

18/03/2026
ತಾಪಮಾನ ಏರಿಕೆಗೆ ಬ್ರೇಕ್: ರಾಜ್ಯದಲ್ಲಿ ಮಾರ್ಚ್ 23ರವರೆಗೆ ಮಳೆಯ ಮುನ್ಸೂಚನೆ…!

ತಾಪಮಾನ ಏರಿಕೆಗೆ ಬ್ರೇಕ್: ರಾಜ್ಯದಲ್ಲಿ ಮಾರ್ಚ್ 23ರವರೆಗೆ ಮಳೆಯ ಮುನ್ಸೂಚನೆ…!

18/03/2026

Recent News

ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಸ್ಥಳೀಯರ ವಿರೋಧ…!

ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಸ್ಥಳೀಯರ ವಿರೋಧ…!

18/03/2026
ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಉಚಿತ ಶೂ-ಸಾಕ್ಸ್ ವಿತರಣೆ …..!

ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಉಚಿತ ಶೂ-ಸಾಕ್ಸ್ ವಿತರಣೆ …..!

18/03/2026
ಏಪ್ರಿಲ್ 1ರಿಂದ UPI-ATM ಹಣ ತೆಗೆಯುವಿಕೆಗೆ ಶುಲ್ಕ: ಉಚಿತ ಮಿತಿ ಬಳಿಕ ₹20-25 ಚಾರ್ಜ್ ಸಾಧ್ಯ….!

ಏಪ್ರಿಲ್ 1ರಿಂದ UPI-ATM ಹಣ ತೆಗೆಯುವಿಕೆಗೆ ಶುಲ್ಕ: ಉಚಿತ ಮಿತಿ ಬಳಿಕ ₹20-25 ಚಾರ್ಜ್ ಸಾಧ್ಯ….!

18/03/2026
ತಾಪಮಾನ ಏರಿಕೆಗೆ ಬ್ರೇಕ್: ರಾಜ್ಯದಲ್ಲಿ ಮಾರ್ಚ್ 23ರವರೆಗೆ ಮಳೆಯ ಮುನ್ಸೂಚನೆ…!

ತಾಪಮಾನ ಏರಿಕೆಗೆ ಬ್ರೇಕ್: ರಾಜ್ಯದಲ್ಲಿ ಮಾರ್ಚ್ 23ರವರೆಗೆ ಮಳೆಯ ಮುನ್ಸೂಚನೆ…!

18/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved