Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಭಾರತದ 25 ವರ್ಷಗಳ ಜಲ ಆಡಳಿತ ಪಯಣ: ಗುಜರಾತ್‌ನಿಂದ ಆರಂಭಿಸಿ ರಾಷ್ಟ್ರಮಟ್ಟದ ಸಾಧನೆ ಬಿಂಬಿಸುವ ನೂತನ ಅಧ್ಯಯನ ವರದಿ ಬಿಡುಗಡೆ

ವ್ಯಾಪಕ ಪ್ರಮಾಣದಲ್ಲಿ ಜಲ ಭದ್ರತೆ ಸಾಧಿಸಲು ಮುಂದಾಗುವ ಜಗತ್ತಿನ ರಾಷ್ಟ್ರಗಳಿಗೆ ನಾಲ್ಕು ಪ್ರಮುಖ ಪಾಠಗಳು

Dhrishya News by Dhrishya News
10/10/2026
in ಸುದ್ದಿಗಳು
0
ಭಾರತದ 25 ವರ್ಷಗಳ ಜಲ ಆಡಳಿತ ಪಯಣ: ಗುಜರಾತ್‌ನಿಂದ ಆರಂಭಿಸಿ ರಾಷ್ಟ್ರಮಟ್ಟದ ಸಾಧನೆ ಬಿಂಬಿಸುವ ನೂತನ ಅಧ್ಯಯನ ವರದಿ ಬಿಡುಗಡೆ
0
SHARES
0
VIEWS
Share on FacebookShare on Twitter

ಬೆಂಗಳೂರು :ಅಕ್ಟೋಬರ್ 07, 2026: 2001 ರಿಂದ 2026 ರ ನಡುವಿನ ಅವಧಿಯಲ್ಲಿ ಗುಜರಾತ್ ಹಾಗೂ ಭಾರತದಲ್ಲಿ ಜಲ ಆಡಳಿತ ವಿಕಸನಗೊಂಡ ಹಾದಿಯನ್ನು ಸಮಗ್ರವಾಗಿ ದಾಖಲಿಸಿರುವ ‘ಫ್ರಮ್ ಗುಜರಾತ್ ಟು ಇಂಡಿಯಾ: ವಾಟರ್ ಲೆಸನ್ಸ್ ಫಾರ್ ದಿ ವರ್ಲ್ಡ್’ (ಗುಜರಾತ್‌ನಿಂದ ಭಾರತಕ್ಕೆ: ಜಗತ್ತಿಗಾಗಿ ನೀರಿನ ಪಾಠಗಳು) ಎಂಬ ಶೀರ್ಷಿಕೆಯ ನೂತನ ಅಧ್ಯಯನ ವರದಿಯನ್ನು ನಗರದ ಪ್ರತಿಷ್ಠಿತ ಐಐಎಂ ಬೆಂಗಳೂರು ಕ್ಯಾಂಪಸ್‌ನಲ್ಲಿ ಇಂದು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಜಾಗತಿಕ ದಕ್ಷಿಣದ (ಗ್ಲೋಬಲ್ ಸೌತ್) ರಾಷ್ಟ್ರಗಳ ನೀತಿ ನಿರೂಪಕರು ಹಾಗೂ ಕ್ಷೇತ್ರ ಕಾರ್ಯಕರ್ತರಿಗೆ ಭಾರತದ ಅನುಭವದಿಂದ ದಕ್ಕಿದ ಮಹತ್ವದ ಪಾಠಗಳನ್ನು ಈ ವರದಿಯು ಮುಂದಿಟ್ಟಿದೆ. ಜಾರ್ಜ್ ಮೇಸನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡೇನಿಯಲ್ ಡಬ್ಲ್ಯು. ಸ್ಮಿತ್, ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್‌ಮೆಂಟ್ ಅಂಡ್ ವಾಟರ್ (ಸಿಇಇಡಬ್ಲ್ಯೂ) ಫೆಲೋ ನಿತಿನ್ ಬಸ್ಸಿ ಹಾಗೂ ಭಾರತ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಾಜಿ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ಅವರು ಜಂಟಿಯಾಗಿ ಈ ಮಹತ್ವದ ಅಧ್ಯಯನವನ್ನು ಸಿದ್ಧಪಡಿಸಿದ್ದಾರೆ.

2001 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರ ನೇತೃತ್ವದಲ್ಲಿ ಆರಂಭವಾದ 25 ವರ್ಷಗಳ ಪಯಣವನ್ನು ಈ ಅಧ್ಯಯನವು ದಾಖಲಿಸಿದೆ. ಆ ಸಮಯದಲ್ಲಿ ನಿರಂತರ ಬರಗಾಲ ಮತ್ತು ನೀರಿನ ತೀವ್ರ ಅಭಾವವು ಬೃಹತ್ ಪ್ರಮಾಣದ ಮೂಲಸೌಕರ್ಯ, ಅಂತರ್ಜಲ ಮರುಪೂರಣ, ಜಲ ಸಂರಕ್ಷಣೆ, ಸುಧಾರಿತ ನೀರಿನ ಬಳಕೆಯ ದಕ್ಷತೆ, ಸಾಂಸ್ಥಿಕ ಸುಧಾರಣೆ ಹಾಗೂ ಸಮುದಾಯದ ಸಹಭಾಗಿತ್ವದ ಸಮನ್ವಯಕ್ಕೆ ನಾಂದಿ ಹಾಡಿತು. 2001 ರಿಂದ 2014 ರವರೆಗೆ ಗುಜರಾತ್‌ನಲ್ಲಿ ಕೈಗೊಂಡ ಜಲ ಆಡಳಿತ ಸುಧಾರಣೆಗಳು, ನಂತರ 2014 ರ ಬಳಿಕ ರಾಷ್ಟ್ರಮಟ್ಟದಲ್ಲಿ ವಿಸ್ತರಿಸಲಾದ ನೀತಿ ಮತ್ತು ವಿಧಾನಗಳಿಗೆ ಒಂದು ರೀತಿಯಲ್ಲಿ ಪ್ರಯೋಗಾಲಯವಾಗಿ ಕಾರ್ಯನಿರ್ವಹಿಸಿದವು ಎಂದು ವರದಿ ಬಣ್ಣಿಸಿದೆ.

ಈ ಆಡಳಿತಾತ್ಮಕ ಪರಿವರ್ತನೆಯ ಪ್ರಮಾಣವು ಹಣಕಾಸಿನ ಹೂಡಿಕೆ ಹಾಗೂ ಸಾರ್ವಜನಿಕರಿಗೆ ಸಿಕ್ಕ ಸೌಲಭ್ಯ ಎರಡರಲ್ಲೂ ಎದ್ದು ಕಾಣುತ್ತದೆ. ಒಕ್ಕೂಟ ಸರ್ಕಾರದ ಒಟ್ಟು ಬಜೆಟ್‌ನಲ್ಲಿ 2001-02 ರಲ್ಲಿ ಜಲ ವಲಯಕ್ಕೆ ಮೀಸಲಿದ್ದ ಹಂಚಿಕೆ ಕೇವಲ ಶೇ. 0.8 ರಷ್ಟಿತ್ತು, ಅದು 2025-26 ರ ಸಾಲಿಗೆ ಶೇ. 2.2 ಕ್ಕೆ ಗಣನೀಯವಾಗಿ ಏರಿಕೆಯಾಗಿದೆ ಎಂಬುದು ಈ ಅಧ್ಯಯನದ ಪ್ರಮುಖ ಸಂಶೋಧನೆಗಳಲ್ಲಿ ಒಂದಾಗಿದೆ. ಇನ್ನು, 2000 ನೇ ಇಸವಿಗೆ ಹೋಲಿಸಿದರೆ, ಇಂದು ದೇಶದ ಗ್ರಾಮೀಣ ಭಾಗದಲ್ಲಿ ಬರೋಬ್ಬರಿ 46.4 ಕೋಟಿಗೂ (464 ಮಿಲಿಯನ್) ಹೆಚ್ಚು ಜನರು ಸುರಕ್ಷಿತ ಹಾಗೂ ವ್ಯವಸ್ಥಿತ ಕುಡಿಯುವ ನೀರನ್ನು ಬಳಸುತ್ತಿದ್ದಾರೆ. ಜತೆಗೆ ಗ್ರಾಮೀಣ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸುವ ಪ್ರಮಾಣವು 2019 ರಲ್ಲಿ ಶೇ. 17 ರಷ್ಟಿದ್ದುದು 2026 ರ ಹೊತ್ತಿಗೆ ಶೇ. 80 ಕ್ಕಿಂತಲೂ ಅಧಿಕ ಮಟ್ಟಕ್ಕೆ ತಲುಪಿದೆ.

ಗುಜರಾತ್ ಕೈಗೊಂಡ ಪರಿಹಾರ ಕಾರ್ಯಗಳಲ್ಲಿ ನರ್ಮದಾ ಆಧಾರಿತ ಬೃಹತ್ ವಾಟರ್ ಗ್ರಿಡ್, ವಾಸ್ಮೊ ನಂತಹ ಸಂಸ್ಥೆಗಳು ಮತ್ತು ಗ್ರಾಮ ಮಟ್ಟದ ಪಾನಿ ಸಮಿತಿಗಳು ಪ್ರಮುಖ ಪಾತ್ರ ವಹಿಸಿದವು; ಇದರೊಂದಿಗೆ ಬೃಹತ್ ಪ್ರಮಾಣದ ಜಲ ಸಂರಕ್ಷಣೆ ಹಾಗೂ ಅಂತರ್ಜಲ ಮರುಪೂರಣ ಕಾರ್ಯಗಳೂ ಜೊತೆಗೂಡಿದವು. 2013 ರ ವೇಳೆಗೆ, ಸರ್ದಾರ್ ಪಟೇಲ್ ಜಲ ಸಂರಕ್ಷಣಾ ಯೋಜನೆಯಡಿಯಲ್ಲಿ ರಾಜ್ಯವೊಂದರಲ್ಲೇ 76,000 ಕ್ಕೂ ಹೆಚ್ಚು ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಲಾಗಿತ್ತು. ಈ ಯಶಸ್ವಿ ಅನುಭವದ ಸೂತ್ರಗಳೇ ಮುಂದೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲ್ ಜೀವನ್ ಮಿಷನ್, ಜಲ್ ಶಕ್ತಿ ಅಭಿಯಾನ, ನಮಾಮಿ ಗಂಗೆ, ಅಟಲ್ ಭೂಜಲ್ ಯೋಜನೆ, ಪರ್ ಡ್ರಾಪ್ ಮೋರ್ ಕ್ರಾಪ್ ಹಾಗೂ ಅಮೃತ್ ಮುಂತಾದ ರಾಷ್ಟ್ರೀಯ ಯೋಜನೆಗಳಿಗೆ ಅಡಿಪಾಯ ಒದಗಿಸಿದವು ಎಂದು ಅಧ್ಯಯನ ವಿಶ್ಲೇಷಿಸಿದೆ. 2019 ರಲ್ಲಿ ಕೇಂದ್ರ ಜಲ ಶಕ್ತಿ ಸಚಿವಾಲಯದ ಉದಯವು ಕುಡಿಯುವ ನೀರು, ನೈರ್ಮಲ್ಯ ಹಾಗೂ ಜಲಸಂಪನ್ಮೂಲ ನಿರ್ವಹಣೆಗೆ ಏಕೀಕೃತ ಸಾಂಸ್ಥಿಕ ಬಲವನ್ನು ನೀಡಿತು.

*ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಕೇಂದ್ರ ಜಲ ಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಶ್ರೀ ಅಶೋಕ್ ಕೆ. ಮೀನಾ ಅವರು* , “ದೇಶದ ಪ್ರತಿಯೊಬ್ಬ ನಾಗರಿಕನಿಗೂ ನೀರನ್ನು ಖಾತರಿಪಡಿಸುವುದು ಸಚಿವಾಲಯದ ಪ್ರಮುಖ ಆದ್ಯತೆಯಾಗಿದೆ. ಬಲಿಷ್ಠ ಸಂಸ್ಥೆಗಳು, ನಿರಂತರ ಬಂಡವಾಳ ಹೂಡಿಕೆ ಹಾಗೂ ಗ್ರಾಮ ಪಂಚಾಯತ್ ಮಾಲೀಕತ್ವದ ಬೆಂಬಲದೊಂದಿಗೆ ನೀರು ಜನರ ಆಂದೋಲನವಾಗಿ ರೂಪುಗೊಂಡಾಗ, ವ್ಯಾಪಕ ಮಟ್ಟದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ ಎಂಬುದೇ ನಮಗೆ ಸದಾ ದೊರೆತ ಮುಖ್ಯ ಪಾಠ. ಒಂದು ರಾಜ್ಯದಲ್ಲಿ ಮೊಳಕೆಯೊಡೆದ ಈ ಪರಿಕಲ್ಪನೆ ಇಂದು ರಾಷ್ಟ್ರೀಯ ಬದ್ಧತೆಯಾಗಿ ಪರಿವರ್ತನೆಗೊಂಡಿದೆ. ದೇಶದ ಪ್ರತಿಯೊಂದು ಮನೆಗೂ ಸುರಕ್ಷಿತ ಹಾಗೂ ವಿಶ್ವಾಸಾರ್ಹ ನೀರು ತಲುಪುವವರೆಗೂ ನಮ್ಮ ಕಾರ್ಯ ನಿರಂತರವಾಗಿ ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದರು.

ನೀರಿನ ಭದ್ರತೆಯು ಕೇವಲ ಎಂಜಿನಿಯರಿಂಗ್ ಸವಾಲಷ್ಟೇ ಅಲ್ಲ, ಅದು ಆಡಳಿತಾತ್ಮಕ ಸವಾಲೂ ಹೌದು ಎಂಬುದು ಈ ಅಧ್ಯಯನದ ಕೇಂದ್ರ ತೀರ್ಮಾನವಾಗಿದೆ. ಯಾವುದೇ ಭೌತಿಕ ಮೂಲಸೌಕರ್ಯವು ಯಶಸ್ವಿಯಾಗಬೇಕಾದರೆ 4ಪಿ ಸೂತ್ರಗಳಾದ- ರಾಜಕೀಯ ನಾಯಕತ್ವ (ಪೊಲಿಟಿಕಲ್ ಲೀಡರ್ ಶಿಪ್), ಸಾರ್ವಜನಿಕ ಹಣಕಾಸು (ಪಬ್ಲಿಕ್ ಫೈನಾನ್ಸಿಂಗ್), ಸಹಭಾಗಿತ್ವ/ ಪಾಲುದಾರಿಕೆ (ಪಾರ್ಟನರ್ ಶಿಪ್) ಮತ್ತು ಸಾರ್ವಜನಿಕರ ಸಹಭಾಗಿತ್ವ (ಪೀಪಲ್ಸ್ ಪಾರ್ಟಿಸಿಪೇಷನ್) ಇವುಗಳ ಬಲವಾದ ಬೆಂಬಲ ಅತ್ಯಗತ್ಯ ಎಂದು ವರದಿ ಹೇಳಿದೆ. ಈ ಪಾಠಗಳ ಬೀಜಗಳನ್ನು 2001 ರಲ್ಲಿ ಗುಜರಾತ್‌ನಲ್ಲಿ ಬಿತ್ತಲಾಯಿತು ಮತ್ತು ನಂತರ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೇಶಾದ್ಯಂತ ವ್ಯಾಪಕವಾಗಿ ವಿಸ್ತರಿಸಲಾಯಿತು.

*ಭಾರತ ಸರ್ಕಾರದ ಮಾಜಿ ಕಾರ್ಯದರ್ಶಿ ಹಾಗೂ ವರದಿಯ ಸಹ-ಲೇಖಕ ಪರಮೇಶ್ವರನ್ ಅಯ್ಯರ್ ಅವರು ಮಾತನಾಡಿ,* “ಇಂತಹ ಬೃಹತ್ ಪ್ರಮಾಣದಲ್ಲಿ ನೀರನ್ನು ಪೂರೈಸುವುದು ಕೆಲವು ಅಂಶಗಳನ್ನು ನಿರಂತರವಾಗಿ ಜಾರಿಗೆ ತರುವುದರ ಮೇಲೆ ನಿಂತಿದೆ, ಅವುಗಳೆಂದರೆ ದೃಢ ರಾಜಕೀಯ ನಾಯಕತ್ವ ಮತ್ತು ಆದ್ಯತೆ, ಸ್ಪಷ್ಟ ಹೊಣೆಗಾರಿಕೆ ಹೊಂದಿರುವ ಸಾಂಸ್ಥಿಕ ವ್ಯವಸ್ಥೆ ಹಾಗೂ ತಮ್ಮ ಜಲ ಮೂಲಗಳ ಸರಬರಾಜನ್ನು ತಾವೇ ಮುನ್ನಡೆಸುವ ಸಮುದಾಯಗಳು” ಎಂದು ಅಭಿಪ್ರಾಯಪಟ್ಟರು.

ಭವಿಷ್ಯದ ದೃಷ್ಟಿಕೋನವನ್ನು ಪ್ರಸ್ತಾಪಿಸಿರುವ ವರದಿಯು, ವಿಶ್ವಾಸಾರ್ಹ ಸೇವಾ ಪೂರೈಕೆ, ನೀರಿನ ಗುಣಮಟ್ಟ, ಜಲ ಮೂಲಗಳ ಸುಸ್ಥಿರತೆ, ಅಂತರ್ಜಲ ಮರುಪೂರಣ, ಜಲ ಬಳಕೆಯ ದಕ್ಷತೆ ಹಾಗೂ ಬಳಸಿದ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುವ ವೃತ್ತಾಕಾರದ ಜಲ ಆರ್ಥಿಕತೆಯ ಮೂಲಕ ಭಾರತದ ಈವರೆಗಿನ ಸಾಧನೆಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ವಿಪುಲ ಅವಕಾಶಗಳಿವೆ ಎಂದು ಬೆಟ್ಟುಮಾಡಿದೆ.

*ಐಐಎಂ ಬೆಂಗಳೂರಿನ ಸಾರ್ವಜನಿಕ ನೀತಿ ಕೇಂದ್ರದ (ಸಿಪಿಪಿ) ಅಧ್ಯಕ್ಷರು, ಹಿರಿಯ ಫೆಲೋ ಹಾಗೂ ಜಲ್ ಜೀವನ್ ಮಿಷನ್ ಚೇರ್ ಪ್ರೊಫೆಸರ್ ಆದ ಪ್ರೊಫೆಸರ್ ಗೋಪಾಲ್ ನಾಯ್ಕ್ ಅವರು ಮಾತನಾಡಿ* , “ಈ ಮಹತ್ವದ ಅಧ್ಯಯನ ವರದಿಯ ಲೋಕಾರ್ಪಣೆಗೆ ಆತಿಥ್ಯ ವಹಿಸಿರುವುದು ಐಐಎಂ ಬೆಂಗಳೂರಿಗೆ ಹೆಮ್ಮೆಯ ವಿಷಯ. ಬೃಹತ್ ಪ್ರಮಾಣದಲ್ಲಿ ನೀರು ಒದಗಿಸುವುದು ಒಂದು ಸವಾಲಾದರೆ, ಅದನ್ನು ನಿರಂತರವಾಗಿ ಸುಸ್ಥಿರವಾಗಿಡುವುದು ಮತ್ತೊಂದು ದೊಡ್ಡ ಸವಾಲು. ಈ ವರದಿಯು ಗುಜರಾತ್ ಹಾಗೂ ಸಮಗ್ರ ಭಾರತದ 25 ವರ್ಷಗಳ ಅನುಭವಗಳನ್ನು ಒಂದೆಡೆ ಸೇರಿಸಿ, ಯಾವುದು ಯಶಸ್ವಿಯಾಗಿದೆ ಮತ್ತು ಮುಂದಿನ ಹೆಜ್ಜೆ ಏನಿರಬೇಕು ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಡುತ್ತದೆ. ಆಡಳಿತ, ಸಮುದಾಯದ ಮಾಲೀಕತ್ವ ಹಾಗೂ ಮಹತ್ವಾಕಾಂಕ್ಷೆಯ ಕುರಿತಾದ ಇದರ ಪಾಠಗಳು ಅತ್ಯಂತ ಪ್ರಾಯೋಗಿಕವಾಗಿವೆ. ಜಲ ವ್ಯವಸ್ಥೆಯನ್ನು ನಿರ್ಮಿಸುವುದು ಒಂದು ಹಂತವಾದರೆ, ಅದನ್ನು ಸುಸ್ಥಿರವಾಗಿ ಮುನ್ನಡೆಸುವುದು ಇನ್ನೊಂದು ಹಂತ. 25 ವರ್ಷಗಳ ಪುರಾವೆಗಳು ಯಾವುದು ದೀರ್ಘಕಾಲ ಬಾಳಿಕೆ ಬಂತು ಮತ್ತು ಏಕೆ ಎಂಬುದನ್ನು ಪರಾಮರ್ಶಿಸಲು ನಮಗೆ ನೆರವಾಗುತ್ತವೆ” ಎಂದರು.

*ಸಿಇಇಡಬ್ಲ್ಯೂ ಫೆಲೋ ಹಾಗೂ ಸಹ-ಲೇಖಕ ಡಾ. ನಿತಿನ್ ಬಸ್ಸಿ ಅವರು ಮಾತನಾಡಿ,* “ಭಾರತದ ಜಲ ಭದ್ರತೆಯ ಮುಂದಿನ ಹಂತವು ವೃತ್ತಾಕಾರದ ಜಲ ಆರ್ಥಿಕತೆಗೆ ಆದ್ಯತೆ ನೀಡುವುದನ್ನು ಒಳಗೊಂಡಿರಲಿದೆ. ಇದರಲ್ಲಿ ಸಂಸ್ಕರಿಸಿದ ಬಳಕೆಯಾದ ನೀರಿನ ಗರಿಷ್ಠ ಹಾಗೂ ಸೂಕ್ತ ಮರುಬಳಕೆಯು ಸೇರಿದ್ದು, ಇದು ಆರ್ಥಿಕವಾಗಿಯೂ ಅತ್ಯಂತ ಮಹತ್ವದ ಅವಕಾಶವಾಗಿದೆ” ಎಂದು ಹೇಳಿದರು.

ಜಾಗತಿಕ ದಕ್ಷಿಣದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಉಪಯುಕ್ತವಾಗುವಂತೆ ಭಾರತದ ಅನುಭವವನ್ನು ಈ ಅಧ್ಯಯನವು ನಾಲ್ಕು ಮುಖ್ಯ ಪಾಠಗಳಾಗಿ ತಿಳಿಸಿದೆ: ಕೇವಲ ಭೌತಿಕ ಹಾರ್ಡ್‌ವೇರ್‌ಗಿಂತ ಆಡಳಿತಕ್ಕೆ ಮುಂಚೂಣಿ ಆದ್ಯತೆ ನೀಡಿ, ಜಲಸಂಪನ್ಮೂಲ ಹಾಗೂ ಜಲ ಸೇವೆ -ಎರಡನ್ನೂ ಒಟ್ಟಾಗಿ ನಿರ್ವಹಿಸಿ, ಯೋಜನೆಗಳಲ್ಲಿ ಸಮುದಾಯದ ಮಾಲೀಕತ್ವವನ್ನು ಬೇರೂರಿಸಿ ಮತ್ತು ಬಲವಾದ ರಾಜಕೀಯ ಇಚ್ಛಾಶಕ್ತಿ, ಹಣಕಾಸು ಹಾಗೂ ಆಡಳಿತಾತ್ಮಕ ದಕ್ಷತೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮಹತ್ವಾಕಾಂಕ್ಷೆಯ ಗುರಿಗಳನ್ನು ತಲುಪಲು ದೊಡ್ಡ ಮಟ್ಟದಲ್ಲಿ ಮುನ್ನಡೆಯಿರಿ.

*ಜಾರ್ಜ್ ಮೇಸನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹಾಗೂ ಸಹ-ಲೇಖಕ ಡೇನಿಯಲ್ ಡಬ್ಲ್ಯು. ಸ್ಮಿತ್ ಅವರು ಮಾತನಾಡಿ,* “ಭಾರತದ ಜಲ ಪಯಣವು ದೇಶದ ಗಡಿಗಳನ್ನು ಮೀರಿ ಜಾಗತಿಕ ಮಟ್ಟದಲ್ಲೂ ಅಮೂಲ್ಯ ಪಾಠಗಳನ್ನು ಒದಗಿಸುತ್ತದೆ. ಬೃಹತ್ ಪ್ರಮಾಣದಲ್ಲಿ ಜಲ ಭದ್ರತೆ ಸಾಧಿಸಲು ಬಲಿಷ್ಠ ಜಲ ಆಡಳಿತ ವ್ಯವಸ್ಥೆ ಅನಿವಾರ್ಯ ಎಂಬುದೇ ಇದರ ಕೇಂದ್ರ ಸಂದೇಶ. ಸಾರ್ವತ್ರಿಕ ಹಾಗೂ ಸುಸ್ಥಿರ ಜಲ ಭದ್ರತೆಯ ಸಾಕಾರಕ್ಕಾಗಿ ಶ್ರಮಿಸುತ್ತಿರುವ ಜಗತ್ತಿನ ನಾನಾ ರಾಷ್ಟ್ರಗಳು ಈ ಆಡಳಿತಾತ್ಮಕ ಪಾಠಗಳಿಂದ ಕಲಿಯಬಹುದು ಮತ್ತು ತಮ್ಮದೇ ಆದ ದೇಶೀಯ ಸನ್ನಿವೇಶಗಳಿಗೆ ತಕ್ಕಂತೆ ಇವುಗಳನ್ನು ಅಳವಡಿಸಿಕೊಳ್ಳಬಹುದು” ಎಂದು ಅಭಿಪ್ರಾಯಪಟ್ಟರು.

ವರದಿ ಬಿಡುಗಡೆಯ ಬಳಿಕ ಐಐಎಂ ಬೆಂಗಳೂರಿನ ಪ್ರೊಫೆಸರ್ ಗೋಪಾಲ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಪ್ಯಾನೆಲ್ ಡಿಸ್ಕಷನ್ ನಡೆಯಿತು. ಇದರಲ್ಲಿ ವರದಿಯ ಲೇಖಕರು, ಜಲ ತಜ್ಞರು ಹಾಗೂ ನೀತಿ ನಿರೂಪಕರು ಭಾಗವಹಿಸಿ ವಿಚಾರ ವಿನಿಮಯ ನಡೆಸಿದರು.

ವಿಶಾಲವಾದ ಗ್ರಾಮೀಣ ಜನಸಂಖ್ಯೆ, ತೀವ್ರಗತಿಯಲ್ಲಿ ಬೆಳೆಯುತ್ತಿರುವ ನಗರಗಳು, ಹವಾಮಾನ ವೈವಿಧ್ಯತೆ ಹಾಗೂ ಬೃಹತ್ ಅಭಿವೃದ್ಧಿ ಆಕಾಂಕ್ಷೆಗಳನ್ನು ಹೊಂದಿರುವ ಭಾರತದ ಜಲ ಅನುಭವವು, ಪ್ರಾಯೋಗಿಕ ಪಾಠಗಳು ಮತ್ತು ಕಾರ್ಯತಂತ್ರಗಳ ಸಮೃದ್ಧ ಗಣಿಯಾಗಿದೆ. ಇತರ ದೇಶಗಳು ತಮ್ಮದೇ ಭೌಗೋಳಿಕ ಸನ್ನಿವೇಶಕ್ಕೆ ಅನುಗುಣವಾಗಿ ಇವುಗಳನ್ನು ಅಳವಡಿಸಿಕೊಳ್ಳಲು ಹಾಗೂ ಅಭಿವೃದ್ಧಿಪಡಿಸಲು ಸಾಧ್ಯವಿದ್ದು, ಜಾಗತಿಕ ದಕ್ಷಿಣದ ದೇಶಗಳಿಗೆ ಭಾರತದ ಪಯಣ ಅತ್ಯಂತ ಪ್ರಸ್ತುತವಾಗಿದೆ ಎಂದು ವರದಿ ಸಾರಿದೆ.

‘ಫ್ರಮ್ ಗುಜರಾತ್ ಟು ಇಂಡಿಯಾ: ವಾಟರ್ ಲೆಸನ್ಸ್ ಫಾರ್ ದಿ ವರ್ಲ್ಡ್’ ಅಧ್ಯಯನ ವರದಿಯನ್ನು ಡೇನಿಯಲ್ ಡಬ್ಲ್ಯು. ಸ್ಮಿತ್, ನಿತಿನ್ ಬಸ್ಸಿ ಮತ್ತು ಪರಮೇಶ್ವರನ್ ಅಯ್ಯರ್ ಅವರು ರಚಿಸಿದ್ದು, ಜಾರ್ಜ್ ಮೇಸನ್ ವಿಶ್ವವಿದ್ಯಾಲಯ ಹಾಗೂ ಗೇಟ್ಸ್ ಫೌಂಡೇಶನ್ ಜಂಟಿಯಾಗಿ ಪ್ರಕಟಿಸಿವೆ.

Previous Post

ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರಿಗೆ ಎಫ್‌ಐಸಿಸಿಐ ‘ಲೆಜೆಂಡರಿ ಇನ್‌ಸ್ಟಿಟ್ಯೂಷನ್ ಬಿಲ್ಡರ್ ಅವಾರ್ಡ್ 2026’ ಗೌರವ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಭಾರತದ 25 ವರ್ಷಗಳ ಜಲ ಆಡಳಿತ ಪಯಣ: ಗುಜರಾತ್‌ನಿಂದ ಆರಂಭಿಸಿ ರಾಷ್ಟ್ರಮಟ್ಟದ ಸಾಧನೆ ಬಿಂಬಿಸುವ ನೂತನ ಅಧ್ಯಯನ ವರದಿ ಬಿಡುಗಡೆ

ಭಾರತದ 25 ವರ್ಷಗಳ ಜಲ ಆಡಳಿತ ಪಯಣ: ಗುಜರಾತ್‌ನಿಂದ ಆರಂಭಿಸಿ ರಾಷ್ಟ್ರಮಟ್ಟದ ಸಾಧನೆ ಬಿಂಬಿಸುವ ನೂತನ ಅಧ್ಯಯನ ವರದಿ ಬಿಡುಗಡೆ

10/10/2026
ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರಿಗೆ ಎಫ್‌ಐಸಿಸಿಐ ‘ಲೆಜೆಂಡರಿ ಇನ್‌ಸ್ಟಿಟ್ಯೂಷನ್ ಬಿಲ್ಡರ್ ಅವಾರ್ಡ್ 2026’ ಗೌರವ

ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರಿಗೆ ಎಫ್‌ಐಸಿಸಿಐ ‘ಲೆಜೆಂಡರಿ ಇನ್‌ಸ್ಟಿಟ್ಯೂಷನ್ ಬಿಲ್ಡರ್ ಅವಾರ್ಡ್ 2026’ ಗೌರವ

10/10/2026
ಉಡುಪಿ ದಸರಾ 2026: ಇಂದು ಸಂಜೆ ವಿದ್ಯುದ್ದೀಪಾಲಂಕಾರ ಉದ್ಘಾಟನೆ 

ಉಡುಪಿ ದಸರಾ 2026: ಇಂದು ಸಂಜೆ ವಿದ್ಯುದ್ದೀಪಾಲಂಕಾರ ಉದ್ಘಾಟನೆ 

10/10/2026
ಕಾರ್ಕಳ ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಮಹಿಳಾ ಮೋರ್ಚಾ ಖಂಡನೆ; ಜಿಲ್ಲಾಧಿಕಾರಿಗೆ ಮನವಿ

ಕಾರ್ಕಳ ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಮಹಿಳಾ ಮೋರ್ಚಾ ಖಂಡನೆ; ಜಿಲ್ಲಾಧಿಕಾರಿಗೆ ಮನವಿ

10/10/2026

Recent News

ಭಾರತದ 25 ವರ್ಷಗಳ ಜಲ ಆಡಳಿತ ಪಯಣ: ಗುಜರಾತ್‌ನಿಂದ ಆರಂಭಿಸಿ ರಾಷ್ಟ್ರಮಟ್ಟದ ಸಾಧನೆ ಬಿಂಬಿಸುವ ನೂತನ ಅಧ್ಯಯನ ವರದಿ ಬಿಡುಗಡೆ

ಭಾರತದ 25 ವರ್ಷಗಳ ಜಲ ಆಡಳಿತ ಪಯಣ: ಗುಜರಾತ್‌ನಿಂದ ಆರಂಭಿಸಿ ರಾಷ್ಟ್ರಮಟ್ಟದ ಸಾಧನೆ ಬಿಂಬಿಸುವ ನೂತನ ಅಧ್ಯಯನ ವರದಿ ಬಿಡುಗಡೆ

10/10/2026
ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರಿಗೆ ಎಫ್‌ಐಸಿಸಿಐ ‘ಲೆಜೆಂಡರಿ ಇನ್‌ಸ್ಟಿಟ್ಯೂಷನ್ ಬಿಲ್ಡರ್ ಅವಾರ್ಡ್ 2026’ ಗೌರವ

ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರಿಗೆ ಎಫ್‌ಐಸಿಸಿಐ ‘ಲೆಜೆಂಡರಿ ಇನ್‌ಸ್ಟಿಟ್ಯೂಷನ್ ಬಿಲ್ಡರ್ ಅವಾರ್ಡ್ 2026’ ಗೌರವ

10/10/2026
ಉಡುಪಿ ದಸರಾ 2026: ಇಂದು ಸಂಜೆ ವಿದ್ಯುದ್ದೀಪಾಲಂಕಾರ ಉದ್ಘಾಟನೆ 

ಉಡುಪಿ ದಸರಾ 2026: ಇಂದು ಸಂಜೆ ವಿದ್ಯುದ್ದೀಪಾಲಂಕಾರ ಉದ್ಘಾಟನೆ 

10/10/2026
ಕಾರ್ಕಳ ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಮಹಿಳಾ ಮೋರ್ಚಾ ಖಂಡನೆ; ಜಿಲ್ಲಾಧಿಕಾರಿಗೆ ಮನವಿ

ಕಾರ್ಕಳ ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಮಹಿಳಾ ಮೋರ್ಚಾ ಖಂಡನೆ; ಜಿಲ್ಲಾಧಿಕಾರಿಗೆ ಮನವಿ

10/10/2026
imunify-bot-check